Advertisement

ಜೀವ ಜಗತ್ತಿನ ಮಹತ್ವ ಸಾರುವ ಕರ್ವಾಲೋ 

04:10 PM Jun 27, 2018 | |

ಕನ್ನಡ ಸಾರಸತ್ವ ಲೋಕದಲ್ಲಿ ಜ್ಞಾನ ಸಾಹಿತ್ಯದ ಪರಿಚಯದೊಂದಿಗೆ ಓದುಗರೊಂದಿಗೆ ಇದ್ದವರು ಸಾಹಿತಿ ಪೂರ್ಣಚಂದ್ರ ತೇಜಸ್ವಿ. ಇವರು ಮೂಡುಗರೆಯಲ್ಲಿದ್ದುಕೊಂಡೇ ಜಗತ್ತಿನ ಜ್ಞಾನ, ಜೀವ ಜಗತ್ತಿನ ಬಗ್ಗೆ ತಮ್ಮ ಬರೆಹ, ಕೃತಿಗಳ ಮೂಲಕ ಓದುಗರಿಗೆ ತಿಳಿಸಿದವರು. ಅಂತಹ ಅನೇಕ ಕೃತಿಗಳಲ್ಲಿ ಕನ್ನಡದ ಅತ್ಯದ್ಭುತ ಕಾದಂಬರಿ ಕರ್ವಾಲೋ. ಗ್ರಾಮೀಣ ಸೊಗಡಿನಲ್ಲಿ ಜ್ಞಾನದ ಅಚ್ಚರಿಗಳನ್ನು ತೆರೆದಿಡುವ ಕರ್ವಾಲೋ ಅಮೂಲ್ಯವಾದ ಕಾದಂಬರಿ. ಇಲ್ಲಿ ಬರುವ ಕರ್ವಾಲೋ, ಮಂದಣ್ಣ, ಪ್ಯಾರಾ, ಲಕ್ಷ್ಮಣ, ಕರಿಯಪ್ಪ ಎಲ್ಲ ಪಾತ್ರಗಳು ಜಾಣ್ಮೆ, ಚತುರತೆಯು ಓದುಗರ ಮನದಲ್ಲಿ ಅಚ್ಚಳಿಯದಂತೆ ಮಾಡುತ್ತದೆ.

Advertisement

ಘಟನೆ 1
ಜೀವ ವಿಜ್ಞಾನಿಯಾಗಿರುವ ಕರ್ವಾಲೋ ಅವರು ಹಕ್ಕಿ, ಕೀಟ, ಹುಳುಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುತ್ತಾರೆ. ಯಾವುದೇ ಒಂದು ಹುಳು ಸಿಕ್ಕರೂ ಸಾಕು ಅದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡಬಲ್ಲವರಾಗಿರುತ್ತಾರೆ. ಹಕ್ಕಿ, ಹುಳುಗಳ ಬಗ್ಗೆ ಇವರ ಜ್ಞಾನವನ್ನು ನೋಡಿ ಲೇಖಕರೇ ಬೆರಗಾಗುತ್ತಾರೆ.

ಘಟನೆ 2
ಕಾದಂಬರಿಯಲ್ಲಿ ಬರುವ ಇನ್ನೊಂದು ಮುಖ್ಯ ಪಾತ್ರ ಮಂದಣ್ಣ. ಇವನನ್ನು ಎಲ್ಲರೂ ದಡ್ಡನೆಂದು ತಿಳಿದಿರುತ್ತಾರೆ. ಆದರೆ ಇವನಿಗೆ ಇರುವ ಕೀಟ, ಜೇನುಹುಳುಗಳು ಹಾಗೂ ಕಾಡು ಪ್ರಾಣಿಗಳ ಬಗ್ಗೆ ಸೂಕ್ಷ್ಮ ಜ್ಞಾನ ನೋಡಿ ಕರ್ವಾಲೋ ಹಾಗೂ ಸ್ವತಃ ಲೇಖಕರೇ ಬೆರೆಗಾಗುತ್ತಾರೆ. ಮಂದಣ್ಣ ಹುಡುಗಾಟಿಕೆ ವರ್ತನೆಯನ್ನು ಕರ್ವಾಲೋ ವಿರೋಧಿಸಿದರೂ ಅವನ ಸಾಮಾನ್ಯ ಜ್ಞಾನವನ್ನು ಮಾತ್ರ ಅಲ್ಲಗಳೆಯುವುದಿಲ್ಲ. ಅದಕ್ಕೆ ಅವನನ್ನು ಸಹಾಯಕನಾಗಿ ಸೇರಿಸಿಕೊಳ್ಳುತ್ತಾರೆ. ಅವರ ವೈಜ್ಞಾನಿಕ ಸಂಶೋಧನೆಯಲ್ಲಿ ಮಂದಣ್ಣನೂ ಮುಖ್ಯ ಭಾಗವಾಗುತ್ತಾನೆ.

ಘಟನೆ 3
ಕರ್ವಾಲೋ ನೇತೃತ್ವದಲ್ಲಿ ಒಂದು ದಿನ ವಿಶಿಷ್ಟವಾದ ಓತಿಕ್ಯಾತವನ್ನು ಹಿಡಿಯಲು ತಂಡವೊಂದು ಕಾಡಿಗೆ ಹೋಗುತ್ತದೆ. ಓತಿಕ್ಯಾತ ಕಂಡರೂ ಅವರ ಕೈಗೆ ಸಿಗುವುದಿಲ್ಲ. ಆದರೆ ಇಲ್ಲಿ ಚರ್ಚೆಯಾಗುವ ಜೀವ ಜಗತ್ತಿನ ಕುರಿತಾದ ಸಂಭಾಷಣೆ, ಚರ್ಚೆ, ವಿಶೇಷ ಮಾಹಿತಿಗಳೇ ಮುಖ್ಯವಾಗುತ್ತದೆ. ಒಟ್ಟಿನಲ್ಲಿ ವೈಜ್ಞಾನಿಕ ಜೀವ ಜಗತ್ತಿನ ಸಂಪೂರ್ಣ ವಿವರಣೆಯನ್ನು ತೆರೆದಿಡುವ ಈ ಕೃತಿ ಓದುಗರನ್ನು ಜೀವಜಗತ್ತಿನೊಳಗೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ. 

ಶಿವ ಸ್ಥಾವರಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next