Advertisement

ಐಎನ್‌ಎಕ್ಸ್‌ ಮೀಡಿಯಾ : ಕಾರ್ತಿಗೆ ಮಾ.24ರ ವರೆಗೆ ಜೈಲೇ ಗತಿ

04:11 PM Mar 12, 2018 | Team Udayavani |

ಹೊಸದಿಲ್ಲಿ : ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಹಗರಣದಲ್ಲಿ ಜೈಲು ಪಾಲಾಗಿರುವ ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಮಾರ್ಚ್‌ 24ರ ವರೆಗೆ  ಜೈಲೇ ಗತಿ ಎಂಬಂತಾಗಿದೆ. 

Advertisement

ಸಿಬಿಐ ವಿಶೇಷ ನ್ಯಾಯಾಲಯ ಇಂದು ಕಾರ್ತಿ ಅವರ ನ್ಯಾಯಾಂಗ ಬಂಧನವನ್ನು ಮಾರ್ಚ್‌ 24ರ ವರೆಗೆ ವಿಸ್ತರಿಸಿ ಆದೇಶ ನೀಡಿತೆಂದು ಎಎನ್‌ಐ ಸುದ್ದಿ ಸಂಸ್ಥೆ ತಿಳಿಸಿದೆ. 

ಕಾರ್ತಿ ವಿಚಾರಣೆ ಈ ಮೊದಲು ನಿಗದಿಯಾಗಿರುವಂತೆ ಮಾರ್ಚ್‌ 15ರಂದೇ ನಡೆಯುತ್ತದೆ ಎಂದಿರುವ ನ್ಯಾಯಾಲಯ ಕಾರ್ತಿಗೆ ಜೈಲಿನಲ್ಲಿ ಮನೆ ಆಹಾರ ನೀಡಲು ಅನುಮತಿ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next