Advertisement

ರಾಜಕಾರಣಿ ಮಾತ್ರವಲ್ಲ ಬಹು“ಮುಖಿ” ಕರುಣಾನಿಧಿ ಕುರಿತ ವಿಡಿಯೋ ಮಾಹಿತಿ

06:07 PM Aug 08, 2018 | Sharanya Alva |

ಬಡ ಕುಟುಂಬದಲ್ಲಿ ಜನಿಸಿದ್ದ ದಕ್ಷಿಣಾಮೂರ್ತಿ ಎಂಬ ಈ ಯುವಕ ತಮಿಳರ ಪಾಲಿಗೆ ಆರಾಧ್ಯ ದೈವ, ದ್ರಾವಿಡ ನಾಡು ಕಂಡ ಅಪರೂಪದ ಮೇರು ವ್ಯಕ್ತಿತ್ವದ ರಾಜಕಾರಣಿ. 14ನೇ ವಯಸ್ಸಿನಲ್ಲಿಯೇ ಹೋರಾಟಕ್ಕಿಳಿದಿದ್ದು, ಬಾಲ್ಯದಲ್ಲಿಯೇ ಮಾನವರ್ ನೇಸನ್ ಎಂಬ ಕೈಬರಹದ ಪತ್ರಿಕೆಯ ಮೂಲಕ ಗುರುತಿಸಿಕೊಂಡಿದ್ದ ಈ ವ್ಯಕ್ತಿಯೇ ಮುತುವೇಲ್ ಕರುಣಾನಿಧಿ. ಹೌದು ದಕ್ಷಿಣ ಭಾರತದ ಅತ್ಯಂತ ಪ್ರಭಾವಿ ನಾಯಕ, ಬರೋಬ್ಬರಿ 13 ಬಾರಿ ತಮಿಳುನಾಡಿನ ಶಾಸಕರಾಗಿ ಆಯ್ಕೆ, 5 ಬಾರಿ ಮುಖ್ಯಮಂತ್ರಿ ಪಟ್ಟವೇರಿದ್ದ ಕರುಣಾನಿಧಿ ರಾಜಕೀಯದ ಹಾದಿಯಲ್ಲಿ ಹಲವಾರು ಏಳುಬೀಳು ಕಂಡವರು. ಕಳೆದ 11ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರುಣಾನಿಧಿ ಮಂಗಳವಾರ ಸಂಜೆ ಅಸ್ತಂಗತರಾಗಿದ್ದಾರೆ. ಇದರೊಂದಿಗೆ ದಕ್ಷಿಣ ಭಾರತದ ದ್ರಾವಿಡ ಚಳವಳಿಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ. ಬಹುಮುಖ ಪ್ರತಿಭೆಯ ಕರುಣಾನಿಧಿ ಕೇವಲ ರಾಜಕಾರಣಿ ಮಾತ್ರವಲ್ಲ. ಈ ಕುರಿತ ವಿಡಿಯೋ ಮಾಹಿತಿ ಇಲ್ಲಿದೆ..

Advertisement

(Script and concept:Trasi, Video: sudhir, Voice: varsha shenoy)

Advertisement

Udayavani is now on Telegram. Click here to join our channel and stay updated with the latest news.

Next