Advertisement

ಕನಸು ನನಸಾಗಿಸಿಕೊಂಡ 792 ಕುಟುಂಬ

08:13 PM Jan 16, 2020 | Sriram |

ಕಾಸರಗೋಡು: ಕಾಸರಗೋಡು ಬ್ಲಾಕ್‌ ಪಂಚಾಯತ್‌ನ ಲೈಫ್‌ ಮಿಷನ್‌ ಯೋಜನೆಯ ಮೂಲಕ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿ ಕೊಂಡವು 792 ಕುಟುಂಬಗಳು.

Advertisement

ಬ್ಲಾಕ್‌ ಪಂಚಾಯತ್‌ ಪಟ್ಟಿಯಲ್ಲಿ ಸೇರಿದ 248 ಮಂದಿಯಲ್ಲಿ 238 ಮಂದಿಯ ಮನೆಗಳ ನಿರ್ಮಾಣ ಪೂರ್ತಿ ಗೊಂಡಿದೆ. ಬದಿಯಡ್ಕ ಗ್ರಾಮ ಪಂಚಾಯತ್‌ನಲ್ಲಿ 64 ಮನೆಗಳು, ಚೆಮ್ನಾಡಿನಲ್ಲಿ 81, ಚೆಂಗಳದಲ್ಲಿ 128, ಕುಂಬಳೆಯಲ್ಲಿ 89, ಮಧೂರಿನಲ್ಲಿ 69, ಮೊಗ್ರಾಲ್‌ ಪುತ್ತೂರಿನಲ್ಲಿ 35 ಮನೆಗಳು ಪೂರ್ಣಗೊಂಡಿವೆ. ಪರಿಶಿಷ್ಟ ಜಾತಿ ವಿಭಾಗದಲ್ಲಿ 18, ಪರಿಶಿಷ್ಟ ಪಂಗಡ ವಿಭಾಗ ದಲ್ಲಿ 4, ಮೀನುಗಾರರ ವಿಭಾಗದಲ್ಲಿ 9, ಅಲ್ಪಸಂಖ್ಯಾಕರ ವಿಭಾಗದಲ್ಲಿ 55 ಮನೆಗಳು ನಿರ್ಮಾಣಗೊಂಡಿವೆ.

ಇದಲ್ಲದೆ ಜಿಲ್ಲಾ ಪಂಚಾಯತ್‌ ವ್ಯಾಪ್ತಿ ಯಲ್ಲಿ ಒಂದು, ಪಿ.ಎಂ.ವೈ. ಗ್ರಾಮೀಣ ಯೋಜನೆಯಲ್ಲಿ 55 ಮನೆಗಳು ನಿರ್ಮಾಣವಾಗಿವೆ. ಲೈಫ್‌ ಮಿಷನ್‌ ಯೋಜನೆಯ ಮೊದಲ ಹಂತದಲ್ಲಿ 360 ಮನೆಗಳು, ಎರಡನೇ ಹಂತದಲ್ಲಿ 432 ಮನೆಗಳು ನಿರ್ಮಾಣ ಪೂರ್ಣಗೊಳಿಸಿವೆ. ಉಳಿದ ಮನೆಗಳ ನಿರ್ಮಾಣ ತ್ವರಿತ ಗತಿಯಲ್ಲಿ ನಡೆಯುತ್ತಿದೆ. 2017ರ ನವೆಂಬರ್‌ನಲ್ಲಿ ಯೋಜನೆಯ ಮೊದಲ ಹಂತದ ನಿರ್ಮಾಣ ಆರಂಭಿಸಲಾಗಿತ್ತು. ಎರಡನೇ ಹಂತದ ನಿರ್ಮಾಣ 2018ರಲ್ಲಿ ಜಾಗವಿದ್ದು, ಮನೆಯಿಲ್ಲದ ಮಂದಿ ಗಾಗಿ ವಸತಿ ನಿರ್ಮಾಣ ಆರಂಭಿ ಸಲಾಗಿತ್ತು. ಮೂರನೇ ಹಂತದಲ್ಲಿ ಜಾಗ, ವಸತಿ ಇಲ್ಲದವರಿಗಾಗಿ ಮನೆ ನಿರ್ಮಿಸಲಾಗುವುದು.

ಕಡಿಮೆ ಬೆಲೆಯೊಂದಿಗೆ ಮನೆ ನಿರ್ಮಾಣ ಸಾಮಗ್ರಿಗಳನ್ನು ಒದಗಿ ಸುವ ಕ್ರಮವನ್ನೂ ಈ ನಿಟ್ಟಿನಲ್ಲಿ ನಡೆಸಲಾ ಗುತ್ತಿದೆ. ಸಿಮೆಂಟ್‌, ಪೆಯಿಂಟ್‌, ಪೈಪ್‌, ವಿದ್ಯುನ್ಮಾನ ಸಾಮಗ್ರಿಗಳು ಇತ್ಯಾದಿ ಗಳನ್ನು ಲೈಫ್‌ ಮಿಷನ್‌ ಯೋಜನೆ ಮೂಲಕ ನೀಡಲಾಗುತ್ತದೆ.

ಕುಟುಂಬ ಸಂಗಮದ
ಜತೆಗೆ ಅದಾಲತ್‌
ಲೈಫ್‌ ಮಿಷನ್‌ ಯೋಜನೆ ಪ್ರಕಾರ ಮನೆ ಮಾತ್ರ ನೀಡಿ ಕೈ ತೊಳೆದು ಕೊಳ್ಳು ವುದಲ್ಲ, ಫಲಾನುಭವಿಗಳಿಗೆ ಈ ಸಂಬಂಧ ಎಲ್ಲ ಸೇವೆಗಳನ್ನೂ ಖಚಿತಗೊಳಿಸುವ ನಿಟ್ಟಿನಲ್ಲಿ ಕುಟುಂಬ ಸಂಗಮದ ಜತೆಗೆ ಅದಾಲತ್‌ ನಡೆಸಲಾಗುತ್ತಿದೆ.

Advertisement

ವಿವಿಧ ಇಲಾಖೆಗಳ 18 ಸ್ಟಾಲ್‌ಗ‌ಳು ಈ ನಿಟ್ಟಿನಲ್ಲಿ ಅದಾಲತ್‌
ನಡೆಸುವ ವಿವಿಧೆಡೆ ನಿರ್ಮಿಸಲಾಗುತ್ತಿದೆ. ಆರ್ಥಿಕ ಸೇವೆ ಸಹಿತ ಎಲ್ಲ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ಟಾಲ್‌ಗ‌ಳು ಇರುವುವು. ಪಡಿತರ ಚೀಟಿ, ವಿವಿಧ ಕಲ್ಯಾಣ ಪಿಂಚಣಿಗಳು, ಸೊÌàದ್ಯೋಗ ಯೋಜನೆ, ಆಧಾರ್‌, ಗುರುತು ಚೀಟಿಗಳು, ಉದ್ಯೋಗ ಕಾರ್ಡ್‌, ಘಟಕ ಗಳ ಆರಂಭ, ಭೂ ಸಂಬಂಧ ದಾಖಲೆಗಳು, ಆರೋಗ್ಯ ಸಹಿತ ವಿಭಾಗಗಳ ಸ್ಟಾಲ್‌ ಇರುತ್ತವೆ. ಗರಿಷ್ಠ ಪ್ರಮಾಣದಲ್ಲಿ ಆಯಾ ಕಡೆಗಳಲ್ಲೇ ಪರಿಹಾರವನ್ನೂ ಒದಗಿಸಲಾಗುತ್ತದೆ.

ಲೈಫ್‌ ಮಿಷನ್‌ ಯೋಜನೆ ಫಲಾನುಭವಿಗಳ ಕುಟುಂಬ ಸಂಗಮ
ಲೈಫ್‌ ಮಿಷನ್‌ ಯೋಜನೆ ಮೂಲಕ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸಿಕೊಂಡವರ ಕುಟುಂಬ ಸಂಗಮ ಕಾರ್ಯಕ್ರಮ ಬುಧವಾರ ಕಾಸರಗೋಡು ಪುರಭವನದಲ್ಲಿ ನಡೆಯಿತು.

ಕಾಸರಗೋಡು ಬ್ಲಾಕ್‌ ಪಂಚಾಯತ್‌ ವತಿಯಿಂದ ಕುಟುಂಬ ಸಂಗಮದ ಜೊತೆಗೆ ಅದಾಲತ್‌ ಕೂಡ ಜರು ಗಿತು. ಶಾಸಕ ಎನ್‌.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಸಿ.ಎಚ್‌. ಮಹಮ್ಮದ್‌ ಕುಂಞಿ ಚಾಯಿಂಡಡಿ ಅಧ್ಯಕ್ಷತೆ ವಹಿಸಿದ್ದರು. ಲೈಫ್‌ ಮಿಷನ್‌ ಯೋಜನೆಯ ನಿರ್ವ ಹಣೆ ಸಿಬಂದಿಯನ್ನು ಶಾಸಕ ಕೆ. ಕುಂಞಿರಾಮನ್‌ ಅಭಿನಂದಿಸಿದರು. ಫಲಾನುಭವಿಗಳಿಗೆ ಕೀಲಿಕೈ ವಿತರಣೆಯನ್ನು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ನಡೆಸಿದರು. ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ಮುಖ್ಯ ಅತಿಥಿಯಾಗಿದ್ದರು. ಬ್ಲಾಕ್‌ ಪಂಚಾಯತ್‌ ಉಪಾಧ್ಯಕ್ಷೆ ಹಲೀಮ ಷೀನೂರ್‌, ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರಾದ ಕೆ.ಎನ್‌. ಕೃಷ್ಣ ಭಟ್‌, ಕೆ.ಎನ್‌. ಪುಂಡರೀಕಾಕ್ಷ, ಕಲ್ಲಟ್ರ ಅಬ್ದುಲ್‌ ಖಾದರ್‌, ಸದಸ್ಯರಾದ ಸತ್ಯಶಂಕರ ಭಟ್‌, ಪ್ರಭಾಶಂಕರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next