Advertisement

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

04:12 PM Apr 18, 2024 | Team Udayavani |

ಕಾರವಾರ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ ಎಂದು ಜಿಲ್ಲಾ ಭಾಜಪ ಮಾಧ್ಯಮ ವಕ್ತಾರ ಸದಾನಂದ ಭಟ್ ಹೇಳಿದರು.

Advertisement

ಗುರುವಾರ ಕಾರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಸಿಯ ಗ್ರಾಮೀಣ ಭಾಗದ ರಸ್ತೆಗಳನ್ನು ನೀವು ನೀಡಿ. ಅದು ಕಾಗೇರಿ ಮಾಡಿದ ಅಭಿವೃದ್ಧಿ. ಪರಿಸರವಾದಿಗಳ ಬಾಯಿ ಮುಚ್ಚಿಸಿ, ಶಿರಸಿ ಕುಮಟಾ‌ ಹೆದ್ದಾರಿ ಅಗಲೀಕರಣ ಆಗಲು ಕಾಗೇರಿ ಕಾರಣಕರ್ತರು. ಅವರು ಕರಾವಳಿಯ ಜನರನ್ನು ನಿರ್ಲಕ್ಷಿಸಿಲ್ಲ. ಅವರು ಬಹಿರಂಗವಾಗಿ ಮತನಾಡದ ಹಿಂದುತ್ವವಾದಿ‌. ಅವರ ಸ್ಟೈಲ್ ಸಂಸದ ಅನಂತ ಕುಮಾರ್ ಶೈಲಿಯದ್ದಲ್ಲ. ಕಾಗೇರಿ ವಿಭಿನ್ನ ರಾಜಕಾರಣಿ ಎಂದು ಬಣ್ಣಿಸಿದರು.

ರಾಹುಲ್ ಗಾಂಧಿಗೆ ಕೆಲ ಪ್ರಶ್ನೆಗಳು: ರಾಹುಲ್ ಗಾಂಧಿ ಎದುರು ಕೆಲ ಪ್ರಶ್ನೆಗಳನ್ನು ಮಂಡಿಸಿದ ಸದಾನಂದ ಭಟ್, ಅವುಗಳಿಗೆ ರಾಹುಲ್ ಗಾಂಧಿ ಉತ್ತರ ನೀಡುವಂತೆ ಆಗ್ರಹಿಸಿದರು. ‌

ರಾಜ್ಯ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದೆ. ಆರ್ಥಿಕ ದಿವಾಳಿಯಾಗಿದೆ. ದೌರ್ಜನ್ಯ ಹೆಚ್ಚಿದೆ. ಪೊಲೀಸ್ ವ್ಯವಸ್ಥೆ ಕುಸಿದಿದೆ. ಗುತ್ತಿಗೆದಾರರು ಶೇ.60 ಸರ್ಕಾರ ಎಂದು ಕೆಂಪಣ್ಣ ಹೇಳಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರಿಸಬೇಕೆಂದು ಜಿಲ್ಲಾ ಭಾಜಪ ಮಾಧ್ಯಮ ವಕ್ತಾರ ಸದಾನಂದ ಭಟ್ ಹೇಳಿದರು.

ವಿದ್ಯುತ್ ದರ ಏರಿದೆ. ನೀರಿನ ದರ ಏರಿದೆ. ಸ್ಟಾಂಪ್ ಪೇಪರ್ ಬೆಲೆ ಏರಿದೆ . ಮದ್ಯದ ಬೆಲೆ ಏರಿದೆ. ಎಲ್ಲಾ‌ ದರ ಏರಿಸಿದ್ದಾರೆ. ಈ ನಡುವೆ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಆ ಗ್ಯಾರಂಟಿ ಸೌಲಭ್ಯ ಎಂಬುದು ಚಿಟಿಕೆ ಸಕ್ಕರೆ ಎಂದು ಭಟ್ ಅಪಾದಿಸಿದರು.

Advertisement

ಬಹಿರಂಗ ಚರ್ಚೆಗೆ ಸಿದ್ಧ: ಜಿಲ್ಲೆಗೆ ಬಿಜೆಪಿ ಕೊಡುಗೆ ಏನು? ಸಂಸದರ ಕೊಡುವೆ ಏ‌ನು ಎಂಬುದರ ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ. ಕಾಂಗ್ರೆಸ್ ನವರು ಸಮಯ ನಿಗದಿ ಮಾಡಲಿ ಎಂದು ಸದಾನಂದ ಭಟ್ ಸವಾಲು ಹಾಕಿದರು.

