Advertisement

ಮೂರು ಸಾವಿರ ಮಠದಲ್ಲಿ ಕಾರ್ತಿಕೋತ್ಸವ ಸಂಭ್ರಮ

01:08 PM Nov 21, 2017 | |

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದಲ್ಲಿ ಕಾರ್ತಿಕ ಸೋಮವಾರದಂದು ಲಕ್ಷ ದೀಪೋತ್ಸವ ನಡೆಯಿತು. ಮೂರುಸಾವಿರ ಮಠದ ಜಗದ್ಗುರು ಶ್ರೀ  ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಕಾರ್ತಿಕ ದೀಪೋತ್ಸವಕ್ಕೆ ದೀಪ ಬೆಳಗಿ ಚಾಲನೆ ನೀಡಿದರು.

Advertisement

ಶ್ರೀಮಠದ ಆವರಣದಿಂದ ಹಿಡಿದು ಹೊರ ಭಾಗದ  ವರೆಗೂ ಪಣತಿಗಳನ್ನು ಇಟ್ಟು ದೀಪ ಬೆಳಗಿಸಲಾಯಿತು. ಬೆಳಗ್ಗೆಯಿಂದ ಶ್ರೀ ಗುರುಸಿದ್ಧೇಶ್ವರರ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ  ಧಾರ್ಮಿಕ ಕಾರ್ಯಕ್ರಮ ನಡೆದವು.

ಮೂರುಸಾವಿರ ಮಠದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಬೆಳಗ್ಗೆ ಮಠದ ಆವರಣದಲ್ಲಿ ರಂಗೋಲಿ ಬಿಡಿಸಿ ಅದಕ್ಕೆ ತಕ್ಕಂತೆ ಹಣತೆಗಳನ್ನು ಇಟ್ಟು ಅಲಂಕಾರ ಮಾಡಿದ್ದರು. ಇದಲ್ಲದೇ ಮೂರುಸಾವಿರ ಮಠದ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಸಂಗೀತ  ಕಾರ್ಯಕ್ರಮ ಪ್ರಸ್ತುತ ಪಡಿಸಿದರು. 

ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಅರವಿಂದ ಕುಬಸದ, ಗೌರವ ಕಾರ್ಯದರ್ಶಿ ಹನುಮಂತ ಶಿಗ್ಗಾಂವ, ಮಹೇಶ ಟೆಂಗಿನಕಾಯಿ, ಶಂಕರಣ್ಣ ಮುನವಳ್ಳಿ, ಕುಮಾರಗೌಡ ಪಾಟೀಲ, ಚನ್ನಬಸಪ್ಪ ಧಾರವಾಡಶೆಟ್ರ, ವಿರೇಶ ಸಂಗಳದ, ರಾಜು ಕೊರಾಣಮಠ ಮೊದಲಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next