ಕೋಲಾರ: ನಗರದ ಅಂತರಗಂಗೆಯ ದಕ್ಷಿಣ ಕಾಶಿ ವಿಶ್ವೇಶ್ವರ ಸನ್ನಿಧಿ ಯಲ್ಲಿ ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಜಿಲ್ಲೆ ವಿವಿಧೆಡೆಗಳಿಂದ ಬೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಲ್ಲಿನ ಬಸವನ ಬಾಯಿಂದ ಬರುವ ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡು ಪುನೀತರಾದರು.
ಕಲ್ಲಿನ ಬಸವನ ಬಾಯಿಂದ ಬರುವ ನೀರು ಪವಿತ್ರ ಗಂಗಾನದಿಯಿಂ ದಲೇ ಬರುತ್ತಿದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದ್ದು, ಮುಂಜಾ ನೆಯ ಚಳಿಯಲ್ಲೂ ಭಕ್ತರು ಅಂತರಗಂಗೆ ಬೆಟ್ಟದತ್ತ ದಾಪುಗಾಲು ಹಾಕಿದ್ದು ವಿಶೇಷವಾಗಿತ್ತು.
ನಗರದ ಬಸ್ ನಿಲ್ದಾಣದ ಸಮೀಪ ಭಕ್ತರಿಗೆ ಸ್ವಾಗತ ಕೋರುವ ಬೃಹತ್ ಕಮಾನುಗಳು ಇಡೀ ಪ್ರದೇಶವನ್ನು ಕೇಸರೀಮಯವಾಗಿಸಿದ್ದವು. ಭಜರಂಗದಳದ ಭಗವಧ್ವಜಗಳು ರಾರಾಜಿಸುತ್ತಿದ್ದವು. ಬೆಟ್ಟದ ತಪ್ಪ ಲಲ್ಲಿನ ಜಲಕಂಠೇಶ್ವರ ಸನ್ನಿಧಿಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಗೋಕುಲ ಮಿತ್ರಬಳಗ ಮತ್ತಿತರ ಸಂಘಟನೆಗಳಿಂದ ಉಚಿತ ಅನ್ನದಾನ ಮತ್ತು ಪ್ರಸಾದ ವಿನಿಯೋಗವಾಯಿತು. ಕಲ್ಲಿನ ಬಸವನ ಬಾಯಲ್ಲಿ ಬರುವ ಅಂತರಗಂಗೆಯ ಪವಿತ್ರ ಜಲ ಪ್ರಕ್ಷಣೆಗಾಗಿ ಸಾವಿರಾರು ಭಕ್ತರು ಆಗಮಿಸಿದ್ದು, ಸ್ವಾಮಿಯ ದರ್ಶನಕ್ಕೆ ಉದ್ದೂದ್ದ ಸಾಲು ಕಂಡು ಬಂತು.
ಉಚಿತ ಬಸ್‌ಸೇವೆ: ಕಡೆ ಕಾರ್ತಿಕ ಸೋಮವಾರದ ಅಂತರಗಂಗೆ ಜಾತ್ರೆ ಗಾಗಿ ಹಿಂದೂ ಸಂಘಟನೆಗಳ ಮನವಿಗೆ ಸ್ಪಂದಿಸಿ ಅನೇಕರು ಉಚಿತ ಬಸ್ ಮತ್ತು ವಾಹನ ಸೇವೆಯನ್ನು ಒದಗಿಸಿದ್ದು, ಶ್ರೀಶಾಂತಿ ಕಲ್ಯಾಣ ಮಂಟಪ, ಬಾಲಕೃಷ್ಣ ಜ್ಯುವೆಲರ್, ಅನಂತ್ ಜ್ಯುವೆಲರ್, ಜಿಲ್ಲಾ ಚಿನ್ನ ಬೆಳ್ಳಿ ವರ್ತಕರ ಸಂಘ, ನಾಗರಾಜ ಸ್ಟೋರ್ ಮತ್ತಿತರರು ನೆರವಾದರು.
ಕಾರ್ತಿಕ ಮಾಸದ ಕಡೇ ಸೋಮವಾರ ದಕ್ಷಿಣ ಕಾಶಿ ಕ್ಷೇತ್ರದ ದೇಗುಲದಲ್ಲಿ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಶಿವಲಿಂಗ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಲಾಗಿತ್ತು. ಸಿದ್ಧತಾ ಕಾರ್ಯದಲ್ಲಿ ಭಜರಂಗದಳ ಮುಖಂಡರಾದ ಬಾಬು, ಬಾಲಾಜಿ, ಅಪ್ಪಿ, ವಿಶ್ವನಾಥ್ ಮತ್ತಿತರರಿದ್ದರು.
ಭಜರಂಗದಳ ಮುಖಂಡ ಬಾಲಾಜಿ, ಜಿಲ್ಲಾ ಸಂಚಾಲಕ ಬಾಬು, ಅಪ್ಪಿ, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಮುಖಂಡ ಬಂಕ್ ಮಂಜುನಾಥ್, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಬಜರಂಗದಳದ ಶಬರೀಷ್, ವಿಶ್ವನಾಥ್, ಮಂಜು, ದೀಪು, ಪೃಥ್ವಿ, ಸಂಕೇತ್,ಯಶ್ವಂತ್, ಸಾಯಿಸುಮನ್, ಸಾಯಿ ಮೌಳಿ, ರಾಜೇಶ್, ಭವಾನಿ, ಯಶ್, ವಿಶಾಖ, ಕೊಂಡೇ, ಯಶವಂತ್ ಇತರರಿದ್ದರು.