Advertisement

ಕನ್ನಡ ಉಳಿವಿನ ಹೋರಾಟದಲ್ಲಿ ಕಸಾಪ ಸೇವೆ ಶ್ಲಾಘನೀಯ

06:24 AM May 07, 2019 | Lakshmi GovindaRaj |

ವಿಜಯಪುರ: ಕನ್ನಡದ ನೆಲ, ಜಲ, ಏಕೀಕರಣ, ಭಾಷೆ ಉಳಿವಿಗಾಗಿಯೇ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಸೇವೆಯಲ್ಲಿ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿದ್ದು ಭಾಷೆ, ಸಾಹಿತ್ಯ, ಕಲೆಯ ಉಳಿವಿನಲ್ಲಿ ಕಸಾಪ ಸೇವೆ ಸಲ್ಲಿಸುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್‌ ತಿಳಿಸಿದರು.

Advertisement

ಪಟ್ಟಣದ ಗಾಂಧಿಚೌಕದಲ್ಲಿನ ಎಎಸ್‌ವಿ ನಗರ್ತ ಮಹಂತಿನಮಠ ಧರ್ಮಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಲಕ್ಷಾಂತರ ಮಂದಿ ಸದಸ್ಯರನ್ನು ಹೊಂದಿದ್ದು ರಾಜ್ಯದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಮಾತನಾಡುವವನೇ ಕರ್ನಾಟಕದಲ್ಲಿ ಸಾರ್ವಭೌಮನಾಗಬೇಕು. ಕನ್ನಡ ಕಲಿಯದೇ, ಮಾತನಾಡದೇ ಇರುವವರಿಗೆ ಸಾಹಿತ್ಯ ಪರಿಷತ್‌ನಲ್ಲಿ ಸದಸ್ಯತ್ವ ನೀಡಬಾರದು.

ರಾಜ್ಯದಲ್ಲಿ ವಾಸಿಸುವ ಅನ್ಯಭಾಷಿಕರು ಕಡ್ಡಾಯವಾಗಿ ಕನ್ನಡ ಕಲಿಯುವಂತಾಗಬೇಕು. ಕೇಂದ್ರ-ರಾಜ್ಯ ಮತ್ತು ಖಾಸಗಿ ಸಂಸ್ಥೆಗಳು, ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದರು.

ಸಮಾಜ ಸೇವಾಕರ್ತ ವಿ.ಎನ್‌.ಸೂರ್ಯಪ್ರಕಾಶ್‌, ಕನ್ನಡ ಸಾಹಿತ್ಯ ಪರಿಷತ್‌ ಉದಯವಾದಾಗಿನಿಂದೀಚೆಗೆ ಕನ್ನಡ ಸಾಹಿತಿಗಳು, ಸಾಹಿತ್ಯ, ಭಾಷೆಗೆ ಗಟ್ಟಿ ನೆಲೆ ಸಿಕ್ಕಿದೆ. ಕಸಾಪ ಸಂಸ್ಥಾಪನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ.ವಿಶ್ವೇಶ್ವರಯ್ಯ ಮತ್ತಿತರರ ಶ್ರಮವಿದೆ ಎಂದರು.

Advertisement

ಸಾಹಿತಿ ಬಿ.ಸ್ವರ್ಣಗೌರಿಮಹಾದೇವ್‌, ಭಾಷೆ ಮತ್ತು ಸಾಹಿತ್ಯದ ಸರ್ವೋತೋಮುಖ ಬೆಳವಣಿಗೆ, ಗ್ರಂಥಗಳ ಪ್ರಕಟಣೆ, ರಕ್ಷಣೆ ಹಾಗೂ ಏಳಿಗೆ ಸಾಧಿಸಲು ಕಸಾಪ ಕನ್ನಡಿಗರ ಪ್ರಾತಿನಿಧಿಕ ಸ್ವಾಯತ್ತ ಸಂಸ್ಥೆಯಾಗಿದೆ ಎಂದರು.

ಪುರಸಭಾ ಸದಸ್ಯ ಎಸ್‌.ಭಾಸ್ಕರ್‌, ಶಿಕ್ಷಕ ಎಂ.ಶಿವಕುಮಾರ್‌, ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾದ ಪುನಿತಾನಟರಾಜು ಮಾತನಾಡಿದರು. ಮಹಂತಿನ ಮಠ ಕಾರ್ಯದರ್ಶಿ ವಿ.ವಿಶ್ವನಾಥ್‌, ಅಬ್ದುಲ್‌ ಸತ್ತಾರ್‌, ಟೌನ್‌ ಕಸಾಪ ಅಧ್ಯಕ್ಷ ಜೆ.ಆರ್‌.ಮುನೀರಣ್ಣ, ಮುನಿವೆಂಕಟರಮಣಪ್ಪ, ಮುನಿರಾಜು ಇದ್ದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಎನ್‌.ಪುಟ್ಟರಾಜು, ಮುನಿರಾಜು, ವೆಂಕಟೇಶ್‌, ರಾಕೇಶ್‌ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಿಕ್ಷಕ ಕೆ.ಎಚ್‌.ಚಂದ್ರಶೇಖರ್‌, ಮಹತ್ಮಾಂಜನೇಯ, ನರಸಿಂಹಪ್ಪ ಅವರಿಂದ ಕನ್ನಡಗೀತೆಗಳ ಗಾಯನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next