Advertisement

ಇಟಾಲಿಯನ್‌ ಓಪನ್‌ ಟೆನಿಸ್‌: ಕ್ಯಾರೋಲಿನಾ ಪ್ಲಿಸ್ಕೋವಾಗೆ ಪ್ರಶಸ್ತಿ

10:30 AM May 20, 2019 | Team Udayavani |

ರೋಮ್‌: ಇಟಾಲಿಯನ್‌ ಓಪನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಪಾಲಾಗಿದೆ.

Advertisement

ರವಿವಾರದ ಫೈನಲ್‌ನಲ್ಲಿ ಅವರು ಬ್ರಿಟನ್ನಿನ ಜೊಹಾನ್ನಾ ಕೊಂಟಾ ವಿರುದ್ಧ 6-3, 6-4 ನೇರ ಸೆಟ್‌ಗಳಿಂದ ಗೆದ್ದು ಬಂದರು.

2017ರ ಫ್ರೆಂಚ್‌ ಓಪನ್‌ ಕೂಟದ ಸೆಮಿಫೈನಲಿಸ್ಟ್‌ ಆಗಿರುವ ಪ್ಲಿಸ್ಕೋವಾ ಪಾಲಿಗೆ ಇದು ಟೆನಿಸ್‌ ಬಾಳ್ವೆಯ 13ನೇ ಪ್ರಶಸ್ತಿ. ಇದರಿಂದ ಮೇ 26ರಿಂದ ಆರಂಭವಾಗಲಿರುವ ಮತ್ತೂಂದು ಫ್ರೆಂಚ್‌ ಓಪನ್‌ಗೆ ಭರ್ಜರಿ ತಯಾರಿ ನಡೆಸಿದಂತಾಯಿತು.

“ಇದು ನನ್ನ ಹಾಗೂ ನನ್ನ ತಂಡದ ಪಾಲಿಗೆ ಶ್ರೇಷ್ಠ ವಾರವಾಗಿತ್ತು’ ಎಂದು ಪ್ಲಿಸ್ಕೋವಾ ಪ್ರತಿಕ್ರಿ ಯಿಸಿದ್ದಾರೆ. ಸದ್ಯ ಅವರು ಮಾಜಿ ರೋಮ್‌ ಚಾಂಪಿಯನ್‌ ಕಾಂಚಿಟಾ ಮಾರ್ಟಿನೆಜ್‌ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next