ಚೆನ್ನೈ : ತಮಿಳುನಾಡಿನ ಮಾಜೀ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಪರಮೋಚ್ಛ ನೇತಾರ ಮುತ್ತುವೇಲ್ ಕರುಣಾನಿಧಿ ಅವರು ಮಂಗಳವಾರ ಸಾಯಂಕಾಲ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
ತಮಿಳುನಾಡಿನ ಪೊಲೀಸ್ ಡಿಜಿಪಿ ಅವರು ರಾಜ್ಯಾದ್ಯಂತ ಕಾನೂನು ಮತ್ತು ಶಿಸ್ತಿನ ಪರಿಪಾಲನೆಗಾಗಿ ಪೊಲೀಸ್ ವ್ಯವಸ್ಥೆಯನ್ನು ಕಟ್ಟೆಚ್ಚರದಲ್ಲಿ ಇರಿಸಿದ್ದಾರೆ. ಡಿಜಿಪಿ ಅವರು ಈ ಸಂಬಂಧ ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟೆಚ್ಚರದಲ್ಲಿ ಮತ್ತು ಸಮವಸ್ತ್ರದಲ್ಲಿ ಇರುವಂತೆ ಫ್ಯಾಕ್ಸ್ ಸಂದೇಶ ರವಾನಿಸಿದ್ದಾರೆ.
ಈ ನಡುವೆ ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ಕರುಣಾನಿಧಿಯವರ ಪುತ್ರ ಎಂ ಕೆ ಸ್ಟಾಲಿನ್ ಮತ್ತು ಅವರ ಕುಟುಂಬ ಸದಸ್ಯರು ತಮಿಳು ನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.
ಆಸ್ಪತ್ರೆಯಿಂದ ಹೊರ ಬಿದ್ದಿರುವ ತಾಜಾ ವೈದ್ಯಕೀಯ ಬುಲೆಟಿನ್ ಪ್ರಕಾರ ಕರುಣಾನಿಧಿ ಅವರ ದೇಹಾರೋಗ್ಯ ಅತ್ಯಂತ ವಿಷಮಿಸಿದ್ದು ಅಸ್ಥಿರವೂ ಅನಿಶ್ಚಿತವೂ ಆಗಿದೆ. ಅವರ ಮುಖ್ಯ ಅಂಗಾಂಗಳ ಕ್ಷಮತೆ ಹದಗೆಡುತ್ತಲೇ ಸಾಗಿದೆ. ಅವರ ಸ್ಥಿತಿ ಗಂಭೀರವೂ ಶೋಚನೀಯವೂ ಇದೆ.
ನಿನ್ನೆ ಸೋಮವಾರವೇ ಚೆನ್ನೈ ಆಸ್ಪತ್ರೆ ವೈದ್ಯರು ಕರುಣಾನಿಧಿಯವರ ದೇಹಾರೋಗ್ಯ ಮುಂದಿನ 24 ತಾಸುಗಳಲ್ಲಿ ಏನೂ ಹೇಳಲಾಗದ ಸ್ಥಿತಿಯನ್ನು ತಲುಪಿರುವುದಾಗಿ ಪ್ರಕಟಿಸಿದ್ದರು. ಅಂತೆಯೇ ಕರುನಾಧಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಆಸ್ಪತ್ರೆ ಸುತ್ತಮುತ್ತ ಕಾತರದಿಂದ ಜಮಾಯಿಸಿದ್ದಾರೆ.
ಕರುಣಾನಿಧಿಯವರ ಆರೋಗ್ಯ ವಿಷಮಿಸಿ ಅವರು ಆಸ್ಪತ್ರೆಗೆ ಸೇರಿದಂದಿನಿಂದ ಈ ನತಕ ಡಿಎಂಕೆ ಪಕ್ಷದ ಅತ್ಯಂತ ಕಟ್ಟುನಿಟ್ಟಿನ, ಕನಿಷ್ಠ 21 ಮಂದಿ ಕಾರ್ಯಕರ್ತರು ತೀವ್ರ ಆಘಾತದಿಂದ ಮೃತಪಟ್ಟಿದ್ದಾರೆ.