Advertisement

ಸಾಹಿತಿಗಳ ಆಶಯಕ್ಕೆ ಕಸಾಪ ಮನ್ನಣೆ 

10:29 AM Jan 17, 2022 | Team Udayavani |

ಆಳಂದ: ಜನಾತ್ಮಕವಾಗಿರುವ ಸಾಹಿತ್ಯವನ್ನು ಪೋಷಿಸಿಕೊಂಡು ಸಾಹಿತಿಗಳ ಆಶಯದಂತೆ ತಾಲೂಕಿನಲ್ಲಿ ಕನ್ನಡ ನಾಡು-ನುಡಿ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಾಗುವುದು ಎಂದು ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಣಮಂತ ಶೇರಿ ಹೇಳಿದರು.

Advertisement

ಪಟ್ಟಣದಲ್ಲಿ ಸಮಾನ ಮನಸ್ಕ ಸಾಹಿತ್ಯ ಆಸಕ್ತ ಶಿಕ್ಷಕರು ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕನ್ನಡದ ಕಾರ್ಯಗಳು ನಿರಂತರವಾಗಿರುವಂತೆ ಮಾಡುವುದರ ಜೊತೆಗೆ ಪರಿಷತ್‌ ವತಿಯಿಂದ ಪ್ರಕಟಣೆ, ಪ್ರೋತ್ಸಾಹ, ವಿಚಾರ ಸಂಕಿರಣ, ಕಾರ್ಯಾಗಾರ ಸೇರಿದಂತೆ ವಿಶಿಷ್ಟ ಕಾರ್ಯ ರೂಪಿಸಲಾಗುವುದು ಎಂದರು.

ಹಿರಿಯ ಶಿಕ್ಷಕ ಪಂಚಪ್ಪ ಪಾಟೀಲ ಮಾತನಾಡಿ, ತಾಲೂಕಿನ ಶಿಕ್ಷಕ ಸಮುದಾಯದಲ್ಲಿಯೂ ಹಲವಾರು ಜನ ಪ್ರತಿಭಾವಂತ ಸಾಹಿತಿಗಳಿದ್ದಾರೆ. ಅವರನ್ನು ಬಳಸಿಕೊಂಡು ಕನ್ನಡ ಭಾಷೆ ಬೆಳವಣಿಗೆಗೆ ಜೊತೆಯಾಗಿ ಸಾಗೋಣ ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಕ ಸಾಹಿತಿ ಅಂಬಾರಾಯ ಕಾಂಬಳೆ ಮಾತನಾಡಿದರು. ಸಿಆರ್‌ಪಿ ನಾಗೇಂದ್ರಪ್ಪ ಗಾಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಶಿಕ್ಷಕ ವಿಶ್ವನಾಥ ಘೋಡಕೆ, ಶಿಕ್ಷಕರ ಸಂಘದ ಖಜಾಂಚಿ ಮಹಾದೇವ ಗುಣಕಿ, ರಾಜಕುಮಾರ ಕೋಷ್ಟಿ, ಶಿಕ್ಷಕರಾದ ಪ್ರಫುಲಕುಮಾರ, ವಿನಾಯಕ ಚೋಳಕೆ, ಸುರೇಶ ಹಂಚಿನಾಳ, ಪರಮಾನಂದ ಜಮಾದಾರ, ಶಿಕ್ಷಕರ ಸಂಘದ ಕಾರ್ಯದರ್ಶಿ ವೆಂಕಟೇಶ ಇಳಿಗಾರ, ಮಾರುತಿ, ಶ್ರೀನಾಥ ನಾಗೂರ, ಶಿವುಕುಮಾರ ಮೇಟಿ, ಅನಿಲ ಹಾಗೂ ಶಿಕ್ಷಕರು ಇದ್ದರು. ಚಂದ್ರಶೇಖರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next