Advertisement
ಕಾಸರಗೋಡು ಪೊಲೀಸ್ ಠಾಣೆಯ ಇಬ್ಬರು ಎಸ್‌ಐಗಳ ಸಹಿತ 8 ಮಂದಿಗೆ ಕೊರೊನಾ ಬಾಧಿಸಿದೆ. ಇದರೊಂದಿಗೆ ಅಧಿಕಾರಿಗಳ ಸಹಿತ 67 ಮಂದಿ ಪೊಲೀಸರಿರುವ ಠಾಣೆಯಲ್ಲಿ 28 ಮಂದಿಗೆ ಕೋವಿಡ್ ದೃಢವಾಗಿದೆ. ಐವರು ಗುಣಮುಖರಾಗಿದ್ದಾರೆ. ಆದೂರು ಠಾಣೆಯ ಮೂವರು ಪೊಲೀಸರಿಗೂ ಕೊರೊನಾ ತಗಲಿದೆ. ಪ್ರಧಾನ ಅಂಚೆ ಕಚೇರಿ ಬಂದ್ ನೌಕರರಿಗೆ ಸೋಂಕು ತಗಲಿದ ಹಿನ್ನೆಲೆಯಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಹಾಗೂ ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪಾಸ್ಪೋರ್ಟ್ಸೇವಾ ಕೇಂದ್ರವನ್ನು ಮುಚ್ಚಲಾಗಿದೆ.
ಕೇರಳದಲ್ಲಿ ಬುಧವಾರ 10,606 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ದಿನವೊಂದರಲ್ಲಿ 10 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ದೃಢಗೊಂಡಿರುವುದು ಇದೇ ಪ್ರಥಮ. 22 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ :ಹುಬ್ಬಳ್ಳಿಯಲ್ಲಿ ಮಂಜು ಕವಿದ ವಾತಾವರಣ: 25 ನಿಮಿಷ ಸುತ್ತಾಡಿ ಲ್ಯಾಂಡ್ ಆದ ವಿಮಾನ
Related Articles
ಗಂಭೀರ ಸ್ಥಿತಿಯ ಕೋವಿಡ್ ರೋಗಿಗಳಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು. ಕೊರೊನಾ ಬಾಧೆಗೊಳಗಾಗಿ ಗುಣಮುಖರಾಗಿ 28 ದಿನಗಳು ಕಳೆದವರಿಂದ ರಕ್ತ ಸಂಗ್ರಹಿಸಿ ಚಿಕಿತ್ಸೆಗೆ ಬೇಕಾದ ಪ್ಲಾಸ್ಮಾ ವಿಂಗಡಿಸಲಾಗುವುದು.
Advertisement
ಕೋವಿಡ್ ರೋಗಮುಕ್ತರು ಜಿಲ್ಲಾ ಆಸ್ಪತ್ರೆಯ ಬ್ಲಿಡ್ ಬ್ಯಾಂಕನ್ನು ಸಂಪರ್ಕಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್ ತಿಳಿಸಿದರು.
ಮಾಹಿತಿಗೆ ದೂರವಾಣಿ: 0467 2204333.