Advertisement
ಆಲಂಕಾರು ಗ್ರಾಮದ ಕರ್ತುಟೇಲು ದುಗಲಾಯಿ ಮತ್ತು ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.ಇಂದು ಧಾರ್ಮಿಕ ಪ್ರವಚನದ ಹೆಸರಲ್ಲಿ ಸಮಾಜ ಒಡೆಯುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಈ ಕಾರ್ಯ ನಿಲ್ಲಬೇಕಾದರೆ ಧಾರ್ಮಿಕ ಆಚಾರ ವಿಚಾರಗಳುಳ್ಳ ಚಟುವಟಿಗಳು ಹೆಚ್ಚಾಗಬೇಕು. ದೈವಾರಾಧನೆ ಹಿಂದುಗಳಿಗೆ ಮಾತ್ರ ಸೀಮಿತವಲ್ಲ, ಎಲ್ಲಾ ಧರ್ಮದವರ ಒಗ್ಗಟ್ಟಿನಲ್ಲಿ ನಡೆಯುವುದೇ ದೈವಾರಾಧನೆ ಎಂದರು.
Related Articles
Advertisement
ಸಮ್ಮಾನದೈವದ ಕಾರ್ಯದಲ್ಲಿ ಪ್ರಮುಖರಾದ ಆಲಡ್ಕ ದೇವಪ್ಪ ಗೌಡ, ರಾಮಣ್ಣ ಗೌಡರ ಪುತ್ರ ಶೇಖರ ಕಣಿಯ, ಲಿಂಗ ಆಜಿಲರ ಪುತ್ರ ಆನಂತ ಅಜಿಲ (ದೈವದ ಪಾತ್ರಿ), ರಾಮಣ್ಣ ಗೌಡ ಆಯರೆಕೋಡಿ, ಬಟ್ಯ ಅಜಿಲ ಅವರ ಪುತ್ರ ರಾಮು ಅಜಿಲ (ದೈವದ ಪಾತ್ರಿ), ಬಾಬು ಮಡಿವಾಳ, ಜತ್ತಪ್ಪ ಗೌಡ, ಗುತ್ತಿನ ಗುರಿಕಾರ ಜಯಕೀರ್ತಿ ಹೆಗ್ಡೆ, ಹಾಗೂ ದೈವಸ್ಥಾನ ನಿರ್ಮಾಣದ ಕೆಲಸಕ್ಕೆ ಸಹಕರಿಸಿದ ಭಾಸ್ಕರ ಆಚಾರ್ಯ, ಸುಬ್ರಹ್ಮಣ್ಯ ಭಟ್, ಶಂಕರನಾರಾಯಣ ಭಟ್, ಚಂದ್ರಶೇಖರ ಪಟ್ಟೆಮಜಲು, ಸುಂದರ ಗೌಡ, ರಾಮರಾಜ, ಬೇರಿಕೆ, ಕುಂಞಣ್ಣ ಗೌಡ ಆಲಡ್ಕ, ರಮೇಶ್ ಮೇಸಿŒ, ವಸಂತ ಗೌಡ, ನಾಗೇಶ್ ಗೌಡ, ವಸಂತ, ತಿಮ್ಮಪ್ಪ ಮುಗೇರ, ಕೇಶವ ಕೇಪುಳು, ಅನಂತ ಆಚಾರಿ, ಗೋಪಾಲಕೃಷ್ಣ, ಹರೀಶ್‌ಮೇಸ್ತ್ರೀ, ಇವರುಗಳನ್ನು ಶಾಸಕರು ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು. ಆಡಳಿತ ಸಮಿತಿಯ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ದಯಾನಂದ ಗೌಡ ಆಲಡ್ಕ ಸ್ವಾಗತಿಸಿದರು. ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ವಂದಿಸಿ ಶಿಕ್ಷಕ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು. ನರ್ತಕರಿಗೆ ಸಹಾಯ ನೀಡೋಣ
ತಮ್ಮ ಪ್ರತಿಷ್ಠೆಯನ್ನು ಪ್ರದರ್ಶಿಸುವ ಹಿನ್ನೆಲೆಯಲ್ಲಿ ಸುಧಾರಿತ ಧ್ವನಿವರ್ಧಕ, ಸಿಡಿಲಬ್ಬರದ ಸಿಡಿಮದ್ದು ಪ್ರದರ್ಶನದ ಜೊತೆಗೆ ಕಿಲೋ ಮೀಟರ್ ದೂರದವರೆಗೆ ಅಬ್ಬರದ ಲೈಟಿಂಗ್ಸ್ ಮಾಡಿ ಲಕ್ಷಾಂತರ ರೂಪಾಯಿಯ ದುಂದು ವೆಚ್ಚದಲ್ಲಿ ದೈವಗಳ ನರ್ತನೋತ್ಸವವನ್ನು ಮಾಡಿಸುತ್ತಾರೆ. ಆದರೆ ದೈವ ನರ್ತಕರಿಗೆ ಮಾತ್ರ ಬಿಡಿಗಾಸು ನೀಡಿ ಸತಾಯಿಸುತ್ತಾರೆ. ಜೊತೆಗೆ ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯಬೇಕಾದ ನರ್ತನೋತ್ಸವವನ್ನು ಕಾಲಮಿತಿ ಯಕ್ಷಗಾನದಂತೆ ಪ್ರದರ್ಶಿಸಲು ಒತ್ತಡ ಹಾಕುತ್ತಾರೆ. ಇಂತಹ ದುಂದುವೆಚ್ಚದ ಭಕ್ತಿಯನ್ನು ಪ್ರದರ್ಶಿಸುವುದಕ್ಕಿಂತ ದೈವ ನರ್ತಕನಿಗೆ ಸಮರ್ಪಕ ಸಂಬಳದ ಜೊತೆಗೆ ಆತನ ಮಕ್ಕಳ ವಿದ್ಯಾಭ್ಯಾಸ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯಕ್ಕೆ ಸಹಾಯಹಸ್ತವನ್ನು ನೀಡಬೇಕಾಗಿದೆ ಎಂದು ಅಜಿತ್ ಗೌಡ ಐವರ್ನಾಡು ಕರೆ ಅವರು ನೀಡಿದರು.