Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

07:06 PM Jun 28, 2019 | Sriram |

ಅಲ್ತಾಫ್‌ ಕೊಲೆ ಪ್ರಕರಣ :
ಯುವಕನ ಬಂಧನ
ಕುಂಬಳೆ: ಮಾವನನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಸೋಂಕಾಲ್‌ ಪ್ರತಾಪ ನಗರದ ನಿವಾಸಿಯಾದ ಶಬೀರ್‌ನ ತಂಡದಲ್ಲಿದ್ದ ಉಪ್ಪಳ ಪೆರಿಂಗಡಿಯ ರುಮೈಸ್‌ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯ ವಿರುದ್ಧ ಗಾಂಜಾ ಸಹಿತ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪತ್ನಿಯ ತಂದೆಯಾದ ಅಲ್ತಾಫ್‌ ಅವರನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಅಳಿಯ ಪ್ರತಾಪನಗರ ನಿವಾಸಿಯಾದ ಶಬೀರ್‌ ಸಹಿತ ಎಂಟು ಮಂದಿ ಆರೋಪಿಗಳಿದ್ದಾರೆ. ಮಾದಕ ವಸ್ತು ಮಾರಾಟ ತಂಡದ ಪ್ರಧಾನ ಕೊಂಡಿಗಳು ಅಲ್ತಾಫ್‌ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆಂದು ರುಮೈಸ್‌ನ ಹೇಳಿಕೆಯಿಂದ ತಿಳಿಯಲಾಗಿದೆ.

ಬಸ್‌ ಚಾಲಕನಿಗೆ ಹಲ್ಲೆ
ಉಪ್ಪಳ: ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ಖಾಸಗಿ ಬಸ್‌ ಚಾಲಕ ಅಬೂಬಕ್ಕರ್‌ ಮೇಲೆ ಇಬ್ಬರು ಹಲ್ಲೆ ಮಾಡಿದ ಘಟನೆ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾ ಗಿದೆ. ತಾಜು ಮತ್ತು ಮುಜೀಬ್‌ ಹಲ್ಲೆ ಮಾಡಿದ್ದಾಗಿ ಗಾಯಾಳು ಆರೋಪಿಸಿದ್ದಾರೆ.

ಪೊಲೀಸರನ್ನು ಕಂಡು ಪರಾರಿ
ಮಂಜೇಶ್ವರ: ಹೊಸಂಗಡಿಯಲ್ಲಿ ಹೈವೇ ಪೊಲೀಸ ರನ್ನು ಕಂಡು ಅಪರಿಚಿತ ಯುವಕ ಕತ್ತಲೆಯಲ್ಲಿ ಪರಾರಿಯಾಗಿದ್ದಾನೆ. ಪರಾರಿಯಾಗುವ ಸಂದರ್ಭದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‌ ತಪಾಸಣೆ ಮಾಡಿದಾಗ 30 ಸಾವಿರ ರೂ. ನಗದು, 5 ಮೊಬೈಲ್‌ ಫೋನ್‌, ಪ್ಯಾಂಟ್‌, ಶರ್ಟ್‌ಗಳಿರುವುದು ಪತ್ತೆಯಾಯಿತು. ಬ್ಯಾಗ್‌ನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಯುವಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ಚಿನ್ನದ ಸರ ಅಪಹರಣ:
ಕಠಿನ ಸಜೆ, ದಂಡ
ಕಾಸರಗೋಡು: 2011ರ ಮೇ 21ರಂದು ಬೇಡಗಂ ವಟ್ಟಂತ್ತಟ್ಟ ಕುಂಡೂಚಿ ನಿವಾಸಿ ಸವಿತಾ (22) ಅವರು ಬೇಡಗಂ ಚೆಂಬಕ್ಕಾಡ್‌ ಉರುಳಿಲ್‌ ಜಂಕ್ಷನ್‌ನಲ್ಲಿ ನಡೆದು ಹೋಗುತ್ತಿದ್ದಾಗ ಅವರ ಕತ್ತಿನಿಂದ 21.59 ಗ್ರಾಂ ಚಿನ್ನದ ಸರವನ್ನು ಸೆಳೆದು ಕಿತ್ತೆಸೆದು ಬೈಕ್‌ನಲ್ಲಿ ಪರಾರಿಯಾದ ಘಟನೆಗೆ ಸಂಬಂಧಿಸಿ ಅಡ್ಕತ್ತಬೈಲ್‌ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಬಳಿಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮೊಹಮ್ಮದ್‌ ನೌಶಿಫ್‌ (19)ಗೆ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ (1) ಎರಡು ವರ್ಷ ಕಠಿನ ಸಜೆ ಮತ್ತು 2,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

