Advertisement

ಕರುಣಾಕರ ರೆಡ್ಡಿ  ವಿರುದ್ಧ  ಈಗ ಜಾತಿ ನಿಂದನೆ ಕೇಸ್‌

03:45 AM Feb 20, 2017 | Harsha Rao |

ಬಳ್ಳಾರಿ: ಜಮೀನು ಮಾಲೀಕತ್ವದ ವಿಚಾರವಾಗಿ ಸಂಸದ ಶ್ರೀರಾಮುಲು ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಿಸಿರುವ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

Advertisement

ನಗರದ ಹವಂಬಾವಿ ಪ್ರದೇಶದ ಟಿ.ನಾಗಪ್ಪ ಎಂಬುವರು ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಹಾಗೂ ಅವರ ಬಾವಮೈದ ವಿಶ್ವನಾಥ ರೆಡ್ಡಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ಗ್ರಾಮೀಣ ಠಾಣೆಯಲ್ಲಿ ಶನಿವಾರ ರಾತ್ರಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಹವಂಬಾವಿ ಪ್ರದೇಶದ ಟಿ.ನಾಗಪ್ಪ, ಟಿ.ಸತ್ಯನಾರಾಯಣ, ಹನುಮಂತಪ್ಪ, ಗೊರವಯ್ಯ, ಚಿಟ್ಟಿ ಹಾಗೂ ರಾಮಣ್ಣ ಎನ್ನುವವರು ವಾಲ್ಮೀಕಿ ಜನಾಂಗಕ್ಕೆ ಸೇರಿದವರಾಗಿದ್ದು, ಸಿರುಗುಪ್ಪ ರಸ್ತೆಯ ಹವಂಬಾವಿ ಪ್ರದೇಶದ ನಿವಾಸಿಗಳಾಗಿದ್ದಾರೆ. ಕರುಣಾಕರರೆಡ್ಡಿ ಅವರ ಮನೆಯೂ ಇಲ್ಲೇ ಇದೆ.

ಫೆ.9ರಂದು ಬೆಳಗ್ಗೆ 7 ಗಂಟೆಗೆ ಈ ಐವರು ಕೆಲಸದ ನಿಮಿತ್ತ ಕರುಣಾಕರರೆಡ್ಡಿ ಮನೆ ಮುಂದೆ ಹೋಗುತ್ತಿದ್ದಾಗ ಕರುಣಾಕರರೆಡ್ಡಿ ಹಾಗೂ ವಿಶ್ವನಾಥ ರೆಡ್ಡಿ ಅವಾಚ್ಯ ಶಬ್ದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ. ಎಲ್ಲರೂ ಒಟ್ಟಿಗೆ ಪ್ರಕರಣ
ದಾಖಲಿಸಲು ಯೋಚಿಸಿದ ನಂತರ ತಡವಾಗಿ ಪ್ರಕರಣ ದಾಖಲಿಸುತ್ತಿರುವುದಾಗಿ ದೂರುದಾರರು ತಿಳಿಸಿದ್ದಾರೆ.

ಅಸಮಾಧಾನ ಸ್ಫೋಟ: ಇತ್ತೀಚೆಗಷ್ಟೇ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಅವರು ಸಂಸದ ಬಿ.ಶ್ರೀರಾಮುಲು ಹಾಗೂ ಇತರರ ವಿರುದ್ಧ ಬಳ್ಳಾರಿ ಸಿಜೆಎಂ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಬಿ.ಶ್ರೀರಾಮುಲು ವಾಲ್ಮೀಕಿ ಜನಾಂಗದ ಮುಖಂಡರಾಗಿದ್ದು, ಕರುಣಾಕರರೆಡ್ಡಿ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದವರೂ ಇದೇ ಜನಾಂಗದವರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. 
**
ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬಹುದಿತ್ತು 
ಬಳ್ಳಾರಿ: ಮಾಜಿ ಸಚಿವ ಕರುಣಾಕರ ರೆಡ್ಡಿ ನನ್ನ ವಿರುದ್ಧ ದಾವೆ ಹೂಡಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಈ ವಿಷಯವನ್ನು ಕುಳಿತುಕೊಂಡು ಚರ್ಚಿಸಿ ಸಮಸ್ಯೆ ಬಗೆಹರಿಸಬಹುದಿತ್ತು. ನ್ಯಾಯಾಲಯಕ್ಕೆ
ಹೋಗುವ ಅವಶ್ಯಕತೆ ಇರಲಿಲ್ಲ ಎಂದು ಸಂಸದ ಬಿ.ಶ್ರೀರಾಮುಲು ತಿಳಿಸಿದರು. ನಗರದಲ್ಲಿ ಭಾನುವಾರ ರಾತ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿರುವುದೂ ಈಗ ತಿಳಿದುಬಂದಿದ್ದು, ಪ್ರಕರಣ ದಾಖಲಿಸಿದವರು ನನ್ನ ಬೆಂಬಲಿಗರಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next