Advertisement

ಕಾರ್ಕಳದಲ್ಲಿ ‘ಕಾರ್ನಿಕದ ಕಲ್ಲುರ್ಟಿ’ಶೂಟಿಂಗ್‌ ಶುರು

03:55 PM May 10, 2018 | |

ಫಿನಿಕ್ಸ್‌ ಫಿಲಂಸ್‌ ಅರ್ಪಿಸುವ ಮೂಲ ಪಾಡ್ದನ ಆಧಾರಿತ ‘ಕಾರ್ನಿಕದ ಕಲ್ಲುರ್ಟಿ’ ಚಾರಿತ್ರಿಕ ತುಳು ಸಿನೆಮಾದ ಚಿತ್ರೀಕರಣವು ಕಾರ್ಕಳ ಸಮೀಪದ ಬಜಗೋಳಿ ಬಳಿಯ ಪಡ್ಡಾಯಿ ಹೌಸ್‌ ಮತ್ತು ಅಪ್ಪಯ್ಯ ಹೌಸ್‌ನಲ್ಲಿ ನಡೆಯುತ್ತಿದೆ. ಈ ಸಿನೆಮಾದ ಕಥೆ ಮಹೇಂದ್ರ ಕುಮಾರ್‌ ರಚಿಸಿದ್ದು, ಅವರೇ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಹೊಂದಿದ್ದಾರೆ. ಗಂಗಾಧರ ಕಿಶೋಡಿಯನ್‌ ಅವರು ಚಿತ್ರಕಥೆ, ಸಂಭಾಷಣೆ, ಕಲೆ, ವಸ್ತ್ರ ವಿನ್ಯಾಸದ ಜವಾಬ್ದಾರಿಯ ಜತೆಗೆ ತಾತ್ರಿಕ ನಿರ್ದೇಶಕರಾಗಿದ್ದಾರೆ.

Advertisement

ಉಮಾಪತಿ ಅವರ ಛಾಯಾಗ್ರಹಣ, ಹಿತನ್‌ ಹಾಸನ ಅವರ ಸಂಗೀತ ಇದೆ. ಸುರೇಶ್‌ ಪಂಡಿತ್‌ ಅವರ ಸಹಕಾರ ಈ ಚಿತ್ರಕ್ಕಿದೆ. ಕೆಮ ರಾ ಸಹಾಯಕರಾಗಿ ಜೀವನ್‌, ಸಹ ನಿರ್ದೇಶಕರಾಗಿ ಪ್ರತಾಪ್‌ ಸಾಲ್ಯಾನ್‌ ದುಡಿಯಲಿದ್ದಾರೆ. ಮೇಕಪ್‌ ದೇವರಾಜ್‌, ಸಹ ಛಾಯಗ್ರಾಹಕರಾಗಿ ಜೆ.ಜೆ. ಶರ್ಮಾ, ಯೂನಿಟ್‌ನಲ್ಲಿ ರಣವೀರ್‌ ನಾಯ್ಕ ಸಹಕರಿಸಲಿದ್ದಾರೆ. ನಾಗೇಶ್‌ ದೇವಾಡಿಗ, ಶಶಿ ಶಿರ್ಲ ಗೀತ ಸಾಹಿತ್ಯ ನೀಡಿದ್ದಾರೆ.

ತಾರಾಗಣದಲ್ಲಿ ಶೈಲೇಂದ್ರ ಡಿ.ಜೆ., ಚಾಂದಿನಿ ಅಂಚನ್‌, ಮಹೇಂದ್ರ ಕುಮಾರ್‌, ಶಾಲಿನಿ ಮರಕಡ, ರಘು ರಾಮ್‌ ಶೆಟ್ಟಿ, ಹರಿಣಿ ಕೆಂಚಾರ್‌, ನಾಗೇಶ್‌ ಸಾಲ್ಯಾನ್‌, ಲಾವಣ್ಯ ಕದ್ರಿ, ಮೋನಿಕ ಕೊಲ್ಯ, ವಿಕಾಶ್‌, ಮೋಹನ್‌ ಬೋಳಾರ್‌, ಅಮೀನ್‌ ಟೈಲರ್‌, ಶ್ರೀನಿವಾಸ ದೇವಾಡಿಗ, ಪ್ರಶಾಂತ್‌ ಜೋಗಿ, ಮನೋಜ್‌ ಭಂಡಾರಿ, ಕುಮಾರ್‌ ಪಾಲೆಮಾರ್‌, ಈಶಿಕಾ, ರೇಖಾ ರಂಜಿತ್‌ ಕದ್ರಿ, ರಾಜೇಶ್‌ ಆಚಾರ್ಯ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next