Advertisement

ಕಾಸರಗೋಡು : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ

06:51 PM Mar 17, 2021 | Team Udayavani |

ಕಾಸರಗೋಡು: ಇಬ್ಬರು ಮಕ್ಕಳನ್ನು ಕೊಲೆಗೈದ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಲ್ಲೂರು ರಾವಣೇಶ್ವರದಲ್ಲಿ ನಡೆದಿದೆ.

Advertisement

ಮಕ್ಕಳಾದ ವೈದೇಹಿ (10) ಮತ್ತು ಶಿವನಂದನ್‌ (6) ಅವರಿಗೆ ವಿಷ ನೀಡಿ ಕೊಲೆಗೈದು ಬಳಿಕ ತಂದೆ ರೂಪೇಶ್‌ (38) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೂಪೇಶ್‌ ಹಾಗೂ ಪತ್ನಿ ಸವಿತಾ ಮಧ್ಯೆ ಭಿನ್ನಾಭಿಪ್ರಾಯವುಂಟಾಗಿದ್ದು ಸವಿತಾ ಮಕ್ಕಳೊಂದಿಗೆ ಬೇರೆಯೇ ವಾಸಿಸುತ್ತಿದ್ದಾರೆ. ಆಗಾಗ ರೂಪೇಶ್‌ ಇಬ್ಬರು ಮಕ್ಕಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರೆನ್ನಲಾಗಿದೆ.

ಮಾ. 16ರಂದು ಪುತ್ರಿ ವೈದೇಹಿಯ ಜನ್ಮದಿನವಾಗಿತ್ತು. ಈ ಹಿನ್ನೆಲೆಯಲ್ಲಿ ರೂಪೇಶ್‌ ಇಬ್ಬರು ಮಕ್ಕಳನ್ನು ಮಡಿವಯಲಿನ ತರವಾಡು ಮನೆಗೆ ಕರೆತಂದಿದ್ದರು. ತರವಾಡು ಮನೆಯಲ್ಲಿ ಜನ್ಮದಿನ ಸಮಾರಂಭ ಮುಗಿದ ಬಳಿಕ ಇಬ್ಬರು ಮಕ್ಕಳನ್ನು ಸಮೀಪದ ಮಡಿಕುನ್ನಿನಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮನೆಗೆ ಕರೆದೊಯ್ದಿದ್ದರು. ಈ ವೇಳೆ ಮಕ್ಕಳಿಗೆ ವಿಷ ನೀಡಿ ಕೊಲೆಗೈದು ಬಳಿಕ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ,

ಇದನ್ನೂ ಓದಿ :ಪಶ್ಚಿಮ ಬಂಗಾಳ : ಒಂದು ವರ್ಷದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿ : ತೃಣಮೂಲ ಕಾಂಗ್ರೆಸ್

Advertisement

ರೂಪೇಶ್‌ ಅವರ ಮೃತದೇಹ ಬುಧವಾರ ಬೆಳಗ್ಗೆ ಮಡಿಕುನ್ನಿನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಸಿಟೌಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂತು. ಇಬ್ಬರು ಮಕ್ಕಳ ಮೃತದೇಹ ಮನೆಯ ಒಳಗಿನ ಕೋಣೆಯಲ್ಲಿ ಪತ್ತೆಯಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಬಿ. ರಾಜೀವ್‌, ಚಂದೇರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಮಕ್ಕಳು ಪಿಲಿಕೋಡು ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ವೈದೇಹಿ ನಾಲ್ಕನೇ ತರಗತಿಯಲ್ಲೂ ಶಿವನಂದನ್‌ ಒಂದನೇ ತರಗತಿಯಲ್ಲೂ ಕಲಿಯುತ್ತಿದ್ದರು. ರೂಪೇಶ್‌ ಆಟೋ ರಿಕ್ಷಾ ಚಾಲಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next