ಕಾಗೇರಿ ಅನುಭವಿ‌. ಅಭಿವೃದ್ಧಿ ಮಾತ್ರ ಅವರಿಗೆ ಗೊತ್ತು. ಹಾಗಾಗಿ ಅವರಿಗೆ ಜನರ ಬೆಂಬಲ ‌ಇದೆ. ನಾವು ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ಜಿಲ್ಲೆಯ ರೈತರಿಗೆ 77607 ಜನರಿಗೆ ಪಿಎಂ ಕಿಸಾನ್ ಸನ್ಮಾನ, ಫಸಲು ಭೀಮಾ ಯೋಜನೆಯ ಲಾಭ ತಲುಪಿದೆ. 619 ಕೋಟಿ ರೂ. ಉತ್ತರ ಕನ್ನಡ ರೈತರಿಗೆ ತಲುಪಿದೆ.  ಆಯುಷ್ಮಾನ ಭಾರತ ಯೋಜನೆ ಅಡಿ ಜಿಲ್ಲೆಯ 1.70 ಲಕ್ಷ ಜನರು ಹೆಸರು ನೊಂದಾಯಿಸಿದ್ದಾರೆ. ಈ ಯೋಜನೆಯಿಂದ ಆಸ್ಪತ್ರೆಗೆ ಸೇರಿದ ಹಲವು ಜನರಿಗೆ 30 ಕೋಟಿ ರೂ. ಆಸ್ಪತ್ರೆ ವೆಚ್ಚ‌ ಆಯುಷ್ಮಾನ್ ಭಾರತ ಯೋಜನೆ ಅಡಿ ಕೊಟ್ಟಿದ್ದೇವೆ ಎಂದು ಮಾದ್ಯಮ ವಕ್ತಾರರು ಹೇಳಿದರು.

ಕೇಸರಿ ಪೇಟ ಧರಿಸಿದ್ದಕ್ಕೆ ಅಸಮಾಧಾನ: 2023 ರಲ್ಲಿ ಕೇಸರಿ ಪೇಟವನ್ನು ಅಂಜಲಿ ನಿಂಬಾಳ್ಕರ್ ವಿರೋಧಿಸಿದ್ದರು.  2024ರಲ್ಲಿ ನಿಂಬಾಳ್ಕರ್ ಕೇಸರಿ ಪೇಟ ಧರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಮೆರವಣಿಗೆಯಲ್ಲಿ ಕೇಸರಿ ಪೇಟ ಹಾಕಿದ್ದಾರೆ. ಇದರಿಂದ ಹಿಂದುಗಳು ಬದಲಾಗುವುದಿಲ್ಲ. ಅವರಿಗೆ ಬಿಜೆಪಿ ಮತಗಳು ಹೋಗಲ್ಲ  ಎಂದು ಬಿಜೆಪಿಯ ಜಿಲ್ಲಾ ಘಟಕದ ವಿಶೇಷ ಆಹ್ವಾನಿತ ಸದಸ್ಯ ನಾಗರಾಜ್ ನಾಯಕ ಹೇಳಿದರು. ಈ ಹಿಂದೆ ಸಿದ್ದರಾಮಯ್ಯ ಕೇಸರಿ ಶಾಲು ನಿರಾಕರಿಸಿದ್ದರು. ಪಠ್ಯ ಪುಸ್ತಕ ಕೇಸರಿಕರಣ ಎಂದು ಕಾಂಗ್ರೆಸ್ ನವರು ಅಪಾದಿಸಿದ್ದರು. ಈಗ ಕೇಸರಿ ಪೇಟ ಧರಿಸಿದ್ದಾರೆ. ಇದನ್ನು ಜನ ನಂಬಲ್ಲ ಎಂದರು.

ಎಂಇಎಸ್ ಕಾರವಾರ ನಿಪ್ಪಾಣಿ ಬೆಳಗಾವಿ ಕೇಳಿದ್ದಾರೆ. ಅಂಜಲಿ ನಿಂಬಾಳ್ಕರ್ ಮೃಧು ಧೋರಣೆ ‌ತಾಳಿದ್ದಾರೆ ಎಂದು ಅನಿಸುತ್ತಿದೆ ಎಂದು ಅವರು ಅಪಾದಿಸಿದರು.  ಇದರ ಹಿಂದೆ ಕಾಂಗ್ರೆಸ್ ಸಂಚು ಸಹ ಇರಬಹುದು ಎಂದರು.

ಎಂಇಎಸ್ ನಿಲುವಿಗೆ ಬಿಜೆಪಿ ಸಹಮತ ಇಲ್ಲ: ಎಂಇಎಸ್ ಧೋರಣೆ ಹಾಗೂ ಕಾರವಾರ, ಬೆಳಗಾವಿ ಕೇಳಿರುವುದನ್ನು ಬಿಜೆಪಿ ಸ್ಪಷ್ಟವಾಗಿ ವಿರೋಧಿಸುತ್ತದೆ. ಕರ್ನಾಟಕದ ಒಂದಿಂಚು ನೆಲ ಮಹಾರಾಷ್ಟ್ರಕ್ಕೆ ಕೊಡುವುದಿಲ್ಲ. ಎಂಇಎಸ್ ನಿಲುವನ್ನು ಬಿಜೆಪಿ ಖಂಡಿಸುತ್ತದೆ ಎಂದು ನಾಗರಾಜ್ ನಾಯಕ ಹೇಳಿದರು. ಸಂಜಯ್ ಸಾವಂತ, ಕಿಶನ್ ಕಾಂಬ್ಳೆ‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next