ಕಾರವಾರ : ನಗರದ ರವೀಂದ್ರನಾಥ ಟಾಗುರ್ ಬೀಚ್ ನಲ್ಲಿ ಕಸ ಎಸೆದು ಮಾಲಿನ್ಯ ಉಂಟು ಮಾಡುವ ಪ್ರವಾಸಿಗರು ಮತ್ತು ಸಾರ್ವಜನಿಕರಿಂದ ಕಟ್ಟುನಿಟ್ಟಾಗಿ ದಂಡವಸೂಲಿ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.
ಅವರು ಇಂದು ನಗರಸಭೆ ಕಾರವಾರ ವತಿಯಿಂದ , ರವೀಂದ್ರನಾಥ ಟಾಗುರ್ ಕಡಲತೀರದಲ್ಲಿ ನಡೆದ, ನಮ್ಮ ಕಾರವಾರ -ಸ್ವಚ್ಛ ಕಾರವಾರ ತ್ಯಾಜ್ಯ ವಿಂಗಡಣೆ ತ್ರೈ ಮಾಸಿಕ ಅಭಿಯಾನ ಕಾರ್ಯಕ್ರಮದಲ್ಲಿ , ಬೀಚ್ ನಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಚಗೊಳಿಸಿ ಮಾತನಾಡಿದರು.
ಕಾರವಾರದ ಪ್ರಮುಖ ಪ್ರವಾಸಿ ತಾಣವಾದ ಬೀಚ್ ವೀಕ್ಷಣೆಗೆ ವಿವಿಧ ಜಿಲ್ಲೆಗಳ ಪ್ರವಾಸಿಗರು ಮತ್ತು ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಬೀಚ್ ಗೆ ಬರುವಾಗ ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು , ಇದರಿಂದ ಕಡಲ ತೀರದಲ್ಲಿ ಮಾಲಿನ್ಯ ಉಂಟಾಗಿ ಬೀಚ್ ನ ಪ್ರಾಕ್ರತಿಕ ಸೌಂದರ್ಯಕ್ಕೆ ಹಾನಿಯಾಗುತ್ತಿದೆ ಆದ್ದರಿಂದ ಇದನ್ನು ನಿಯಂತ್ರಿಸಲು ಇನ್ನು ಮುಂದೆ ಬೀಚ್ ನಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಸ್ಥಳದಲ್ಲೇ ಕಟ್ಟುನಿಟ್ಟಾಗಿ ದಂಡ ವಿಧಿಸುವಂತೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತ ಚಂದ್ರಮೌಳಿ ಹಾಗೂ ನಗರಸಭೆ ಮತ್ತು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಭಾಗವಹಿದ್ದರು.