Advertisement

ಕಾಸರಗೋಡು: ಭಾಗದ ಅಪರಾಧ ಸುದ್ದಿಗಳು

08:40 PM May 11, 2019 | Team Udayavani |

ನೇಣು ಬಿಗಿದು ಆತ್ಮಹತ್ಯೆ
ಬಂದಡ್ಕ: ಮಾಣಿಮೂಲೆ ಉಂದತ್ತಡ್ಕ ನಿವಾಸಿ ದಿ|ಜಾನು ನಾಯ್ಕ ಅವರ ಪುತ್ರ ಬಿ.ಸತೀಶ್‌(35) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

Advertisement

ಉಣ್ಣಿತ್ತಾನ್‌ರ ಚುನಾವಣಾ ಪ್ರಚಾರ
ನಿಧಿಯಿಂದ 5 ಲಕ್ಷ ರೂ. ನಾಪತ್ತೆ
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರ ಚುನಾವಣಾ ಪ್ರಚಾರಕ್ಕಾಗಿ ಲಭಿಸಿದ ದೇಣಿಗೆಯಲ್ಲಿ ಐದು ಲಕ್ಷ ರೂ. ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರೇ ಜಿಲ್ಲಾ ವರಿಷ್ಠ ಪೊಲೀಸ್‌ ಅಧಿಕಾರಿಗೆ ದೂರು ನೀಡಿದ್ದಾರೆ. ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಳಿಕ ಉಣ್ಣಿತ್ತಾನ್‌ ಮೇಲ್ಪರಂಬದ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿಂದ ಈ ಹಣ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಕಿಗೆ ಕಿರುಕುಳಕ್ಕೆ ಯತ್ನ :ಪೋಕೊÕà ಕೇಸು ದಾಖಲು
ಬದಿಯಡ್ಕ: ಹದಿನಾರರ ಹರೆಯದ ಬಾಲಕಿಯನ್ನು ವಿವಿಧೆಡೆಗೆ ಕರೆದೊಯ್ದು ಕಿರುಕುಳ ನೀಡಲೆತ್ನಿಸಿದ ಆರೋಪದಂತೆ ಬದಿಯಡ್ಕ ಪೊಲೀಸರು ಗೋಳಿಯಡ್ಕ ನಿವಾಸಿ ಪ್ರವೀಣ್‌(19) ವಿರುದ್ಧಪೋಕೊÕà ಕೇಸು ದಾಖಲಿಸಿಕೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ.

ಘರ್ಷಣೆ : ಮೂವರಿಗೆ ಗಾಯ
ಪೆರ್ಲ: ಇಡಿಯಡ್ಕದಲ್ಲಿ ಯುವಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ.ಗಾಯಗೊಂಡ ಕನ್ನಟಿಕಾನ ನಿವಾಸಿ ಮೊದು(38)ನನ್ನು ಬದಿಯಡ್ಕದ ಸಿಎಚ್‌ಸಿಯಲ್ಲೂ, ಪೆರ್ಲ ನಿವಾಸಿಗಳಾದ ಸಿದ್ದಿಕ್‌(29) ಮತ್ತು ಅಸೀಸ್‌(31) ಅವರನ್ನು ಚೆಂಗಳದ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕ್ರಿಕೆಟ್‌ ಪಂದ್ಯಕ್ಕೆ ಸಂಬಂಧಿಸಿ ವಿವಾದ ಘರ್ಷಣೆಗೆ ಕಾರಣವೆನ್ನಲಾಗಿದೆ.

Advertisement

ಐ.ಎಸ್‌.ಗೆ ಸೇರ್ಪಡೆ : ಸೌದಿಯಲ್ಲಿ ಬಂಧಿಸಿ ಎನ್‌.ಐ.ಎ.ಗೆ ಹಸ್ತಾಂತರ
ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌)ಗೆ ಕಾಸರಗೋಡು ಜಿಲ್ಲೆಯಿಂದ ಯುವಕರನ್ನು ಸೇರ್ಪಡೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದಾಗಿ ಶಂಕಿಸಿರುವ ಇಬ್ಬರನ್ನು ಸೌದಿ ಅರೇಬಿಯ ಪೊಲೀಸರು ಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಹಸ್ತಾಂತರಿಸಿದೆ.

ಶ್ರೀಲಂಕಾ ಸರಣಿ ಬಾಂಬು ಸ್ಫೋಟ ಪ್ರಕರಣದ ಪ್ರಧಾನ ಸೂತ್ರಧಾರ ಝೆಹ್ರಾನ್‌ ಹಾಶಿಂನ ಸಂಬಂಧಿಕನಾಗಿರುವ ಮೌಲಾನಾ ರಿಶಾ ಮತ್ತು ಆತನ ಸ್ನೇಹಿತ ಶಹನಾಜ ನಾವಿ ಜೆ. ಯನ್ನು ಬಂಧಿಸಲಾಗಿದೆ.

ಇವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು. ಅವರ ಬಗ್ಗೆ ಭಾರತೀಯ ಗುಪ್ತಚರ ವಿಭಾಗ ಸೌದಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅದರಂತೆ ಸೌದಿ ಪೊಲೀಸರು ಅವರನ್ನು ಬಂಧಿಸಿ ಎನ್‌.ಐ.ಎ.ಗೆ ಹಸ್ತಾಂತರಿಸಿದ್ದಾರೆ. ಹಲವು ಕೇರಳಿಯರು ಕೊಲ್ಲಿಗೆ ಉದ್ಯೋಗದ ಹೆಸರಿನಲ್ಲಿ ಹೋಗಿ ಅಲ್ಲಿ ಐ.ಎಸ್‌.ನೊಂದಿಗೆ ನಂಟು ಬೆಳೆಸಿ ಕಾರ್ಯವೆಸಗುತ್ತಿರುವ ಬಗ್ಗೆಯೂ ಎನ್‌.ಐ.ಗೆ. ಮಾಹಿತಿ ಲಭಿಸಿದೆ. ಕೊಲ್ಲಿಯಲ್ಲಿ ಇದ್ದರೆ ಭಾರತ ಸರಕಾರದ ಮನವಿಯಂತೆ ಕೊಲ್ಲಿ ಪೊಲೀಸರು ತಮ್ಮನ್ನು ಬಂಧಿಸಬಹುದೆಂಬ ಭಯದಿಂದ ಅವರಲ್ಲಿ ಕೆಲವರು ಅಲ್ಲಿಂದ ಪಾಕಿಸ್ತಾನದಲ್ಲಿ ನೆಲೆಯೂರಿದ್ದಾರೆಂಬ ಮಾಹಿತಿಯೂ ಎನ್‌ಐಎಗೆ ಲಭಿಸಿದೆ.

ವಿದೇಶಿ ಮದ್ಯ ಸಹಿತ ಬಂಧನ
ಪೆರ್ಲ: ಕಾರಿನಲ್ಲಿ ಸಾಗಿಸುತ್ತಿದ್ದ 144 ಪ್ಯಾಕೆಟ್‌ ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು ಈ ಸಂಬಂಧ ಬೇಳ ನಿವಾಸಿ ಮುರಳೀಕೃಷ್ಣ (30)ನನ್ನು ಬಂಧಿಸಿದ್ದಾರೆ. ಅಡ್ಕಸ್ಥಳದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಮದ್ಯ ಪತ್ತೆಯಾಯಿತು.

ಕೆಂಪು ಕಲ್ಲು ಸಾಗಾಟ :
4 ಲಾರಿಗಳು ವಶಕ್ಕೆ
ನೀರ್ಚಾಲು: ಭೂಗರ್ಭಶಾಸ್ತ್ರ ವಿಭಾಗ ಅಧಿಕಾರಿಗಳ ಅನುಮತಿ ಪತ್ರಗಳಿಲ್ಲದೆ ಕೆಂಪುಕಲ್ಲು ಸಾಗಿಸುತ್ತಿದ್ದ 4 ಲಾರಿಗಳನ್ನು ಬೇಳ ಪೆರಿಯಡ್ಕದಿಂದ ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹೋಂ ನರ್ಸ್‌ ಕೊಲೆ ಪ್ರಕರಣ:
ಮೇ 13 ರಿಂದ ವಿಚಾರಣೆ
ಕಾಸರಗೋಡು: ಹೊಸದುರ್ಗ ತಾಲೂಕಿನ ತೆಕ್ಕೇ ತೃಕ್ಕರಿಪುರದ ಕಾವಿಲಂಗಾಡ್‌ ಕಾಲನಿಯ ಉಳಿಯಂ ಒಳವರ ವೈರನ್‌ವೀಡಿನ ಕಣ್ಣನ್‌ ಪಿ. ಅವರ ಪುತ್ರಿ, ಚೆರ್ವತ್ತೂರು ಮದರ್‌ ತೆರೆಸಾ ಚಾರಿಟೇಬಲ್‌ ಸೊಸೈಟಿ ಎಂಬ ಹೆಸರಿನ ಸಂಸ್ಥೆಯಲ್ಲಿ ಹೋಂ ನರ್ಸ್‌ ಆಗಿದ್ದ ಸಿ.ರಜನಿ(34) ಅವರನ್ನು ಕೊಲೆಮಾಡಿ ತೆಂಗಿನ ತೋಟದಲ್ಲಿ ಹೂತಿಟ್ಟ ಪ್ರಕರಣದ ವಿಚಾರಣೆ ಮೇ 13 ರಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ಪ್ರಥಮ) ದಲ್ಲಿ ಆರಂಭಗೊಳ್ಳಲಿದೆ.

2014 ಸೆ.12 ರಂದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನೀಲೇಶ್ವರ ಕೊಟ್ರಚಾಲಿನ ಚೊಕ್ಕನ್‌ ಅವರ ಪುತ್ರ ಸತೀಶ್‌ ಪಿ(36) ಮತ್ತು ಕಲ್ಲಿಕೋಟೆ ವಡಗರೆ ಚೋಲಾಂವಯಲ್‌ ಗ್ರೇಸ್‌ ಭವನದ ಜೋನ್‌ ಅವರ ಪುತ್ರ ಬೆನಿಡಿಕ್ಟ್ ಜೋನ್‌ ಆಲಿಯಾಸ್‌ ಬೆನ್ನಿ(44) ಆರೋಪಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next