Advertisement

Karwar: ಚೆಕ್ ಪೋಸ್ಟ್ ನಲ್ಲಿ 5 ಲಕ್ಷ ರೂ.ಬೆಲೆಯ ಗೋವಾ ಮದ್ಯ ವಶಕ್ಕೆ

10:21 PM Sep 28, 2023 | Team Udayavani |

ಕಾರವಾರ : ಅಕ್ರಮವಾಗಿ ಗೋವಾ ಸಾರಾಯಿಯನ್ನು ಸಾಗಿಸುತ್ತಿದ್ದ ಅಬಕಾರಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಪತ್ತೆ ಹಚ್ಚಿ 5 ಲಕ್ಷ ರೂ.ಬೆಲೆಯ ಗೋವಾ ಮದ್ಯವನ್ನು ವಶಕ್ಕೆ ಪಡೆದ ಘಟನೆ ಕಾರವಾರ ಗಡಿಭಾಗ ಮಾಜಾಳಿ ಚೆಕ್ ಪೊಸ್ಟ್‌ ಬಳಿ ಗುರುವಾರ ಸಂಜೆ ನಡೆದಿದೆ.

Advertisement

ಗೋವಾದಿಂದ ಕಂಟೇನರ್ ವಾಹನದ ಮೂಲಕ ಮಂಗಳೂರಿಗೆ ಅಕ್ರಮವಾಗಿ ಗೋವಾದಿಂದ ಮದ್ಯವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು, ನಂತರ ಬಂಧಿಸಲಾಗಿದೆ.

ಗೋವಾದಿಂದ ಮಂಗಳೂರಿಗೆ ಮದ್ಯ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಅಬಕಾರಿ ಇಲಾಖೆಗೆ ಖಚಿತ ಮಾಹಿತಿ ಬಂದಿತ್ತು. ಅಬಕಾರಿ ಆಯುಕ್ತರಾಗಿರುವ ಕೆ. ವಿನೋದ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಐದು ಲಕ್ಷ ಬೆಲೆಯ 58 ಬಾಕ್ಸ್ ಗೋವಾದಲ್ಲಿ ತಯಾರಿಸಿದ ವಿಸ್ಕಿ ಹಾಗೂ ವಾಹನ ಸೇರಿ 25 ಲಕ್ಷದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಮದ್ಯ ಸಾಗಾಟ ಮಾಡುತ್ತಿದ್ದ ಕಂಟೇನರ್ ವಾಹನ ಚಾಲಕ ಮಹಮ್ಮದ್ ಸಲೀಮ್ ಹಾಗೂ ಕಾರವಾರ ತಾಲೂಕಿನ ಸದಾಶಿವಗಡ ನಿವಾಸಿ ತೇಜಸ್ ಶೇಟ್ ಎಂಬುವವರನ್ನ ಬಂಧಿಸಲಾಗಿದೆ. ಈ ಕುರಿತು ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next