Advertisement

ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌ ಟೆನಿಸ್‌: ಪ್ಲಿಸ್ಕೋವಾ-ಮ್ಯಾಡಿಸನ್‌ ಕೀಸ್‌ ಫೈನಲ್‌

10:33 PM Jan 11, 2020 | Sriram |

ಬ್ರಿಸ್ಬೇನ್‌: ವಿಶ್ವದ ನಂ.2 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ತಮ್ಮ ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಕೊನೆಯ ನಿಲ್ದಾಣ ತಲುಪಿದ್ದಾರೆ. ರವಿವಾರ ನಡೆಯುವ ಫೈನಲ್‌ನಲ್ಲಿ ಅಮೆರಿಕದ ಮ್ಯಾಡಿಸನ್‌ ಕೀಸ್‌ ಸವಾಲನ್ನು ಎದುರಿಸಲಿದ್ದಾರೆ.

Advertisement

ಸೆಮಿಫೈನಲ್‌ನಲ್ಲಿ ಪ್ಲಿಸ್ಕೋವಾ 6-7 (10-12), 7-6 (7-3), 6-2 ಅಂತರದಿಂದ ನವೋಮಿ ಆಟಕ್ಕೆ ತೆರೆ ಎಳೆದರು. ಮ್ಯಾಡಿಸನ್‌ ಕೀಸ್‌ ಕೂಡ 3 ಸೆಟ್‌ಗಳ ಹೋರಾಟದ ಬಳಿಕ ವಿಂಬಲ್ಡನ್‌ ಚಾಂಪಿಯನ್‌ ಪೆಟ್ರಾ ಕ್ವಿಟೋವಾಗೆ ಸೋಲುಣಿಸಿದರು. ಅಂತರ 3-6, 6-2, 6-3.

Advertisement

Udayavani is now on Telegram. Click here to join our channel and stay updated with the latest news.

Next