ಮಂಜೇಶ್ವರ: ಕೆಂಪು ಕಲ್ಲಿನ ಕೋರೆಯಲ್ಲಿ ತುಂಬಿದ್ದ ನೀರಿನಲ್ಲಿ ಸ್ನಾನಕ್ಕೆಂದು ತೆರಳಿದ್ದ ಕರ್ನಾಟಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ಉಳಸಿಗೇರಿ ನಿವಾಸಿ ವಿಜಯ(19) ನೀರಿನಲ್ಲಿ ಮುಳುಗಿ ಸಾವಿಗೀಡಾದರು.
Advertisement
ಮೀಯಪದವು ಬೆಜ್ಜ ಜೊಕ್ಲಕಟ್ಟೆಯ ಕೋರೆಯಲ್ಲಿ ಸ್ನಾನ ಮಾಡಲು ತೆರಳಿದ್ದ ವಿಜಯನಿಗೆ ಈಜಾಡಲು ತಿಳಿದಿರಲಿಲ್ಲ. ನೀರಿನಲ್ಲಿ ಮುಳುಗಿದ ವಿಜಯನನ್ನು ಜೊತೆಯಲ್ಲಿದ್ದವರು ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಕಾಸರಗೋಡು: ಪುಲ್ಲೂರು ಕೇಳ್ಳೋಟ್ ನಿವಾಸಿ ಪ್ರಭಾಕರನ್ ಅವರ ಪುತ್ರ ರಾಗೇಶ್ (32), ಪತ್ನಿ ಪೈಕ ನಿವಾಸಿ ಶಿಲ್ಪಾ (26) ಮತ್ತು ಇವರ ಪುತ್ರ ಆದಿತ್ಯನ್ (6) ನಿಗೂಢವಾಗಿ ನಾಪತ್ತೆಯಾಗಿರುವುದಾಗಿ ಅಂಬಲತ್ತರ ಪೊಲೀಸರಿಗೆ ದೂರು ನೀಡಲಾಗಿದೆ. ಇವರು ಪೈಕಕ್ಕೆ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅವರು ಪೈಕಕ್ಕೆ ತಲುಪಿಲ್ಲ. ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಹೆರಿಗೆಗೆ ಮುನ್ನ
ಹೃದಯಾಘಾತದಿಂದ ದಾದಿ ಸಾವು
ಕಾಸರಗೋಡು: ಹೆರಿಗೆ ಸಂಬಂಧಿತ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಾದಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ.
Related Articles
Advertisement
ವರದಕ್ಷಿಣೆಗಾಗಿ ಪತ್ನಿಗೆ ಹಲ್ಲೆ:ಪತಿ ವಿರುದ್ಧ ಕೇಸು ದಾಖಲು
ಕುಂಬಳೆ: ವರದಕ್ಷಿಣೆಗಾಗಿ ಒತ್ತಾಯಿಸಿ ಪತ್ನಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಆಮಿನತ್ ಶರೀನ ನೀಡಿದ ದೂರಿನಂತೆ ಪತಿ ಮಂಗಲ್ಪಾಡಿ ಪುಳಿಕುತ್ತಿ ನಿವಾಸಿ ಮೊದೀನ್ ಶಬೀರ್ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ
ಕಾಸರಗೋಡು: ಹೊಸದುರ್ಗದ ಖಾಸಗಿ ಶಾಲೆ ಬಳಿಯ ವಿದ್ಯುತ್ ಕಂಬವೊಂದಕ್ಕೆ ಲಾರಿ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ವಿದೇಶಿ ಮದ್ಯ ವಶಕ್ಕೆ
ಮಂಜೇಶ್ವರ: ಕಾಸರಗೋಡು ಸರ್ಕಲ್ ಅಬಕಾರಿ ಕಚೇರಿಯ ಪ್ರಿವೆಂಟಿವ್ ಆಫೀಸರ್ ವಿನಯ ರಾಜ್ ಅವರ ನೇತೃತ್ವದಲ್ಲಿ ಅಬಕಾರಿ ತಂಡ ಮೀಯಪದವಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 90 ಎಂ.ಎಲ್.ನ 48 ಬಾಟಿÉ ವಿದೇಶಿ ಮದ್ಯ ವಶಪಡಿಸಿಕೊಂಡಿದೆ. ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ವಾಹನ ಅಪಘಾತ :
ಗಾಯಾಳು ಮಹಿಳೆ ಸಾವು
ಹೊಸದುರ್ಗ: ಮಂಗಳೂರಿನಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಗೋಡೆಗೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಕಾಂಞಂಗಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಡನ್ನಕ್ಕಾಡು ನಿವಾಸಿ ಸುಹೈಲ್ ಅವರ ಪತ್ನಿ ಖೈರುನ್ನೀಸಾ(22) ಸಾವಿಗೀಡಾದರು. ಜೂ.18 ರಂದು ಕಾರ ಅಪಘಾತಕ್ಕೀಡಾಗಿತ್ತು. ತಂಡದಿಂದ ಅಪಹರಣ
ಕುಂಬಳೆ: ಉಪ್ಪಳ ಸೋಂಕಾಲ್‌ನ ಅಲ್ತಾಫ್ (46) ಮತ್ತು ಪುತ್ರಿಯ ಮಗುವನ್ನು ತಂಡವೊಂದು ಕಾರಿನಲ್ಲಿ ಅಪಹರಿಸಿ, ಮಗವನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಅಲ್ತಾಫ್ ಅವರ ಪತ್ನಿ ಫಾತಿಮಾ ನೀಡಿದ ದೂರಿನಂತೆ ಮಗಳ ಪತಿ ಶಬೀರ್, ರಿಯಾಸ್, ಲತೀಫ್ ಸಹಿತ ಐದು ಮಂದಿಯ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ರಿಕ್ಷಾ ಢಿಕ್ಕಿ : ಕೇಸು ದಾಖಲು
ಉಪ್ಪಳ: ಬಾಯಿಕಟ್ಟೆ ಜಂಕ್ಷನ್‌ನಲ್ಲಿ ರಿಕ್ಷಾ ಢಿಕ್ಕಿ ಹೊಡೆದು ಪಾದಚಾರಿ ಬಾಯಿಕಟ್ಟೆ ನಿವಾಸಿ ಅಬ್ದುಲ್ ಖಾದರ್(65) ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ರಿಕ್ಷಾ ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.