Advertisement

ಮನೆ ಗೋಡೆ ಕುಸಿತ,  ಮಹಿಳೆ ಸಾವು ; ಸ್ಥಳಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ

08:11 PM Jul 13, 2021 | Team Udayavani |

ಕಾರವಾರ : ಗುಡ್ನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಆಕಸ್ಮಿಕವಾಗಿ ಮನೆ ಗೋಡೆ ಕುಸಿದ್ದು ಶ್ರೀಮತಿ ಯಶೋದಾ ಬಂಗಾರಿ ಗೌಡ ಮೃತಪಟ್ಟಿದ್ದು, ಅವರ ಮನೆಗೆ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

Advertisement

ಅನ್ಯ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸಚಿವ ಶಿವರಾಮ ಹೆಬ್ಬಾರ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಂತ್ಯ ಸಂಸ್ಕಾರಕ್ಕೆ ವೈಯಕ್ತಿಕ ಧನಸಹಾಯವನ್ನು ನೀಡಿದರು ಹಾಗೂ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿ ಮುಂದಿನ 48 ಗಂಟೆಗಳ ಒಳಗಾಗಿ ಪರಿಹಾರಧನವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ತಹಶೀಲ್ದಾರ್ ಕುಲಕರ್ಣಿ, ಡಿ.ವೈ,ಎಸ್.ಪಿ ರವಿ ನಾಯ್ಕ, ಸಿ.ಪಿ.ಆಯ್. ರಾಮಚಂದ್ರ ನಾಯಕ ಬನವಾಸಿ ಪಿ.ಎಸ್.ಆಯ್ ಹಾಗೂ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಳೀಯ ಮುಖಂಡರು ಹಾಗೂ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಪಂಜಾಬ್ ರಾಜಕೀಯ ವಿವಾದಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಎಂಟ್ರಿ..?!

Advertisement

Udayavani is now on Telegram. Click here to join our channel and stay updated with the latest news.

Next