ಕಳವು : ಕುಖ್ಯಾತ ಆರೋಪಿ ಬಂಧನ
ಕಾಸರಗೋಡು: ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಕುಖ್ಯಾತ ಆರೋಪಿಯಾಗಿರುವ ತೃಕ್ಕರಿಪುರದ ಕೊಕ್ಕಡವು ಎಡಚ್ಚಾಕೈ ನಿವಾಸಿ ತುರುತ್ತಿ ಮಡತ್ತಿಲ್ ಮಣಿ ಯಾನೆ ಮಣಿಕಂಠನ್ (51)ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಈತನನ್ನು ಪಯ್ಯನ್ನೂರು ರೈಲು ನಿಲ್ದಾಣದಿಂದ ಬಂಧಿಸಲಾಗಿದೆ. ನೀಲೇಶ್ವರದ ಹೊಟೇಲೊಂದರಿಂದ 4,500 ರೂ. ಕಳವು ಮಾಡಿದ ಪ್ರಕರಣ, ಪಯ್ಯನ್ನೂರಿನಲ್ಲಿ ನಡೆದ ಕಳವು ಮೊದಲಾದ ಪ್ರಕರಣಗಳ ಆರೋಪಿಯಾಗಿದ್ದಾನೆ.
ವ್ಯಕ್ತಿಯ ಶವ ಪತ್ತೆ
ಕಾಸರಗೋಡು: ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಕಾಂಞಂಗಾಡ್ ಒಳಿಂವಳಪ್ ನಿವಾಸಿ ರಾಘವನ್ (55) ಅವರ ಮೃತದೇಹ ಸಮುದ್ರ ದಡದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಜೂ. 25ರಂದು ಸಂಜೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದರು. ದಡದಲ್ಲಿ ನಿಂತು ರಾತ್ರಿ 11 ಗಂಟೆಯ ವರೆಗೆ ಮೀನು ಹಿಡಿಯುತ್ತಿದ್ದರು. ಆದರೆ ಬುಧವಾರ ಬೆಳಗ್ಗೆ ಅವರ ಮೃತದೇಹ ದಡದಲ್ಲಿ ಪತ್ತೆಯಾಯಿತು. ಸಾವಿಗೆ ಕಾರಣ ತಿಳಿದು ಬಂದಿಲ್ಲ.
Related Articles
ಅಡೂರು: ಅಬಕಾರಿ ದಳ ನಡೆಸಿದ ಕಾರ್ಯಾ ಚರಣೆಯಲ್ಲಿ 180 ಮಿಲ್ಲಿಯ 28 ಪ್ಯಾಕೆಟ್ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ಅಡೂರು ನಿವಾಸಿ ಚಂದ್ರ (36)ನನ್ನು ಬಂಧಿಸಿದ್ದಾರೆ.
Advertisement
ಬೈಕ್ ಕಳವುಪೆರ್ಲ: ಅಮೆಕ್ಕಳ ಪರ್ಪಕರಿಯದ ಪ್ರಶಾಂತ ಪೈ ಅವರ ಬೈಕ್ ಕಳವಿಗೀಡಾಗಿದೆ. ಜೂ. 24ರಂದು ರಾತ್ರಿ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ 25ರಂದು ಬೆಳಗ್ಗೆ ನಾಪತ್ತೆಯಾಗಿತ್ತು. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕೊÕà ಪ್ರಕರಣ : ಆರೋಪಿಯ
ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಕಾಸರಗೋಡು: ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಕಾಸರಗೋಡು ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿ ಆತನಿಗೆ ಜಾಮೀನು ನಿರಾಕರಿಸಿದೆ. ಚೆಂಗಳ ನೆಕ್ರಾಜೆ ವೆಳ್ಳಾರ್ಮ ನಿವಾಸಿ ಹಾಗು ಆಟೋ ರಿಕ್ಷಾ ಚಾಲಕನಾಗಿರುವ ಇಕ್ಬಾಲ್ (32)ಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದೆ. ಘಟನೆ ವಿವರ
