ಕಾರವಾರ: ಕಾರವಾರದಲ್ಲಿ 52 ಹರೆಯದ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಕ ಹುಡುಗಿಯನ್ನು ಮದುವೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮದುವೆಯಾಗಿ ಮೂರು ತಿಂಗಳ ನಂತರ ಹುಡುಗಿಗೆ 18 ವಯಸ್ಸು ದಾಟಿಲ್ಲ ಎಂಬುದು ಬಯಲಾಗಿದೆ. ಅಪ್ರಾಪ್ತ ವಯಸ್ಕಳು ಎಂದು ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬಂದಿ ಪತ್ತೆ ಹಚ್ಚಿದ್ದಾರೆ. ವಧು-ವರ ಇಬ್ಬರೂ ಕಾರವಾರ ನಗರದ ನಿವಾಸಿಗಳು ಎಂದು ಅಂಗನವಾಡಿ ಕಾರ್ಯಕರ್ತರು ಖಚಿತ ಮಾಹಿತಿ ನೀಡಿದ್ದಾರೆ.
ವಧು ಅಪ್ರಾಪ್ತ ವಯಸ್ಕಳು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕರಣದ ಎಳೆ ಹಿಡಿದು ಜಾಗೃತಿ ಮೂಡಿಸಿದ್ದಾರೆ. ವಧುವನ್ನ ಪತ್ತೆ ಹಚ್ಚಿದ ಮಹಿಳಾ ಇಲಾಖೆಯ ಸಿಬಂದಿ, 52 ವಯಸ್ಸಿನ ಪುರುಷ ಅನಿಲ್ ಎಂಬಾತನನ್ನು ಮಹಿಳಾ ಪೋಲಿಸರ ಸಹಾಯದಿಂದ ಬಂಧಿಸಿದ್ದಾರೆ. ಪೊಲೀಸರು ಬರುವ ವಿಷಯ ತಿಳಿದು ಅನಿಲ್ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಆದರೆ ಆತ ಈಗ ಅಪಾಯದಿಂದ ಪಾರಾಗಿದ್ದಾನೆ.
ಇದೇ ವರ್ಷ ಜುಲೈ 19ರಂದು ಕಾರವಾರದ ದೇವಾಲಯೊಂದರಲ್ಲಿ ಅದ್ಧೂರಿಯಾಗಿಯೇ ಅನಿಲ್ ವಿವಾಹವಾಗಿತ್ತು. ಹುಡುಗಿ ದೇಹದಲ್ಲಿ ದಷ್ಟ ಪುಷ್ಟ ವಾಗಿದ್ದು ಅಪ್ರಾಪ್ತೆ ಯಲ್ಲ ಎಂದು ವಿವಾಹ ಮಾಡಲಾಗಿತ್ತು ಎಂದು ಹುಡುಗಿ ಸಂಬಂಧಿಕರು ತಿಳಿಸಿದ್ದಾರೆ. ಪೋಲಿಸರು ಬಾಲ್ಯ ವಿವಾಹ ಎಂದು ತಿಳಿದ ಬಳಿಕ ವರ ಹಾಗೂ ವಧು ಕಡೆ ಸಂಭಂದಿಕರು ದುಃಖಿತರಾಗಿದ್ದಾರೆ.ಈಗ ಮದುವೆಗೆ ಹೋದ ಸಂಬಂಧಿಕರು ಸೇರಿ ಒಟ್ಟು 60 ಜನರಿಗೆ ನೋಟಿಸ್ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಸಹ ಪ್ರಕರಣ ದಾಖಲಾಗಿದೆ. ಅನಿಲ್ ಕಾರವಾರ ಕಾರಾಗೃಹ ವಶದಲ್ಲಿದ್ದಾನೆ. ಅಪ್ರಾಪ್ತ ವಯಸ್ಕ ವಧುವನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.