Advertisement

ಅದ್ಧೂರಿ ಕರೋಶಿ ಲಕ್ಷ್ಮೀದೇವಿ ಜಾತ್ರೆ

12:12 PM Mar 18, 2020 | Suhan S |

ಚಿಕ್ಕೋಡಿ: ಕೊರೊನಾ ಭೀತಿ ನಡುವೆಯೂ ತಾಲೂಕಿನ ಕರೋಶಿ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ತೆರೆಕಂಡಿತು.

Advertisement

ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಜಾತ್ರಾ ಮಹೋತ್ಸವದ ಕೊನೆಯ ದಿನದಂದು ಸಂಜೆ ನಡೆದ ಮೂರ್ತಿಗಳ ಹೊನ್ನಾಟ ಕಾರ್ಯಕ್ರಮದಲ್ಲಿ ಕರೋಶಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಎರಡು ಗಂಟೆ ನಡೆದ ಹೊನ್ನಾಟದಲ್ಲಿ ಭಕ್ತರು ದೇವಿ ಮೂರ್ತಿಗಳ ಮೇಲೆ ಭಂಡಾರ, ಉತ್ತತ್ತಿ, ಫಲಪುಷ್ಪ ಹಾರಿಸಿ ಭಕ್ತಿ ಸೇವೆ ಸಲ್ಲಿಸಿದರು.

ನಂತರ ಮೂರ್ತಿಗಳ ವಿಸರ್ಜನೆ ನಡೆಯಿತು. ಇಡೀ ಪರಿಸರ ಭಂಡಾರಮಯವಾಗಿತ್ತು. ಐದು ದಿನನಡೆದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕುದುರೆ, ಸೈಕಲ್‌ ಶರ್ಯತ್ತುಗಳು ಜನಮನ ಸೆಳೆದವು. ಐದು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾತ್ರಾ ಕಮಿಟಿ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ಕಲ್ಪಿಸಿತ್ತು.ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯದಿಂದಲೂ ಭಕ್ತರು ಜಾತ್ರೆಗೆ ಆಗಮಿಸಿದರು.

ಗ್ರಾಮದ ಮುಖಂಡ ಮಹೇಶ ಭಾತೆ, ಗ್ರಾಮ ಪಂಚಾಯತಿ ಅಧ್ಯಕ್ಷ ಸಂಜಯ ಕಾಂಬಳೆ, ವಿಜಯಕುಮಾರ್‌ ಕೋಠಿವಾಲೆ, ದುಂಡಯ್ಯ ಪೂಜಾರಿ, ಕಾಶಿನಾಥ ಭಾಮನೆ, ಗುರು ನಿರ್ವಾಣಿ, ಅಣ್ಣಪ್ಪ ಶೆಂಡೂರೆ, ಸುರೇಶ ಕೇಸ್ತಿ, ಬಾಳು ಮುಗಳಿ, ಪಿಂಟು ಹಳಿಜೋಳಿ ಸೇರಿದಂತೆ ಮುಂತಾದವರು ಜಾತ್ರೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next