Advertisement

ಮಾರ್ಪನಡ್ಕದಲ್ಲಿ ವನ್ಯಜೀವಿ ಇರುವುದು ಖಚಿತ
ಬದಿಯಡ್ಕ: ಮಾರ್ಪನಡ್ಕ ಹಾಗೂ ಪರಿಸರ ಪ್ರದೇಶಗಳಲ್ಲಿ ವನ್ಯ ಜೀವಿ ಇರುವುದನ್ನು ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಎನ್‌.ಡಿ. ಸತ್ಯನ್‌ ನೇತೃತ್ವದ ತಂಡ ಖಾತ್ರಿ ಪಡಿಸಿದೆ. ಜೂ. 26ರಂದು ರಾತ್ರಿ ಮಾರ್ಪನಡ್ಕ, ಎ.ಪಿ.ಸರ್ಕಲ್‌ ಪರಿಸರದಲ್ಲಿ ಹಾಗೂ ಜೂ. 27ರಂದು ಉಬ್ರಂಗಳ, ಮಾರ್ಪನಡ್ಕ ರಸ್ತೆಯಲ್ಲಿ ಹುಲಿಯಂತೆ ಕಾಣುವ ಪ್ರಾಣಿಓಡಿ ಹೋಗಿರುವುದು ಕಂಡು ಬಂದಿತ್ತು.

ಲೈಂಗಿಕ ಕಿರುಕುಳ : ಬಂಧನ
ಕಾಸರಗೋಡು: 37ರ ಮಹಿಳೆಯನ್ನು ಮದುವೆ ಯಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಜಪುರಂ ಕೋಳಿಚ್ಚಾಲ್‌ ಚೆರುಪನತ್ತಡಿಯ ಸ್ಟಾಲಿನ್‌ (26)ನನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣ : ಐದು ಮಂದಿ ಸಾಕ್ಷಿದಾರರಿಗೆ ಅರೆಸ್ಟ್‌ ವಾರಂಟ್‌
ಕಾಸರಗೋಡು: ಮೊಗ್ರಾಲ್‌ ನಾಟೆಕಲ್ಲು ಬಾರಿವಳಪ್ಪ್ ಹೌಸ್‌ನ ಮಾಜಿ ಪಂಚಾಯತ್‌ ಸದಸ್ಯ ಮೊಹಮ್ಮದ್‌ ಅವರ ಪುತ್ರ ಶಫೀಖ್‌ ಅಹಮ್ಮದ್‌ ಬಿ.ಎಂ. ಆಲಿಯಾಸ್‌ ಚಪ್ಪಿ(25) ಅವರನ್ನು ಕೊಲೆ ಮಾಡಿ ಹೂತಿಟ್ಟ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯಕ್ಕೆ ಹಾಜರಾದ ಐವರು ಸಾಕ್ಷಿದಾರರಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ದ್ವಿತೀಯ) ಅರೆಸ್ಟ್‌ ವಾರಂಟ್‌ ಹೊರಡಿಸಿದೆ. ಮೊಗ್ರಾಲ್‌ ಪುತ್ತೂರು ಕಡವತ್ತ್ನ ಇಸ್ಸಾಕ್‌, ಇಂದ್ರಜಿತ್‌, ಸರ್ಕಾರ್‌, ಕಾಸರಗೋಡು ಮಾರ್ಕೆಟ್‌ಕುನ್ನು ನಿವಾಸಿಗಳಾದ ಮೌಲಾ ಮನ್ಸೂರ್‌ ಮತ್ತು ರಫೀಕ್‌ ಅವರ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next