Advertisement

ಸಮ್ಮೇಳನಾಧ್ಯಕ್ಷರಿಗೆ ಕಸಾಪ ಅಧಿಕೃತ ಆಹ್ವಾನ

11:26 AM Jun 17, 2018 | Team Udayavani |

ಬೆಂಗಳೂರು: ಶ್ರವಣಬೆಳಗೊಳದಲ್ಲಿ ಜೂ.24ರಿಂದ 26ರವರೆಗೆ ನಡೆಯಲಿರುವ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಶೋಧಕ ಡಾ.ಷ.ಶೆಟ್ಟರ್‌ ಅವರಿಗೆ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತ ಆಹ್ವಾನ ನೀಡಿದೆ.

Advertisement

ಭೂಪಸಂದ್ರದಲ್ಲಿರುವ ಡಾ.ಷ.ಶೆಟ್ಟರ್‌ ಅವರ ನಿವಾಸಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ತೆರಳಿದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ್‌, ಸಂಪ್ರದಾಯದಂತೆ ಸಮ್ಮೇಳನದ ಅಧ್ಯಕ್ಷರಿಗೆ ಮೊದಲ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದರು. 

ಈ ವೇಳೆ ಮಾತನಾಡಿದ ಡಾ.ಶೆಟ್ಟರ್‌, “ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ನಾನು, ಕನ್ನಡ ಸಾಹಿತ್ಯ ಪರಿಷತ್‌ಗೆ ಆಭಾರಿಯಾಗಿದ್ದೇನೆ. ಹೊಸ ಪೀಳಿಗೆಗೆ ಹಳಗನ್ನಡ ಸಾಹಿತ್ಯ ಪರಿಚಯಿಸುವ ಅಗತ್ಯವಿದೆ. ಅಧ್ಯಾಪಕರು ಕೂಡ ಹಳಗನ್ನಡವನ್ನು ಹೆಚ್ಚು ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಆ ಸಾಹಿತ್ಯ ರಸಗವಳದ ಸವಿ ತೋರಿಸಬೇಕು.

ಹಳಗನ್ನಡ ಸಾಹಿತ್ಯದ ಸತ್ವ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಮತ್ತೆ ಅದನ್ನು ನೆನೆಪಿಸುವ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ವಿಷಯ,’ ಎಂದರು. ಕಸಾಪ ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ಡಾ.ರಾಜಶೇಖರ ಹತಗುಂದಿ ಹಾಗೂ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next