Advertisement

Kasaragod ಅಪರಾಧ ಸುದ್ದಿಗಳು

08:27 PM Oct 30, 2024 | Team Udayavani |

ಪಟಾಕಿ ದುರಂತ: ಮೂವರ ಬಂಧನ; ಇನ್ನೋರ್ವ ಪೊಲೀಸರ ವಶಕ್ಕೆ
ಕಾಸರಗೋಡು: ನೀಲೇಶ್ವರ ಅಂಞಾಟಂಬಲ ಶ್ರೀ ವೀರರ್‌ ಕಾವ್‌ ದೈವಸ್ಥಾನದಲ್ಲಿ ದೈವಗಳ ಕಳಿಯಾಟ ಮಹೋತ್ಸವ ಸಂದರ್ಭ ಅ. 28ರಂದು ರಾತ್ರಿ ಸಂಭವಿಸಿದ ಪಟಾಕಿ ದುರಂತಕ್ಕೆ ಸಂಬಂಧಿಸಿ ದೈವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರನ್‌, ಕಾರ್ಯದರ್ಶಿ ಭರತನ್‌ ಮತ್ತು ಪಟಾಕಿ ಸಿಡಿಸಿದ ಪಿ. ರಾಜೇಶ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯನ್‌ ತೈಕಡಪ್ಪುರಂ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಪಟಾಕಿ ಸಿಡಿಸುವ ಹೊಣೆ ವಹಿಸಿಕೊಂಡ ವಿಜಯನ್‌ ಆ ಕೆಲಸವನ್ನು ರಾಜೇಶ್‌ಗೆ ವಹಿಸಿಕೊಟ್ಟಿದ್ದರೆನ್ನಲಾಗಿದೆ. ಪಿ.ವಿ. ಭಾಸ್ಕರನ್‌, ತಂಬಾನ್‌, ಬಾಬು, ಚಂದ್ರನ್‌, ಶಶಿ ವಿರುದ್ಧ ಕೇಸು ದಾಖಲಿಸಲಾಗಿದೆ. ದುರಂತದಲ್ಲಿ 154 ಮಂದಿ ಗಾಯಗೊಂಡಿದ್ದು, 10 ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ದುರಂತ ಸಂಬಂಧ ಡಿವೈಎಸ್‌ಪಿ ಬಾಬು ಪೆರಿಂಙೊàತ್‌ ನೇತೃತ್ವದಲ್ಲಿರುವ ಪ್ರತ್ಯೇಕ ಪೊಲೀಸ್‌ ತಂಡ ತನಿಖೆ ನಡೆಸುತ್ತಿದೆ.

ಉದ್ಯೋಗ ವಂಚನೆ: ಸಚಿತಾ ರೈ; ವಿರುದ್ಧ ಇನ್ನೊಂದು ಪ್ರಕರಣ
ಕಾಸರಗೋಡು: ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೊಗ್ರಾಲ್‌ ಪುತ್ತೂರು ಕಡಲತ್‌ನ ನಫೀಸತ್‌ ಶಿಫಾಬ ನೀಡಿದ ದೂರಿನಂತೆ ಡಿವೈಎಫ್‌ಐ ಮಾಜಿ ನೇತಾರೆ, ಶೇಣಿ ಬಲ್ತಕಲ್ಲುವಿನ ಸಚಿತಾ ರೈ (27) ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸಿಪಿಸಿಆರ್‌ಐಯಲ್ಲಿ ಉದ್ಯೋಗ ಭರವಸೆ ನೀಡಿ 1.40 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಸಚಿತಾ ವಿರುದ್ಧ ವಿವಿಧ ಠಾಣೆಗಳಲ್ಲಾಗಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 16 ಕ್ಕೇರಿವೆ. ಸಚಿತಾ ಕಣ್ಣೂರು ಸೆಂಟ್ರಲ್‌ ಜೈಲಿನಲ್ಲಿದ್ದಾಳೆ.

ವೃದ್ಧಾಶ್ರಮದಲ್ಲಿ ವ್ಯಕ್ತಿ ಸಾವು
ಕಾಸರಗೋಡು: ಪಡುವಡ್ಕದಲ್ಲಿರುವ ಕಾಸರಗೋಡು ವೃದ್ಧ ಮಂದಿರದಲ್ಲಿ ವಾಸಿಸುವ ಆ್ಯಂಟನಿ (92) ಮೃತಪಟ್ಟಿದ್ದಾರೆ. ಅವರು ಪರಪ್ಪ ದರ್ಖಾಸ್‌ ತೂಂಞ ವಯಲಿಲ್‌ ಎಂಬ ವಿಳಾಸ ನೀಡಿ ವೃದ್ಧಾಶ್ರಮಕ್ಕೆ ಸೇರಿದ್ದರು. ಮೃತದೇಹವನ್ನು ಜನರಲ್‌ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ವೃದ್ಧ ಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.

Advertisement

ಮದ್ಯ ಸಹಿತ ಬಂಧನ
ಕಾಸರಗೋಡು: ನಗರದ ನೆಲ್ಲಿಕುಂಜೆ ಪಿ.ಎಸ್‌. ಗುಡ್ಡೆ ಪರಿಸರದಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 336 ಟೆಟ್ರಾ ಪ್ಯಾಕೆಟ್‌ ಮದ್ಯವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ನೆಲ್ಲಿಕುಂಜೆ ಪಿ.ಎಸ್‌. ಗುಡ್ಡೆ ನಿವಾಸಿ ಸತೀಶ್‌ ಎನ್‌. ಎಂಬಾತನನ್ನು ಬಂಧಿಸಲಾಗಿದೆ.

ಶಾಲಾ ಕಲೋತ್ಸವ: ದಾಂಧಲೆ ನಡೆಸಿದ ಆರೋಪಿಯ ಸೆರೆ
ಕಾಸರಗೋಡು: ತಳಂಗರೆ ಸರಕಾರಿ ಮುಸ್ಲಿಂ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಕಲೋತ್ಸವದ ಕೊನೆಯ ದಿನ ದಾಂಧಲೆ ನಡೆಸಿ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರಠಾಣೆ ವ್ಯಾಪ್ತಿಯ ಮುಹಮ್ಮದ್‌ ಶಿಹ್‌ಬಾನ್‌ (19)ನನ್ನು ಪೊಲೀಸರು ಬಂಧಿಸಿದ್ದಾರೆ.
ಅ. 9ರಂದು ಸಂಜೆ ಶಿಹ್‌ಬಾನ್‌ ನೇತೃತ್ವದಲ್ಲಿ 20ರಷ್ಟು ಮಂದಿ ಶಾಲೆಗೆ ಅಕ್ರಮವಾಗಿ ನುಗ್ಗಿ ಪಿಟಿಎ ಉಪಾಧ್ಯಕ್ಷ ಹಾಗೂ ಕಚೇರಿಯ ನೌಕರನಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆಗೈದು, ಆಡಿಟೋರಿಯಂಗೆ ನುಗ್ಗಿ ಪಟಾಕಿ ಸಿಡಿಸಿ, ಕಚೇರಿ ಕೊಠಡಿಯ ಕಿಟಕಿ, ಪೀಠೊಪಕರಣಗಳನ್ನು ನಾಶಗೊಳಿಸಿದ್ದಾಗಿ ಪೊಲೀಸರು ಕೇಸು ದಾಖಲಿಸಿದ್ದರು. ಇನ್ನೂ ಹಲವರ ಬಂಧಿನ ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next