Advertisement

ಗದ್ದೆಗಿಳಿದು ಭತ್ತ ಸಸಿ ನಾಟಿ ಮಾಡಿದ ಡಿಸಿ-ಎಡಿಸಿ ಜೋಡಿ

07:00 PM Aug 02, 2021 | Team Udayavani |

ಕಾರವಾರ: ಸಾಮಾಜಿಕ ಸಮಸ್ಯೆಗಳನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಿದ್ದರದ ಗದ್ದೆಯಲ್ಲಿ ನಡೆದ ಭತ್ತ ನಾಟಿ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮಾಜಿಕ ಕಾಯಿಲೆಗಳಿಗೆ ಮದ್ದು ಹುಡುಕುವ ಪತ್ರಕರ್ತರ ಜವಾಬ್ದಾರಿ ದೊಡ್ಡದು. ಅವರು ಸಮಸ್ಯೆಗೆ ಚುಚ್ಚುಮದ್ದು ನೀಡುವ ವೈದ್ಯರಿದ್ದಂತೆ ಎಂದರು.

ಸಮಾಜದ ಒಳಿತು ಕೆಡುಕುಗಳ ಮೂಲ ಅರಿತು ಜನರಿಗೆ ನೋವು ಆಗದಂತೆ, ಕಾಯಿಲೆಯೂ ಗುಣವಾಗುವಂತೆ ಚುಚ್ಚುಮದ್ದು ನೀಡುವ ಸವಾಲಿನ ಕೆಲಸ ಮಾಧ್ಯಮಗಳ ಮೇಲಿದೆ ಎಂದರು. ಅತಿಥಿ ಎಡಿಸಿ ಎಚ್‌.ಕೆ. ಕೃಷ್ಣಮೂರ್ತಿ ಮಾತನಾಡಿ, ಪತ್ರಿಕೆಗಳು ಸಂವಿಧಾನದ ನಾಲ್ಕನೇ ಅಂಗ ಎನ್ನಲಾಗಿದೆ. ಇದು ನಿಜವೂ ಹೌದು. ಸಮಾಜ ಮತ್ತು ಆಡಳಿತವನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಪತ್ರಿಕೆಗಳು ಮಾಡುತ್ತಿವೆ. ಅದು ಅವರ ಕರ್ತವ್ಯ. ಹಾಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಪತ್ರಕರ್ತರು, ಮಾಧ್ಯಮಗಳು ಒತ್ತಾಸೆಯಾಗಿ ನಿಲ್ಲಬೇಕು. ಆಗ ಅಭಿವೃದ್ಧಿ ಸಾಧ್ಯ ಎಂದರು.

ಎಸಿ ವಿದ್ಯಾಶ್ರೀ ಚಂದರಗಿ ಮಾತನಾಡಿ, ಸತ್ಯಮೇವ ಜಯತೇ ಎಂಬ ಘೋಷ ವಾಕ್ಯವನ್ನು ಪತ್ರಕರ್ತರು ಜಾರಿಗೆ ತರುತ್ತಿದ್ದಾರೆ ಎಂದರು. ಗದ್ದೆಯಲ್ಲಿ ಭತ್ತದ ಸಸಿ ನಾಟಿ ಮಾಡಿದ್ರು: ಬಿಳಿ ಲುಂಗಿ ಉಟ್ಟು ರೈತನಿಂತೆ ಕಾಣಿಸಿಕೊಂಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಎಡಿಸಿ ಕೃಷ್ಣಮೂರ್ತಿ 25 ನಿಮಿಷ ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು.

ಎಸಿ ವಿದ್ಯಾಶ್ರೀ ಚಂದರಗಿ ಸಹ ಭತ್ತದ ಸಸಿಗಳನ್ನು ನಾಟಿ ಮಾಡಿದರು. ತಹಶೀಲ್ದಾರ್‌ ನಿಶ್ಚಲ ನರೋನಾ ಭಾಗವಹಿಸಿ, ಕೃಷಿ ಕಾರ್ಯದ ಅನುಭವ ಪಡೆದರು. ಸಸಿ ಮಡಿಗೆ ಪೂಜೆ ಮಾಡಿದರು. ಜಮೀನಿನ ಮಾಲೀಕ ಕೆ.ಡಿ. ಪೆಡೆ°àಕರ್‌ ನಾಟಿ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿಗಳನ್ನು ಸನ್ಮಾನಸಿದರು. ಅವರಿಂದ ತೆಂಗಿನ ಸಸಿಗಳನ್ನು ನೆಡಿಸಿದರು. ರೋಟರಿ ಅಧ್ಯಕ್ಷ ನರೇಂದ್ರ ದೇಸಾಯಿ, ಮೀನುಗಾರರ ಮುಖಂಡ ಗಣಪತಿ ಉಳ್ವೆàಕರ್‌, ಸೇಂಟ್‌ ಮಿಲಾಗ್ರಿಸ್‌ ಕೋ-ಆಪ್‌ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷ ಜಾರ್ಜ್‌ ಫರ್ನಾಂಡಿಸ್‌ರನ್ನು ಸನ್ಮಾನಿಸಿದರು. ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ, ಉಪಾಧ್ಯಕ್ಷ ಗಿರೀಶ ನಾಯ್ಕ, ಕಾರ್ಯದರ್ಶಿ ದೀಪಕ್‌ ಗೋಕರ್ಣ, ಹಿರಿಯ ಪತ್ರಕರ್ತ ನಾಗರಾಜ ಹರಪನಹಳ್ಳಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next