Advertisement

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

09:12 PM Apr 13, 2024 | Team Udayavani |

ಬಾಲಕಿಗೆ ಕಿರುಕುಳ: ಕೇಸು ದಾಖಲು
ಬದಿಯಡ್ಕ: ಐದರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ 50ರ ಹರೆಯದ ವ್ಯಕ್ತಿಯ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಬದಿಯಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ಕೆಲಸಕ್ಕೆಂದು ಬಂದ ವ್ಯಕ್ತಿ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.

Advertisement

ನಗ್ನ ಪ್ರದರ್ಶನ : ಸಜೆ
ಕಾಸರಗೋಡು: ವಿದ್ಯಾರ್ಥಿನಿಯ ಮುಂದೆ ದೋತಿ ಬಿಚ್ಚಿ ನಗ್ನತೆ ಪ್ರದರ್ಶಿಸಿದ ಪ್ರಕರಣದಲ್ಲಿ ಪಳ್ಳಿಕ್ಕೆರೆ ಇಲ್ಯಾಸ್‌ ನಗರದ ಅಬ್ದುಲ್ಲ(54)ನಿಗೆ ಹೊಸದುರ್ಗ ಫಾಸ್ಟ್‌ ಟ್ರ್ಯಾಕ್ ಸ್ಪೆಷಲ್‌ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. 2022 ಮಾರ್ಚ್‌ 27ರಂದು ಬೆಳಗ್ಗೆ ಪಳ್ಳಿಕೆರೆಯಲ್ಲಿ 11 ವರ್ಷದ ಬಾಲಕಿಯ ಮುಂದೆ ನಗ್ನ ಪ್ರದರ್ಶನ ಮಾಡಿದ ಬಗ್ಗೆ ಬೇಕಲ ಪೊಲೀಸರು ಕೇಸು ದಾಖಲಿಸಿದ್ದರು.

ಗಾಂಜಾ ಸಹಿತ ಬಂಧನ
ಕಾಸರಗೋಡು: ಹೊಸದುರ್ಗ ತಾಲೂಕು ಪುದುಕೈ ವಿಲ್ಲೇಜ್‌ ವಾಳನ್ನೋರಡಿ ನಿವಾಸಿ ಶಾಜಿ ಪಿ. (49) ಎಂಬಾತನನ್ನು 1.250 ಕಿಲೋ ಗಾಂಜಾ ಸಹಿತ ಹೊಸದುರ್ಗ ಅಬಕಾರಿ ದಳ ಬಂಧಿಸಿದೆ. ನೋರ್ತ್‌ ಕೋಟ್ಟಚ್ಚೇರಿಯಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಪತ್ತೆಯಾಯಿತು.

ವಾಟರ್‌ ಅಥಾರಿಟಿ ನೀಡಿದ ಬಿಲ್‌
ಗ್ರಾಹಕ ನ್ಯಾಯಾಲಯದಲ್ಲಿ ಅಸಿಂಧು
ಕಾಸರಗೋಡು: ಕುಡಿಯುವ ನೀರಿನ ಫಲಾನುಭವಿಗೆ ಕೇರಳ ವಾಟರ್‌ ಅಥಾರಿಟಿ ಎರಡು ತಿಂಗಳಿಗೆ ಮಿತಿಗಿಂತಲೂ ಹೆಚ್ಚಿನ ಮೊತ್ತ ಪಾವತಿಸುವಂತೆ ನೀಡಿದ್ದ ನೋಟಿಸ್‌ ಅನ್ನು ಗ್ರಾಹಕರ ವ್ಯಾಜ್ಯ ಪರಿಹಾರ ಫಾರಂ ಅಸಿಂಧುಗೊಳಿಸಿದೆ. ಮಾತ್ರವಲ್ಲ ದೂರುಗಾರರಾದ ಕುಡಿಯುವ ನೀರು ಫಲಾನುಭವಿಗೆ ವಾಟರ್‌ ಅಥಾರಿಟಿ 30 ದಿನಗಳೊಳಗಾಗಿ 5,000 ರೂ. ನಷ್ಟ ಪರಿಹಾರ ನೀಡುವಂತೆ ತಿಳಿಸಿದೆ.

ಇದರಂತೆ ಕಾಸರಗೋಡು ಪಿಲಿಕುಂಜೆ ಕ್ಷೇತ್ರ ರಸ್ತೆಯ ಶ್ರೀ ಕೃಷ್ಣ ನಿವಾಸ್‌ನ ಕೆ.ಬಾಲಕೃಷ್ಣ ರಾವ್‌ ಅವರಿಗೆ ಕೇರಳ ವಾಟರ್‌ ಅಥಾರಿಟಿಯ ಡಬ್ಲ್ಯೂ ಎಸ್‌ಪಿ ಸಬ್‌ ಡಿವಿಶನ್‌ 5,000 ರೂ. ನಷ್ಟ ಪರಿಹಾರ ನೀಡಬೇಕಾಗಿದೆ.

Advertisement

ಕೆ.ಬಾಲಕೃಷ್ಣ ರಾವ್‌ ಪ್ರತಿ ತಿಂಗಳು ಸರಾಸರಿ 264 ಯೂನಿಟ್‌ ನೀರು ಬಳಸುತ್ತಿದ್ದರು. ಆದರೆ 2022 ಎಪ್ರಿಲ್‌ 12ರಂದು ನೀಡಿದ ಬಿಲ್‌ನಲ್ಲಿ ಎರಡು ತಿಂಗಳ ಮೊತ್ತವಾಗಿ 8,356 ರೂ. ಪಾವತಿಸುವಂತೆ ತಿಳಿಸಲಾಗಿದೆ. ಈ ಬಗ್ಗೆ ಬಾಲಕೃಷ್ಣ ರಾವ್‌ ಅವರು ವಾಟರ್‌ ಅಥಾರಿಟಿಯನ್ನು ಸಂಪರ್ಕಿಸಿ ವಿಚಾರಿಸಿದರೂ ಸೂಕ್ತ ಉತ್ತರ ಲಭಿಸಿಲ್ಲ. ಆದರೆ ಮೊತ್ತವನ್ನು ಪಾವತಿಸಬೇಕೆಂದು ತಿಳಿಸಿದ ಹಿನ್ನೆಲೆಯಲ್ಲಿ ಬಾಲಕೃಷ್ಣ ರಾವ್‌ ಗ್ರಾಹಕರ ವ್ಯಾಜ್ಯ ಪರಿಹಾರ ಫಾರಂ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next