Advertisement

ಶ್ರೀ ಶಂಕರನಾರಾಯಣ ದೇಗುಲದಲ್ಲಿ ಸಂಭ್ರಮದಿಂದ ನಡೆದ ಕಾರ್ತೀಕ ದೀಪೋತ್ಸವ

04:04 PM Dec 21, 2021 | Team Udayavani |

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ  ಐತಿಹಾಸಿಕ ಸೋದೆ ಅರಸರ ಕಾಲದಲ್ಲಿ ಕರಿ ಕಲ್ಲಿನಿಂದ ಕಟ್ಟಿದ  ಅಪರೂಪದ ಶಿಲಾ ಕೆತ್ತನೆಗಳಿಂದ ಕಂಗೊಳಿಸುತ್ತಿರುವ ಮಠದೇವಳ ಗ್ರಾಮದ  ಹಳೇಯೂರು ಮಜರೆಯಲ್ಲಿರುವ ದೇಗುಲವೇ ಶ್ರೀ ಶಂಕರನಾರಾಯಣ.  ಈ ಬೃಹತ್ ಶಿಲಾ ದೇಗುಲದಲ್ಲಿ ಕಾರ್ತೀಕ ದೀಪೋತ್ಸವ ಸಂಭ್ರಮದಲ್ಲಿ ನಡೆಯಿತು.

Advertisement

ಮಾರ್ಗಶಿರ ಶುಕ್ಲ ಪಕ್ಷದ  ಹುಣ್ಣಿಮೆಯಂದು  ಸೋಂದಾ ಜಾಗೃತ ವೇದಿಕೆ ಯು ಈ ಭಾಗದ  ನಾಗರೀಕರೊಂದಿಗೆ ಸೇರಿ ವಿದ್ವಾನ್ ನಾರಾಯಣ ಶಾಸ್ತ್ರಿಗಳ ಆಚಾರ್ಯತ್ವದಲ್ಲಿ  ಗೋಪಾಲ ಹೆಗಡೆ ಹಳೇಯೂರು ಇವರ  ಯಜಮಾನಿಕೆಯಲ್ಲಿ ದೇವರುಗಳಿಗೆ ದೀಪೋತ್ಸವವನ್ನು  ವಿಜೃಂಭಣೆಯಿಂದ ನೆರವೇರಿಸಲಾಯಿತು. ಪೂಜಾ ಕೈಂಕರ್ಯದಲ್ಲಿಸುಬ್ರಾಯ ಜೋಶಿ ಸಂಪೇಸರ ಸಹಕರಿಸಿದರು.

ಈ ವೇಳೆ ಜಾಗೃತ ವೇದಿಕೆಯ ಕಾರ್ಯಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ಕಾರ್ಯದರ್ಶಿ ಶ್ರೀಧರ ಹೆಗಡೆ ಗುಡ್ಡೇಮನೆ  ಸದಸ್ಯರಾದ ಸತ್ಯನಾರಾಯಣ ಹೆಗಡೆ ಹಳೇಯೂರು ಮಾಬ್ಲೇಶ್ವರ ಹೆಗಡೆ, ಬಂಧೀಸರ ಸೋಂದಾ ಕಸಬಾ ಮಾತೃ ಮಂಡಳದ ಅಧ್ಯಕ್ಷೆ  ಸ್ವಾತಿ ಪರಾಂಜಪೆ ತೇರಬೀದಿ, ಹಳೇಯೂರು – ತೇರಬೀದಿ- ವಾಜಗದ್ದೆ -ದೂಪದಹೊಂಡ ಭಾಗದ ನಾಗರೀಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next