Advertisement

ನಟ ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ‘ಸತ್ಯ ಪ್ರೇಮ್ ಕಿ ಕಥಾ’

05:26 PM Sep 03, 2022 | Team Udayavani |

ಮುಂಬಯಿ: ನಟ ಕಾರ್ತಿಕ್ ಆರ್ಯನ್ ಅವರು ತಮ್ಮ ಮುಂದಿನ ಚಿತ್ರ “ಸತ್ಯ ಪ್ರೇಮ್ ಕಿ ಕಥಾ” ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದೇನೆ ಎಂದು ಶನಿವಾರ ಹೇಳಿದ್ದಾರೆ.

Advertisement

ಹಾಸ್ಯ ಚಿತ್ರ “ಭೂಲ್ ಭುಲೈಯಾ 2” ನ ಗಲ್ಲಾಪೆಟ್ಟಿಗೆಯ ಯಶಸ್ಸಿನ ಬಳಿಕ 2022 ರಲ್ಲಿ ಹಿಂದಿ ಚಲನಚಿತ್ರೋದ್ಯಮದ ತಾರೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ ನಟ, ಮುಂಬರುವ ಪ್ರಾಜೆಕ್ಟ್ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ.

“ಶುಭಾರಂಭ್ #ಸತ್ಯಪ್ರೇಮ್‌ಕಿ ಕಥಾ ಗಣಪತಿ ಬಪ್ಪಾ ಮೋರಿಯಾ” ಎಂದು ನಟ ಗಣೇಶನಿಂದ ಆಶೀರ್ವಾದ ಪಡೆಯುವ ಫೋಟೋ ಜತೆಗೆ ಬರೆದಿದ್ದಾರೆ.

ನಮಹ್ ಪ್ರೊಡಕ್ಷನ್ಸ್ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ‘ಸತ್ಯಪ್ರೇಮ್ ಕಿ ಕಥಾ’ದಲ್ಲಿ ಆರ್ಯನ್ ಅವರ “ಭೂಲ್ ಭುಲೈಯಾ 2” ಸಹನಟಿ ಕಿಯಾರಾ ಅಡ್ವಾಣಿ ಕೂಡ ಕಾಣಿಸಿಕೊಂಡಿದ್ದಾರೆ.ಚಿತ್ರವನ್ನು 2023, ಜೂನ್ 29 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next