Advertisement

Crime News: ಕಾಸರಗೋಡು ಅಪರಾಧ ಸುದ್ದಿಗಳು

07:47 PM May 09, 2024 | Team Udayavani |

ಮಿನಿ ಟೆಂಪೋ ಢಿಕ್ಕಿ: ವ್ಯಕ್ತಿ ಸಾವು: 

Advertisement

ಮಂಜೇಶ್ವರ: ರಸ್ತೆ ದಾಟುತ್ತಿದ್ದ ಮಧ್ಯ ವಯಸ್ಕರೋರ್ವರು ಟೆಂಪೋ ಢಿಕ್ಕಿ ಹೊಡೆದು ಸಾವಿಗೀಡಾದ ಘಟನೆ ನಡೆದಿದೆ.

ಉದ್ಯಾವರ ನಿವಾಸಿ ಅಬ್ದುಲ್‌ ಹಮೀದ್‌ (52) ಮೃತಪಟ್ಟವರು.

ಮೇ 8ರಂದು ರಾತ್ರಿ ಉದ್ಯಾವರ 10ನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡದಾಟುತ್ತಿದ್ದಾಗ ಮಂಗಳೂರು ಭಾಗದಿಂದ ಬಂದ ಮಿನಿ ಟೆಂಪೋ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಟೆಂಪೋವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ.

ಹಿಂದಕ್ಕೆ ಚಲಿಸಿದ ಟಿಪ್ಪರ್‌: ವೃದ್ಧ ಸಾವು: 

Advertisement

ಕಾಸರಗೋಡು: ಹಿಂದಕ್ಕೆ ಚಲಿಸಿದ ಟಿಪ್ಪರ್‌ ಲಾರಿ ಢಿಕ್ಕಿ ಹೊಡೆದು ಕೋಳಿಚ್ಚಾಲ್‌ ಕರೋಟ್‌ಪುರದ ವರ್ಗೀಸ್‌ (96) ಮೃತಪಟ್ಟರು. ಕೋಳಿಚ್ಚಾಲ್‌ ಸೇತುವೆ ನಿರ್ಮಾಣ ನಡೆಯುವ ಸ್ಥಳದಲ್ಲಿ ಮಣ್ಣು ಇಳಿಸಿ ಹಿಂದಕ್ಕೆ ಚಲಿಸಿದ ಟಿಪ್ಪರ್‌ ವರ್ಗೀಸ್‌ ಅವರಿಗೆ ಢಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಅವರನ್ನು ಚೆರುಪುಳದ ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ರೈಲಿನಿಂದ ಬಿದ್ದು ಬಾಲಕನಿಗೆ ಗಾಯ: 

ಕಾಸರಗೋಡು: ಮಂಗಳೂರಿನಿಂದ ಕಣ್ಣೂರಿಗೆ ಸಂಚರಿಸುತ್ತಿದ್ದ ರೈಲು ಗಾಡಿ ಕಳನಾಡು ಸುರಂಗ ದಾಟಿದ ಕೆಲವೇ ಕ್ಷಣದಲ್ಲಿ ತೃಕ್ಕರಿಪುರ ಪರಿಸರದ ನಿವಾಸಿ 17 ವರ್ಷದ ಬಾಲಕ ರೈಲು ಗಾಡಿಯಿಂದ ಬಿದ್ದು ಗಾಯಗೊಂಡಿದ್ದು, ಕಾಸರಗೋಡು ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆ ಮೇಲೆ ಮಗುಚಿದ ಕಾರು ಅಧ್ಯಾಪಕ, ಪತ್ನಿ ಅಪಾಯದಿಂದ ಪಾರು: 

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರೊಂದು ಮನೆ ಮೇಲೆ ಮಗುಚಿ ಬಿದ್ದ ಘಟನೆ ಅಟ್ಟೆಂಗಾನದಲ್ಲಿ ನಡೆದಿದೆ. ಮನೆಯ ಸನ್‌ಶಿàಟ್‌ನಲ್ಲಿ ನೇತಾಡುತ್ತಿದ್ದ ಕಾರಿನಿಂದ ಕೋಡೋಂ ಅಂಬೇಡ್ಕರ್‌ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಅಧ್ಯಾಪಕ ಹರೀಶ್‌ (40) ಮತ್ತು ಪತ್ನಿಯನ್ನು ರಕ್ಷಿಸಲಾಯಿತು. ಕಾರಕ್ಕಡಿಯ ಸುಭಾಶ್‌ ಅವರ ಮನೆ ಮೇಲೆ ಕಾರು ಮಗುಚಿ ಬಿದ್ದಿತ್ತು.

ಬಾಲಕಿಗೆ ಬೆದರಿಕೆ : ಪೋಕ್ಸೋ ಕೇಸು ದಾಖಲು : 

ಕಾಸರಗೋಡು: ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ 16ರ ಹರೆಯದ ಬಾಲಕಿಯನ್ನು ಪುಸಲಾಯಿಸಿ ಆಕೆಯ ನಗ್ನ ಫೋಟೋ ಪಡೆದುಕೊಂಡು ಬ್ಲ್ಯಾಕ್‌ವೆುಮೇಲ್‌ ಹಾಗೂ ಬೆದರಿಕೆ ನೀಡುತ್ತಿದ್ದ ಕಾಸರಗೋಡು ನಿವಾಸಿ ಕೈಲಾಸ್‌ ವಿರುದ್ಧ ನೀಲೇಶ್ವರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next