Advertisement

ಕರುನಾಡಿನ ಪ್ರಾತಿನಿಧಿಕ ಸಂಸ್ಥೆ ಕಸಾಪ

03:02 PM May 06, 2019 | Suhan S |

ಬಾಗಲಕೋಟೆ: ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಹೋರಾಟ ಮಾಡುತ್ತ ಬಂದಿದೆ ಎಂದು ಸಾಹಿತಿ ಎಸ್‌.ಎಸ್‌. ಹಳ್ಳೂರ ಹೇಳಿದರು.

Advertisement

ನವನಗರದ ಕರ್ನಾಟಕದ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

ಕಸಾಪ 3 ಲಕ್ಷಕ್ಕಿಂತ ಹೆಚ್ಚು ಸದಸ್ಯತ್ವ ಹೊಂದಿದ್ದು, ಏಷ್ಯಾ ಖಂಡದಲ್ಲಿಯೇ ದೊಡ್ಡ ಪ್ರಾತಿನಿಧಿಕ ಸಂಸ್ಥೆಯಾಗಿದೆ. 84 ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಮಾಡುವುದರ ಮೂಲಕ ಕನ್ನಡ ಸಾಹಿತ್ಯ, ಸಂಸ್ಕೃತಿ ಅಲ್ಲದೇ ಸಾಹಿತಿಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದರು.

ಎಚ್.ಎಂ. ಜುಟ್ಟಲ ಮಾತನಾಡಿ, ಕನ್ನಡ ಭಾಷೆ, ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಒಂದು, ಕನ್ನಡ ಲಿಪಿಯು ಬಹಳಷ್ಟು ವಿಶಿಷ್ಟತೆ ಹೊಂದಿರುವ ಭಾಷೆಯಾಗಿದೆ ಎಂದು ವಿವರಿಸಿದರು.

ಆರ್‌.ಎಂ. ಕಟ್ಟಿಮನಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರಿಗೆ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

Advertisement

ಗುರುಸ್ವಾಮಿ ಗಣಾಚಾರಿ ಮಾತನಾಡಿ, ನಿರಂತರ ಅಧ್ಯಯನಶೀಲತೆಯಿಂದ ಉತ್ತಮವಾದ ಕಾವ್ಯ ಹೊರಬರುವುದು. ಹೃದಯದಿಂದ ಬಂದ ಕಾವ್ಯ ಮಾತ್ರ ಮತ್ತೂಬ್ಬರ ಹೃದಯ ಪ್ರವೇಶಿಸುವುದು ಎಂದು ಹೇಳಿದರು.

ಕವಿಗೋಷ್ಠಿಯಲ್ಲಿ ಎಸ್‌.ಐ. ಕುಂಬಾರ, ಮೀನಾಕ್ಷಿ ಮುಂಡಗನೂರ, ಮಹಾಂತೇಶ ಕರಬಾಶೆಟ್ಟಿ, ಶಂಕರ ಲಮಾಣಿ, ಎಸ್‌.ಎಸ್‌. ಕಾಶೀಮಠ, ವೈ. ಸುಧೀಂದ್ರ, ಎಸ್‌.ಆರ್‌. ಪಟ್ಟಣಶೆಟ್ಟಿ, ಸಾಗರ ಕೆಂಚನ್ನವರ, ರಾಜಶೇಖರ ಯಲಗಣ್ಣವರ, ರಾಜು ಯಾದವ, ಜ್ಯೋತಿ ದಿವಟೆ, ವಿನೋದ ಶಿರಾಳಶೆಟ್ಟಿ, ಶಿವಕುಮಾರ ರಾಂಪುರ, ಪ್ರದೀಪ ಪಾಡಮುಖೀ, ಅಂಜನಾ ಕೂಡಗಿ, ಸವಿತಾ ಪೂಜಾರಿ, ಅಂಬಿಕಾ ಪೂಜಾರಿ, ಶ್ರೀಧರ ಜಾಲಿಹಾಳ, ಅಶೋಕ ಮಾದರ, ಗಿರೀಶ ಸುನಗ, ಪ್ರೊ| ಸರೋಜನಿ ಹೊಸಕೇರಿ ಮುಂತಾದ ಕವಿಗಳು ಕವನವಾಚನ ಮಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಿ.ಕೆ. ತಳವಾರ, ಡಾ|ಜಿ.ಐ. ನಂದಿಕೋಲಮಠ, ವೀರಣ್ಣ

ಅಥಣಿ ಮುಂತಾದವರು ಉಪಸ್ಥಿತರಿದ್ದರು. ಎಸ್‌.ಆರ್‌. ಪಟ್ಟಣಶೆಟ್ಟಿ ಸ್ವಾಗತಿಸಿದರು. ಪ್ರೊ| ಎಂ.ಬಿ ಉಗರಗೋಳ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next