Advertisement
ಈಗ ಹೊರಬಿದ್ದ ಫಲಿತಾಂಶ 2015ನೇ ಸಾಲಿನ ಕೆಎಎಸ್ ಪರೀಕ್ಷೆಯದ್ದು. ಉಡುಪಿ ಬೆಳ್ಮಣ್ಣು ಮುಂಡ್ಕೂರು ನಿವಾಸಿ ನವೀನ್ ತೇರ್ಗಡೆ ಹೊಂದಿ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಆಯ್ಕೆ ಯಾಗಿದ್ದಾರೆ.
ಮುಂಡ್ಕೂರಿನ ದಿ| ಯು. ಪುಂಡಲೀಕ ವರದರಾಜ್ ಮತ್ತು ಶಕುಂತಲಾ ರಾವ್ ದಂಪತಿಯ ಪುತ್ರ ನವೀನ್ ರಾವ್ ಅವರು ಎಂಜಿನಿಯರಿಂಗ್ ಮುಗಿ ಯುತ್ತಿದ್ದಂತೆ 2002ರಲ್ಲಿ ಸೇನೆಗೆ ಸೇರ್ಪಡೆಯಾದರು. ತಾಂತ್ರಿಕ ವಿಭಾಗದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು 15.6 ವರ್ಷ ಕಾಲ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತಿ ಹೊಂದಿದರು.
Related Articles
ಪೋಷಕರ ಆಶೀರ್ವಾದ, ಹಿತೈಷಿ ಗಳು, ಉಡುಪಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಪ್ರೈಮ್ ಮಾರ್ಗದರ್ಶನದಲ್ಲಿ ಕೆಎಎಸ್ ಪರೀಕ್ಷೆ ಉತ್ತೀರ್ಣಗೊಂಡಿರುವುದಾಗಿ ನವೀನ್ ರಾವ್ ತಿಳಿಸಿದ್ದಾರೆ. ಅವರು ಸೈನ್ಯಯಿಂದ ನಿವೃತ್ತಿ ಹೊಂದುತ್ತಿದ್ದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದಾರೆ. ಎಲ್ಲ ಪರೀಕ್ಷೆಗಳಲ್ಲಿ ಪಾಸಾಗಿದ್ದು, ಪ್ರಸ್ತುತ ಉಡುಪಿ ಅಬಕಾರಿ ಇಲಾಖೆಯಲ್ಲಿ ಕುಂದಾಪುರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಅತ್ತ ಉದ್ಯೋಗ, ಇತ್ತ ಅಭ್ಯಾಸನವೀನ್ ರಾವ್ ಅವರಿಗೆ ಅಭ್ಯಾಸವೆಂದರೆ ಪಂಚಪ್ರಾಣ. ಸೈನ್ಯದಲ್ಲಿ ಇರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಅಗತ್ಯವಿರುವ ಪೂರ್ವ ತಯಾರಿಯನ್ನು ಪ್ರಾರಂಭಿಸಿದ್ದರು. ನಿವೃತ್ತಿ ಬಳಿಕ ಅಬಕಾರಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಾ, ಬೆಳಗ್ಗೆ 2.30 ರಿಂದ 5.30 ವರೆಗೆ ಕೆಎಎಸ್ ಅಗತ್ಯವಿರುವ ತಯಾರಿಯನ್ನು ಮಾಡುವುದು ನಿತ್ಯದ ದಿನಚರಿಯಾಗಿತ್ತು. ದೃಢ ಸಂಕಲ್ಪ ಬೇಕು !
ದೃಢ ಸಂಕಲ್ಪವಿದ್ದರೆ ಎಷ್ಟೇ ಕಷ್ಟದ ಕೆಲಸವಾದರೂ ಯಶಸ್ಸು ಪಡೆಯಬಹುದು. ಕರಾವಳಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಇಲ್ಲಿ ಎಂಜಿನಿಯರಿಂಗ್ ಮತ್ತು ಮೆಡಿಕಲ್‌ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆ ತೇರ್ಗಡೆಯಾಗಿ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದಿನ ದಿನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನಾಗರಿಕ ಸೇವೆ ಪರೀಕ್ಷೆ ಬರೆಯುವಂತಾಗಲಿ.
– ನವೀನ್ ರಾವ್, ಕೆಎಎಸ್ ಉತ್ತೀರ್ಣಗೊಂಡ ಅಭ್ಯರ್ಥಿ