Advertisement

ಕರುಣ್‌ ನಾಯರ್‌ಗೆ ಕೋವಿಡ್; ಚೇತರಿಕೆಯ ಬಳಿಕ ಹಬ್ಬಿದ ಸುದ್ದಿ

06:32 PM Aug 13, 2020 | mahesh |

ಬೆಂಗಳೂರು: ಕರ್ನಾಟಕ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ಅವರಿಗೆ ಕೋವಿಡ್ ಸೋಂಕು ತಗುಲಿದ್ದು ತಡವಾಗಿ ಸುದ್ದಿಯಾಗಿದೆ. ಆದರೀಗ ಅವರು ಚೇತರಿಸಿಕೊಂಡಿದ್ದು, ಕಿಂಗ್ಸ್‌ ಇಲೆವೆನ್‌ ತಂಡೊಂದಿಗೆ ಯುಎಇಗೆ ತೆರಳುವ ನಿರೀಕ್ಷೆಯಲ್ಲಿದ್ದಾರೆ.

Advertisement

ಎರಡು ವಾರಗಳ ಹಿಂದೆಯೇ ಕರುಣ್‌ ನಾಯರ್‌ ಅವರಲ್ಲಿ ಕೋವಿಡ್ ಪಾಸಿಟಿವ್‌ ಕಂಡು ಬಂದಿತ್ತು ಎಂಬುದಾಗಿ ಕ್ರಿಕೆಟ್‌ ವೆಬ್‌ಸೈಟ್‌ “ಕ್ರಿಕ್‌ ಇನ್‌ಫೋ’ ವರದಿ ಮಾಡಿದೆ. ಅನಂತರ ಅವರು 14ಕ್ಕೂ ಹೆಚ್ಚು ದಿನಗಳ ಕಾಲ ಸೆಲ್ಫ್ ಐಸೊಲೇಶನ್‌ಗೆ ಒಳಗಾಗಿದ್ದರು. ಸೋಮವಾರದ ಫ‌ಲಿತಾಂಶ ನೆಗೆಟಿವ್‌ ಬಂದಿದೆ. ಈಗ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಆದರೆ ನಾಯರ್‌ ಇನ್ನೂ ಮೂರು ಸಲ ಕೋವಿಡ್‌-19 ಪರೀಕ್ಷೆಗೆ ಒಳಗಾಗಬೇಕಿದೆ. ಇಲ್ಲಿ ನೆಗೆಟಿವ್‌ ಫ‌ಲಿತಾಂಶ ಕಂಡು ಬಂದರಷ್ಟೇ ಅವರು ಯುಎಇಗೆ ತೆರಳಬಹುದು.

ಒಂದು ದಿನದ ಹಿಂದಷ್ಟೇ ರಾಜಸ್ಥಾನ್‌ ರಾಯಲ್ಸ್‌ ತಂಡದ ಫೀಲ್ಡಿಂಗ್‌ ಕೋಚ್‌ ದಿಶಾಂತ್‌ ಯಾಗ್ನಿಕ್‌ ಅವರಲ್ಲಿ ಕೋವಿಡ್ ಪಾಸಿಟಿವ್‌ ಕಂಡು ಬಂದಿತ್ತು. ಇದರಿಂದ ಐಪಿಎಲ್‌ ಕೂಡ ಕೋವಿಡ್ ಆತಂಕದಿಂದ ಪಾರಾಗದು ಎಂಬ ಸೂಚನೆಯೊಂದು ಲಭಿಸಿತ್ತು. ಆದರೆ ಇವರಿಗಿಂತ ಮೊದಲೇ ಕರುಣ್‌ ನಾಯರ್‌ ಅವರಲ್ಲಿ ಕೋವಿಡ್ ಪಾಸಿಟಿವ್‌ ಕಂಡುಬಂದದ್ದು ಸುದ್ದಿ ಆಗದಿದ್ದುದೊಂದು ಅಚ್ಚರಿ.

Advertisement

Udayavani is now on Telegram. Click here to join our channel and stay updated with the latest news.

Next