Advertisement

ಕರೋಪಾಡಿ ಜಲೀಲ್‌ ಕೊಲೆ ಪ್ರಕರಣ:8 ಆರೋಪಿಗಳಿಗೆ ಜಾಮೀನು

11:35 AM Oct 18, 2017 | |

ಬೆಂಗಳೂರು: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್‌ ಜಲೀಲ್‌ ಕೊಲೆ ಪ್ರಕರಣದ 7 ಮಂದಿ ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

11 ಮಂದಿ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ| ಕೆ.ಎಸ್‌. ಮುದ್ಗಲ್‌ ಅವರಿದ್ದ ಏಕಸದಸ್ಯ ಪೀಠ,  ಎಂಟು ಮಂದಿ ಆರೋಪಿಗಳಿಗೆ ತಲಾ 1 ಲಕ್ಷ ರೂ ಬಾಂಡ್‌, ಒಬ್ಬರ ಶ್ಯೂರಿಟಿ, ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಗಮನಕ್ಕೆ ತಾರದೆ ಹೊರರಾಜ್ಯಗಳಿಗೆ ತೆರಳುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತು.

ಆರೋಪಿಗಳಾದ ಪ್ರಜ್ವಲ್‌ ರೈ, ಪುಷ್ಪರಾಜ್‌, ಸಚಿನ್‌ , ರೋಶನ್‌, ಪುನೀತ್‌, ವಚನ, ಶ್ರೀ ಕೇಶವ, ಪ್ರಶಾಂತ್‌ ಅವರಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಪೀಠ, ಪ್ರಕರಣದ ಒಂದನೇ ಆರೋಪಿ ರಾಜೇಶ್‌ ನಾಯಕ್‌, ನರಸಿಂಹ,  ಸತೀಶ್‌ ರೈಗೆ ಜಾಮೀನು ನಿರಾಕರಿಸಿ ಆದೇಶಿಸಿದೆ. ಆರೋಪಿಗಳ ಪರ  ವಕೀಲ ಅರುಣ್‌ ಶ್ಯಾಮ್‌ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next