Advertisement

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ

12:20 AM Mar 08, 2022 | Team Udayavani |

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಸೋಮವಾರ 2021ನೇ ಸಾಲಿನ “ಪಾರ್ತಿಸುಬ್ಬ ಪ್ರಶಸ್ತಿ’, “ಗೌರವ ಪ್ರಶಸ್ತಿ’ ಮತ್ತು “ಯಕ್ಷಸಿರಿ ಪ್ರಶಸ್ತಿ’ಗಳನ್ನು ಪ್ರಕಟಿಸಿದೆ.

Advertisement

ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರು:ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್‌.ಗೌರವ ಪ್ರಶಸ್ತಿ ಪುರಸ್ಕೃತರು
ಸತ್ಯನಾರಾಯಣ ವರದ ಹಾಸ್ಯಗಾರ, ಕರ್ಕಿ (ಸಂಪೂರ್ಣ ಯಕ್ಷಗಾನ), ಮತ್ತುಪ್ಪ ತನಿಯ ಪೂಜಾರಿ-ಹೊರನಾಡ ಕನ್ನಡಿಗ (ಸಂಪೂರ್ಣ ಯಕ್ಷಗಾನ), ನರೇಂದ್ರ ಕುಮಾರ್‌ ಜೈನ್‌,ಉಜಿರೆ (ತೆಂಕುತಿಟ್ಟು ಯಕ್ಷಗಾನ ಗುರುಗಳು ಮತ್ತು ಸಂಘಟಕರು), ಮೂಡಲಗಿರಿಯಪ್ಪ ಕಡವೀಗೆರೆ, ತುಮಕೂರು ( ಭಾಗವತಿಕೆ ಮತ್ತು ಮುಖವೀಣೆ), ಎನ್‌.ಟಿ. ಮೂರ್ತಾಚಾರ್ಯ ನೆಲ್ಲಿಗೆರೆ, ಮಂಡ್ಯ (ಭಾಗವತಿಕೆ ಮತ್ತು ಮೂಡಲಪಾಯ ಕಲಾವಿದರು).

ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರು
ಹಳ್ಳಾಡಿ ಜಯರಾಮ ಶೆಟ್ಟಿ, ಕುಂದಾಪುರ ( ಬಡಗಣತಿಟ್ಟು ಕಲಾವಿದರು), ಗೋಪಾಲ ಗಾಣಿಗ ಆಜ್ರಿ (ಬಡಗಣತಿಟ್ಟು ಕಲಾವಿದರು), ಬೋಳಾರ ಸುಬ್ಬಯ್ಯ ಶೆಟ್ಟಿ, ಮಂಗಳೂರು (ತೆಂಕುತಿಟ್ಟು), ಸೀತೂರು ಅನಂತ ಪದ್ಮನಾಭರಾವ್‌, ಸೀತೂರು, ಚಿಕ್ಕಮಗಳೂರು (ಬಡಗುತಿಟ್ಟು), ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತರು, ಹೊನ್ನಾವರ ( ಬಡಗುತಿಟ್ಟು ಮತ್ತು ಭಾಗವತರು), ರಾಮ ಸಾಲಿಯಾನ್‌ ಮಂಗಲ್ವಾಡಿ, ಕಾಸರಗೋಡು (ತೆಂಕುತಿಟ್ಟು), ಕೊಕ್ಕಡ ಈಶ್ವರ ಭಟ್‌, ಬಂಟ್ವಾಳ (ತೆಂಕುತಿಟ್ಟು), ಅಡಿಗೋಣ ಬೀರಣ್ಣ ನಾಯ್ಕ, ಅಂಕೋಲ (ಸಂಪೂರ್ಣ ಯಕ್ಷಗಾನ), ಭದ್ರಯ್ಯ, ಬೆಂಗಳೂರು (ಮೂಡವಪಾಯ ಯಕ್ಷಗಾನ ಕಲಾವಿದರು), ಬಸವರಾಜಪ್ಪ, ಕೋಲಾರ (ಕೇಳಿಕೆ ಕಲಾವಿದರು).

2020ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ:
ಡಾ| ಕೆ. ರಮಾನಂದ ಬನಾರಿ (ಕಾಸರಗೋಡು), ಡಾ| ಎಚ್‌.ಆರ್‌. ಚೇತನ (ಮೈಸೂರು).

Advertisement

Udayavani is now on Telegram. Click here to join our channel and stay updated with the latest news.

Next