Advertisement

Karwar Tunnel ; ಸತಾಯಿಸುವುದು ಒಳ್ಳೆಯದಲ್ಲ: ವಿಧಾನ ಪರಿಷತ್ ಸದಸ್ಯ ಉಳ್ವೇಕರ್

07:36 PM Sep 23, 2023 | Team Udayavani |

ಕಾರವಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುರಂಗ ಮಾರ್ಗ ಸಂಚಾರ ಮುಕ್ತ ಮಾಡಲು ಇದೇ ವರ್ಷದ 21 ಜುಲೈ ನಲ್ಲೇ ಪತ್ರ ಬರೆದರೂ ಸುರಂಗ ತೆರೆಯದೇ ಸತಾಯಿಸುವುದು ಒಳ್ಳೆಯದಲ್ಲ ಎಂದು ವಿಧಾನ ಪ‌ರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದರು‌.

Advertisement

ಕಾರವಾರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಡಳಿತ ಇಂಥ ವಿಷಯದಲ್ಲಿ ಜನರ ಹಿತ, ವಾಹನಸವಾರರ ಹಿತ ನೋಡಬೇಕು. ಹಾಲಿ ಶಾಸಕ ಮತ್ತು ಉಸ್ತುವಾರಿ ಸಚಿವರಿಗೆ ಜನರ ಅಭಿಪ್ರಾಯ ಹಾಗೂ ಪುಣೆಯ ಸಿಒಇಪಿ ಟೆಕ್ನಾಲಾಜಿಕಲ್ ಯುನಿವರ್ಸಿಟಿ ತಜ್ಞರು ಕಾರವಾರ ಸುರಂಗ ಮಾರ್ಗ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಎನ್ ಎಚ್ ಎ ಐ ಗೆ ನೀಡಿರುವ ವರದಿಯನ್ನು ಮನವರಿಕೆ ಮಾಡಬೇಕಿತ್ತು ಎಂದರು‌ .‌ ಪುಣೆ ಟೆಕ್ನಾಲಜಿಕಲ್ ಯುನಿವರ್ಸಿಟಿ ನೀಡಿದ ವರದಿಯನ್ನು ಎನ್ ಎಚ್ ಎಐ ಅಂಗೀಕರಿಸಿ, ಅದನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರಿಗೆ 21 ಜುಲೈ 2023 ರಂದು ಕಳುಹಿಸಿದೆ. ಅಲ್ಲದೆ ಟನಲ್ ವಾಹನ ಸಂಚಾರಕ್ಕೆ ಮುಕ್ತ ಮಾಡಲು ವಿನಂತಿಸಿದೆ. ಸಂಸದರು ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತಾಡಿದ್ದಾರೆ. ಆದರೂ ಜಿಲ್ಲಾ ಉಸ್ತುವಾರಿ ಹಾಗೂ ಸ್ಥಳೀಯ ಶಾಸಕ ಈ ಸಂಗತಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡದ್ದು ಸರಿಯಲ್ಲ ಎಂದರು.

ಕಾರವಾರ ಬಳಿಯ ಲಂಡನ್ ಬ್ರಿಜ್ ಬಳಿಯ ಸುರಂಗ ಮಾರ್ಗ ಮುಚ್ಚುವುದರಿಂದ ಜನರಿಗೆ ಕಷ್ಟವಾಗಿದೆ. ‌ಸುರಂಗದ ಮಾರ್ಗದಲ್ಲಿದ್ದ ಬಾಕಿ ಕಾಮಗಾರಿ ಮುಗಿದಿವೆ. ಆದರೂ ಸುರಂಗ ಮಾರ್ಗ ಮುಚ್ಚಿ ನಾಲ್ಕು ಕಿಮೀ ಘಟ್ಟದಲ್ಲಿ ವಾಹನ ಸವಾರರು ಸುತ್ತುವಂತೆ ಮಾಡಿರುವುದು ಸರಿಯಲ್ಲ. ಇದರಿಂದ ನಾಲ್ಕು ಅಪಘಾತ ಗಳಾಗಿವೆ. ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ. ಆ ಯುವಕನ ಕುಟುಂಬಕ್ಕೆ ಪರಿಹಾರ ನೀಡುವರಾರು ಎಂದು ಉಳ್ವೇಕರ್ ಪ್ರಶ್ನಿಸಿದರು‌ .

ಸೆ.29 ರೊಳಗೆ ಟನಲ್ ( ಸುರಂಗ) ಮಾರ್ಗ ವಾಹನ ಸವಾರರಿಗೆ ಮುಕ್ತವಾಗಬೇಕು. ಇಲ್ಲದಿದ್ದರೆ ಸೆ. 29 ರಂದು ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು ಎಂದರು. ಜನರ ರೊಚ್ಚಿನ ಎದುರು ಕಾನೂನು ನಿಲ್ಲುವುದಿಲ್ಲ. ಮೇಲಾಗಿ ಬಿಣಗಾ ಸಾರ್ವಜನಿಕರು ಟನಲ್ ಓಪನ್ ಮಾಡಲು ಶಾಸಕ ಸೈಲ್ ಅವರಿಗೆ ವಿನಂತಿಸಿದಾಗ, ನೀವು ಟನಲ್ ಓಪನ್ ಮಾಡಿ, ನಾನು ಬಂದ್ ಮಾಡಿಸುವೆ ಎಂದಿದ್ದಾರೆ. ಇದು ಅವರ ವಯಕ್ತಿಕ ಪ್ರತಿಷ್ಠೆಗಾಗಿ ಟನಲ್ ಬಂದ್ ಮಾಡಿದ್ದು ಎಂಬುದು ಸ್ಪಷ್ಟ. ಹಾಗಾಗಿ ಈ ಹೋರಾಟವನ್ನು ನಾವು ಜನರ ಹಿತಕ್ಕಾಗಿ ಕೈಗೆತ್ತಿಕೊಂಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಟನಲನ್ನು ಜನರಿಗೆ, ವಾಹನಸವಬರೆದರೂ ಮುಕ್ತ ಮಾಡುವೆವು ಎಂದು ವಿಧಾನ ಪರಿಷತ್ ಸದಸ್ಯ ಉಳ್ವೇಕರ್ ಹೇಳಿದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಜನರ ಹಿತಕ್ಕೆ ಕೆಲಸ ಮಾಡಬೇಕೆಂದು ನಗರಸಭೆಯ ಮಾಜಿ‌ ಅಧ್ಯಕ್ಷ ನಿತಿನ್ ಪಿಕಳೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next