Advertisement

ಕಾರ್ತಿ ಬಂಧನ ರಾಜಕೀಯ ಪ್ರತೀಕಾರ: ಕಾಂಗ್ರೆಸ್‌ ಖಂಡನೆ

11:54 AM Feb 28, 2018 | udayavani editorial |

ಹೊಸದಿಲ್ಲಿ : ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿ ನಡೆದಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಬಂಧನ ರಾಜಕೀಯ ಪ್ರತೀಕಾರದ ಕ್ರಮವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ

Advertisement

ಮೋದಿ ಸರಕಾರ ತನ್ನ ಹಗರಣಗಳನ್ನು ಮತ್ತು ತನ್ನ ದುರಾಡಳಿತವನ್ನು  ಮರೆಮಾಚಲು ಮತ್ತು ಇವುಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಹರಿಸುವ ತಂತ್ರವಾಗಿ ಕಾರ್ತಿ ಚಿದಂಬರಂ ಅವರನ್ನು ಬಂಧಿಸಿದೆ ಎಂದು ಕಾಂಗ್ರೆಸ್‌ ವಕ್ತಾರ ಮತ್ತು ಪಕ್ಷದ ಸಂವಹನ ಪ್ರಭಾರ ರಣದೀಪ್‌ ಸುರ್‌ಜೇವಾಲಾ ಹೇಳಿದ್ದಾರೆ. 

ಚಿದಂಬರಂ ಮತ್ತು ಅವರ ಕುಟುಂಬದವರ ವಿರುದ್ಧ ಸರಕಾರ ಕೈಗೊಂಡಿರವ ಈ ಪ್ರತೀಕಾರದ ಕ್ರಮದಿಂದ ನಾವು ಎದೆಗುಂದುವುದಿಲ್ಲ, ನಾವು ಸತ್ಯ ಹೇಳುವುದನ್ನು ಮುಂದುವರಿಸುತ್ತೇವೆ; ಅಂತೆಯೇ ಮೋದಿ ಸರಕಾರ ಭ್ರಷ್ಟಾಚಾರಗಳನ್ನು ಬಯಲು ಮಾಡಿಯೇ ತೀರುತ್ತೇವೆ’ ಎಂದು ಸುರ್‌ಜೇವಾಲಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next