2019ರ ಜೂ. 6ರಂದು ಆರೋಪಿ ಇಕ್ಬಾಲ್‌ನ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ 15, 12 ಮತ್ತು 9 ವರ್ಷ ಪ್ರಾಯದ ಮೂವರು ಬಾಲಕಿಯರು ಚೂರಿಪಳ್ಳದಲ್ಲಿ ಇಳಿದು ರಿಕ್ಷಾದ ಬಾಡಿಗೆ ಹಣ ನೀಡುವ ವೇಳೆ ಅವರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಪೋಕೊÕà ಕೇಸು ದಾಖಲಿಸಿದ್ದರು. ಮದ್ಯ ಸಹಿತ ಬಂಧನ
ಬಂದಡ್ಕ: 95 ಪ್ಯಾಕೆಟ್ ವಿದೇಶಿ ಮದ್ಯ ಸಹಿತ ಮಾಣಿಮೂಲೆ ನಿವಾಸಿ ಕೃಷ್ಣಪ್ಪ ಪಿ.ಬಿ. (47)ನನ್ನು ಅಬಕಾರಿ ದಳ ಬಂಧಿಸಿದೆ. ಬಂದಡ್ಕದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸ್ಕೂಟರ್‌ನಿಂದ ಮದ್ಯವನ್ನು ವಶಪಡಿಸಲಾಯಿತು. ಟಯರ್ ರಿಸೋಲಿಂಗ್
ಘಟಕ ಬೆಂಕಿಗಾಹುತಿ
ಉಪ್ಪಳ: ಪೆರಿಂಗಡಿ ಕೋಲಾರಗುಡ್ಡೆ ನಿವಾಸಿ ಮಾಧವ ಅವರ ಟಯರ್ ರಿಸೋಲಿಂಗ್ ಘಟಕ ಬೆಂಕಿಗಾಹುತಿ ಯಾಗಿದೆ. ಯಂತ್ರ ಸಹಿತ ವಿವಿಧ ಸಾಮಗ್ರಿಗಳು ಉರಿದು ನಾಶವಾಗಿದೆ. ಇವರ ಮನೆಗೆ ತಾಗಿ ಕೊಂಡಿರುವ ಈ ಘಟಕ ವಿದ್ಯುತ್ ಶಾರ್ಟ್ ಸರ್ಕ್ನೂಟ್‌ನಿಂದ ಬೆಂಕಿ ತಗಲಿರಬೇಕೆಂದು ಶಂಕಿಸಲಾಗಿದೆ. ಬೆಂಕಿ ಹೆಂಚು ಹಾಕಿದ ಮನೆಯ ಒಂದು ಭಾಗಕ್ಕೂ ಹರಡಿದೆ. ಉಪ್ಪಳದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿತು. ಮುತ್ತಲಿಬ್ ಕೊಲೆಪ್ರಕರಣ : ಮಂಜೇಶ್ವರ ಇನ್‌ಸ್ಪೆಕ್ಟರ್‌ಗೆ
ಶೋಕಾಸ್ ನೋಟಿಸ್
ಕಾಸರಗೋಡು: ಉಪ್ಪಳ ಕೋಡಿಬೈಲು ಮಣ್ಣಂಗುಳಿ ಮೈದಾನ ಬಳಿ ನಿವಾಸಿ ಎ.ಪಿ. ಅಬ್ದುಲ್ಲ ಅವರ ಪುತ್ರ ಅಬ್ದುಲ್ ಮುತ್ತಲಿಬ್ (38) ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಾಗದ ಸಾಕ್ಷಿದಾರ ಮಂಜೇಶ್ವರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ವಿದ್ಯುತ್ ಶಾಕ್ : ಮಹಿಳೆ ಸಾವು
ಹೊಸದುರ್ಗ: ಮನೆಯೊಳಗೆ ವಿದ್ಯುತ್ ಶಾಕ್‌ನಿಂದ ನೀಲೇಶ್ವರ ಕರಿಂದಳ ಕುಂಬಳಪಳ್ಳಿ ನಿವಾಸಿ ಕಾತ್ಯಾìಯಿನಿ (68) ಅವರು ಸಾವಿಗೀಡಾದರು.