Advertisement

ತನಿಖೆಗಾಗಿ ಪೊಲೀಸರೊಂದಿಗೆ ಬಂದ ಆರೋಪಿ ಸಮುದ್ರಕ್ಕೆ ಹಾರಿ ನಾಪತ್ತೆ!

05:41 PM Jul 22, 2020 | sudhir |

ಕಾಸರಗೋಡು : ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ಸಮುದ್ರ ತೀರದ ಪ್ರದೇಶದಲ್ಲಿ ಸ್ಥಳ ಮಹಾಜರಿಗಾಗಿ ಕರೆ ತಂದ ಸಂದರ್ಭ ಪೋಲೀಸರಿಂದ ತಪ್ಪಿಸಿ ಕೈ ಕೊಳದ ಜೊತೆಗೆ ಸಮುದ್ರಕ್ಕೆ ಹಾರಿ ನಾಪತ್ತೆಯಾದ ಘಟನೆ ಕಾಸರಗೋಡಿನ ಕಸಬಾ ಸಮುದ್ರತೀರದಲ್ಲಿ ಬುಧವಾರ ನಡೆದಿದೆ.

Advertisement

ಫೋಕ್ಸೋ ಪ್ರಕರಣದ ಆರೋಪಿಯಾಗಿರುವ ಮಹೇಶ್ ಈತ ಮಹಿಳೆಯರು ಸ್ನಾನ ಮಾಡುತಿದ್ದ ದೃಶ್ಯವನ್ನು ಆತ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಆತನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿತ್ತು ನಂತರ ತನಿಖೆ ವೇಳೆ ತಾನು ಚಿತ್ರೀಕರಿಸಿದ ಮೊಬೈಲನ್ನು ಸಮುದ್ರ ತೀರದಲ್ಲಿ ಎಸೆದಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ. ಇದರ ತನಿಖೆಗಾಗಿ ಸ್ಥಳ ಮಹಜರು ನಡೆಸಲು ಆರೋಪಿಯನ್ನು ಸಮುದ್ರ ತೀರಕ್ಕೆ ಕೈ ಕೊಳದೊಂದಿಗೆ ಕರೆತರಲಾಗಿದೆ. ಈ ಸಂದರ್ಭ ಪೋಲೀಸರ ಕೈಯಿಂದ ತಪ್ಪಿಸಿಕೊಂಡ ಆರೋಪಿ ಸಮುದ್ರಕ್ಕೆ ಜಿಗಿದಿದ್ದಾನೆ.

ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಇದ್ದುದರಿಂದ ಆರೋಪಿ ನಾಪತ್ತೆಯಾಗಿದ್ದಾನೆ ಪೋಲೀಸರ ತಂಡ ಹುಡುಕಾಟ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next