ಕಳವು: ಆರೋಪಿಯ ಬಂಧನ
ಕಾಸರಗೋಡು: ತಮಿಳುನಾಡಿನಲ್ಲಿ ಕಳವು ಪ್ರಕರಣದ ಆರೋಪಿ ತಮಿಳುನಾಡು ಕುನ್ನಂ ತಾಲೂಕಿನ ತಿರುಮುತ್ತುರೈ ನಿವಾಸಿ ತ್ಯಾಗರಾಜನ್ ಆಲಿಯಾಸ್ ಮಾವೀಕರನ್(55)ನನ್ನು ತಮಿಳು ನಾಡು ಪೊಲೀಸರು ಬೇಕಲ ಪೊಲೀಸರ ಸಹಕಾರದೊಂದಿಗೆ ಉದುಮ ಸಮೀಪದ ಪಳ್ಳಿಕೆರೆ ಯಿಂದ ಬಂಧಿಸಿದ್ದಾರೆ.
ನೇಣು ಬಿಗಿದು ಯುವತಿ ಆತ್ಮಹತ್ಯೆ
ಕಾಸರಗೋಡು: ವಿವಾಹ ನಿಶ್ಚಿತಾರ್ಥ ನಡೆದಿದ್ದ, ಪುಲ್ಲೂರು ಪೆರಿಯ ಪಂಚಾಯತ್ ಕಚೇರಿ ಸಮೀಪದ ಚಾಲಿಂಗಾಲ್ ನಿವಾಸಿ ಶಂಸುದ್ದೀನ್ ಅವರ ಪುತ್ರಿ ಫಾತಿಮಾ(18) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಂಜಾ ಸಾಗಿಸುತ್ತಿದ್ದ ಕಳವು ಆರೋಪಿಯ ಬಂಧನ
ಕಾಸರಗೋಡು: ಕಳವು ಮಾಡಿದ ಬೈಕ್‌ನಲ್ಲಿ ಸಾಗಿಸುತ್ತಿದ್ದ 300 ಗ್ರಾಂ ಗಾಂಜಾ ವಶಪಡಿಸಿಕೊಂಡ ಚಂದೇರ ಪೊಲೀಸರು ಚೆರ್ವತ್ತೂರು ಕಂಡತ್ತಿಲ್ ಹೌಸ್‌ನ ಎಂ. ಸುಹೈಲ್(25)ನನ್ನು ಬಂಧಿಸಿದ್ದಾರೆ. ತಮಿಳುನಾಡಿನ ಸೇಲಂ ನಿವಾಸಿ ಡಿ. ಅಶ್ರಫ್ ಅವರ ಬೈಕನ್ನು ಕಳವುಗೈದು ಅದರಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಲಾಯಿತು.
ಮರದ ಮಿಲ್ ಬೆಂಕಿಗಾಹುತಿ
ಕಾಸರಗೋಡು: ಕರಿಂದಳ ತಲಯಡ್ಕ ಶ್ಮಶಾನ ಸಮೀಪದ ಮರದ ಮಿಲ್ ಬೆಂಕಿಗಾಹುತಿಯಾಗಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಪೀಠೊ ಪಕರಣಗಳು ಮತ್ತು ಮರಗಳು ಉರಿದು ಹೋಗಿವೆ. ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.
Related Articles
ಬೆಂಕಿ ಅವಘಡ
ಕಾಸರಗೋಡು: ಮಧೂರು ಪಟ್ಲ ಕುಂಜಾರಿನಲ್ಲಿ ಖಾಸಗಿ ಹಿತ್ತಿಲಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿ ನೊಂದಿಗೆ ಬೆಂಕಿಯನ್ನು ಆರಿಸಿದರು.