Advertisement
ಕಡಲತೀರವೆಲ್ಲ ಸ್ವತ್ಛಗೊಂಡಿದೆ. ಊರಿನ ರಸ್ತೆಗಳಿಗೆ ನವೀನ ಕಳೆ ಬಂದಿದೆ. ಅಲ್ಲಲ್ಲಿ ಸೈಕಲ್ಲು ತುಳಿಯುವ ಹೆಣ್ಣುಮಕ್ಕಳು, ನಾವೇನು ಕಮ್ಮಿ ಎನ್ನುವಂತೆ ಪೆಡಲ್ ದೂಕುವ ಗಂಡುಮಕ್ಕಳು.
Related Articles
Advertisement
ಇದು ಊರಿನ ಕಥೆ. ಕಾರವಾರದ ಕಡಲತೀರದಲ್ಲಿ ಸಾಹಸ ಪ್ರಿಯರಿಗಾಗಿ ಈಗಾಗಲೇ ಪಾರಾಗ್ಲೆ„ಡಿಂಗ್ ಪ್ಯಾರಾಸೇಲಿಂಗ ಜೊತೆಗೆ ಬನಾನಾ ಬೋಟಿಂಗ್ ಕ್ರೀಡೆಗಳೂ ಶುರುವಾಗಿದೆ. ಗಿಡಗಂಟಿಗಳನ್ನೆಲ್ಲ ತೆಗೆದು ಹಾಕಲಾಗಿದೆ. ಹೌದು, ಈಗ ಕಡಲತೀರ ಸ್ವತ್ಛಗೊಂಡಿದೆ.
ಕಡಲ ತೀರವನ್ನು ವರ್ಷವಿಡೀ, ಸ್ವತ್ಛವಾಗಿಡಲು ಸ್ಥಳೀಯ ಸಂಘಸಂಸ್ಥೆಗಳು ಆಗಾಗ ಸ್ವತ್ಛತಾ ಅಭಿಯಾನ ಹಮ್ಮಿಕೊಳ್ಳುತ್ತಿವೆ. ಕಡಲತೀರಕ್ಕೆ ಭೇಟಿ ಕೊಡುವವರ ಹಸಿವು ನೀಗಿಸಲು ಕ್ಯಾಂಟೀನ್ ಶುರುವಾಗಿದೆ. ಸಮುದ್ರ ತೀರದ ಅಂಚಿನಲ್ಲಿರುವ ಚಾಪೆಲ್ ಯುದ್ಧ ನೌಕಾ ಸಂಗ್ರಹಕ್ಕೆ ಹೋಗುವುದನ್ನು ಮರೆಯಬೇಡಿ. ಅಲ್ಲಿಗೆ ಮಕ್ಕಳನ್ನು ಕರೆದೊಯ್ದರೆ ಅವರು ಯುದ್ಧ ನೌಕೆಯನ್ನು ನೋಡಿಖುಷಿ ಪಡುವುದರಲ್ಲಿ ಅನುಮಾನವೇ ಬೇಡ. ಇದರ ಪಕ್ಕದಲ್ಲೇ ಮತ್ಸಾéಲಯವಿದೆ.
ಅಂದಹಾಗೆ, ಕೋಡಿಬಾಗ್‌ನ ಕಾಳಿ ಹಿನ್ನೀರಿನಲ್ಲಿ ಫ್ಲೈಯಿಂಗ್ ಫಿಶ್ ಸಾಹಸಕ್ರೀಡೆ ನಡೆಯುತ್ತಿದೆ. ಅದರಲ್ಲಿ ಪಾಲ್ಗೊಳ್ಳಿ. ಗೊತ್ತಿರಲಿ; ಇದು ಮುಂಬಯಿ ಬಿಟ್ಟರೆ ಭಾರತದ ಎರಡನೇ ಫ್ಲೈಯಿಂಗ್ ಫಿಶ್ ಕ್ರೀಡೆ ಇರುವುದು ಕಾರವಾರದಲ್ಲಿ.
ಇನ್ನು ಉತ್ತರ ಕನ್ನಡದ ಜೀವನ ಶೈಲಿಯನ್ನು ಬಿಂಬಿಸುವ ರಾಕ್‌ಗಾರ್ಡನ್ ಶುರುವಾಗುತ್ತಲಿದೆ. ಪುಟಾಣಿ ರೈಲು ಮತ್ತು ಸಂಗೀತ ಕಾರಂಜಿಗಳು ಪುನರ್ಜನ್ಮ ಪಡೆದಿವೆ. ಕಾರವಾರ ತಾಲ್ಲೂಕಿನ ತುತ್ತತುದಿಯಲ್ಲಿರುವ ಅತಿ ಅಪರೂಪದ ಕಪ್ಪುಮರಳಿನ ಕಡಲತೀರವಾದ ತೀಳಮಾತಿಗೆ ಹೋಗುವುದನ್ನು ಮರೆಯಬೇಡಿ.
ಪ್ರವಾಸಿಗರನ್ನು ಸ್ವಾಗತಿಸಲು ಕಾರವಾರಿಗರು ಸಹ ಇದೇ ಉತ್ಸಾಹದಲ್ಲಿ ತಯಾರಾಗಿದ್ದಾರೆ. ಒಂದೆಡೆ ಹೊಸ ಹೊಸ ವಸತಿಗೃಹಗಳು ತಲೆಎತ್ತುತ್ತಿದ್ದರೆ ಇನ್ನೊಂದೆಡೆ ಹಳೆಯವು ಹೊಸ ಮೇಕಪ್‌ನಲ್ಲಿ ಅಣಿಯಾಗುತ್ತಿವೆ. ಕಾರವಾರದ ಮೀನೂಟವನು °ಒಂದು ಬ್ರಾಂಡ್ ಮಾಡಲು ಮತ್ಸ್ಯಖಾದ್ಯಗಳನ್ನು ಇಲ್ಲಿನ ಶೈಲಿಯಲ್ಲಿ ಬಡಿಸಲು ನಗರದೆಲ್ಲೆಡೆ ಹೋಟೆಲ್‌ಗಳು ತಲೆ ಎತ್ತುತ್ತಲಿವೆ.
ಬದಲಾಗುತ್ತಿರುವ ವಾತಾವರಣದ ಕಾರಣಕ್ಕೆ ಈಗ ಕಾರವಾರ ಎಷ್ಟು ಬ್ಯುಸಿ ಗೊತ್ತಾ? ಕಳೆದ ವರ್ಷ ನವೆಂಬರ್‌ನಿಂದ ಮೇವರೆಗೆ ಕಾರವಾರದ ಪ್ರಮುಖ ವಸತಿಗೃಹಗಳೆಲ್ಲ ಭರ್ತಿಯಾಗಿದ್ದವು. ಕಡಲ ತೀರವಂತೂ ಈಗ ಚಟುವಟಿಕೆಗಳ ತಾಣ. ಅದರಲ್ಲೂ ಸಾಯಂಕಾಲದ ವೇಳೆ ಪ್ರತಿದಿನವೂ ನೂರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.
ಬದಲಾಗಿರುವ ಕಾರವಾರ, ಹಲವು ಹೊಸತುಗಳನ್ನು ಅಳವಡಿಸಿಕೊಂಡು ಕೈಬೀಸಿ ಕರೆಯುತ್ತಿದೆ.
ಖಂಡಿತ ಬರುತ್ತೀರಲ್ಲ…?
ಸುನೀಲ ಬಾರಕೂರ