ಬೆಂಗಳೂರು: 2019ನೇ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಡಬ್ಲ್ಯುಜೆಯು) ವಾರ್ಷಿಕ ಪ್ರಶಸ್ತಿಗಳನ್ನು ಶನಿವಾರ ಪ್ರಕಟಿಸಲಾಗಿದೆ. “ಉದಯವಾಣಿ’ ಬೆಂಗಳೂರು ಆವೃತ್ತಿಯ ಗ್ರಾಮೀಣ ಸುದ್ದಿ ವಿಭಾಗದ ಮುಖ್ಯಸ್ಥ ಎ.ಎಂ. ಸುರೇಶ್, ಮಣಿಪಾಲ ಆವೃತ್ತಿಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್, ವರದಿಗಾರ ಬಾಲಕೃಷ್ಣ ಭೀಮಗುಳಿ, ಕುಂಬಳೆಯ ಸ್ಟಿಂಗರ್ ಅಚ್ಯುತ ಚೇವಾರ್ ಅವರನ್ನು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿವಿಧ ದತ್ತಿನಿಧಿ ಪ್ರಶಸ್ತಿಗಳು ಹಾಗೂ ಗ್ರಾಮೀಣ ಪತ್ರಿಕೋದ್ಯಮ ಸೇರಿದಂತೆ ವಿವಿಧ ವಿಭಾಗಗಳಿಗೂ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಜ. 3 ಮತ್ತು 4 ರಂದು ಕಲಬುರಗಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ:
ದತ್ತಿನಿಧಿ ಪ್ರಶಸ್ತಿ: ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜನ್, ದಿನೇಶ್ ಅಮೀನ್ ಮಟ್ಟು, ವಿಶ್ವೇಶ್ವರ ಭಟ್, ಎಂ.ಕೆ. ಭಾಸ್ಕರ ರಾವ್, ವೆಂಕಟೇಶ್, ವಿವಿಧ ವಿಭಾಗಗಳಲ್ಲಿ ಜಗದೀಶ್ ಬುರ್ಲಬಡ್ಡಿ, ವಿನಾಯಕ ಭಟ್ ಮೂರೂರು, ಟಿ.ವಿ. ಶಿವಾನಂದನ್, ವಿ.ಎನ್. ತಾಳಿಕೋಟಿ, ಅಶ್ವಿನಿ ಶ್ರೀಪಾದ್, ಹೃಷಿಕೇಶ್ ಬಹದ್ದೂರ್ ದೇಸಾಯಿ, ಬಿ.ಪಿ. ಮಲ್ಲಪ್ಪ, ಶ್ರೀನಿವಾಸ ಹಳಕಟ್ಟಿ, ಎಂ.ಸಿ. ಶೋಭಾ, ಗುಡಿಪುರ ನಂದೀಶ್, ಬಾ.ಮ. ಬಸವರಾಜಯ್ಯ, ಕೌಶಲ್ಯ ದತ್ತಾತ್ರೇಯ ಫಳನಾಕರ್, ಎಸ್.ಬಿ. ಜೋಷಿ, ನಾಗಣ್ಣ, ಜಿ. ರಾಜೇಂದ್ರ, ವಿಜಯ ಭರಮಸಾಗರ, ಕೆ.ಬಿ. ಪಂಕಜ, ಈಶ್ವರ ಹೋಟಿ, ಎಂ.ಎಚ್. ನಧಾಫ್, ಸುಭಾಷ್ ಚಂದ್ರ ಎಂ.ಎಸ್., ಕರಿಯಪ್ಪ ಎಚ್ ಚೌಡಕ್ಕನವರ, ಗಿರೀಶ್ ಮಾದೇನಹಳ್ಳಿ, ವಾದಿರಾಜ್, ವಿಜಯ್ ಕೋಟ್ಯಾನ್ ಮಂಗಳೂರು, ಕೃಷಿ ಶಿರೂರು, ಕಾರ್ತಿಕ್. ಕೆ.ಕೆ., ಟಿ.ಎನ್. ಪದ್ಮನಾಭ, ಮುರುಳಿಪ್ರಸಾದ್, ಶಿವಕುಮಾರ್ ಬೆಳ್ಳಿತಟ್ಟೆ, ಉಮಾ ವೇಣೂರು, ಸುಧಾ, ಎಸ್. ಜಯರಾಂ, ವಿಶ್ವನಾಥ್ ಸುವರ್ಣ, ಸೋಮಶೇಖರ, ಜೋಸೆಫ್ ಡಿಸೋಜ, ಶಿವು ಹುಣಸೂರು, ಕೆ.ಎಂ.ಮಂಜುನಾಥ್, ಬಸವರಾಜ ಪರಪ್ಪ ದಂಡಿನ, ಶರಣಯ್ಯ ಒಡೆಯರ್, ಮುರುಳೀಧರ ಎಸ್.ಎ., ಶೇಖರ ಸಂಕಗೋಡನಹಳ್ಳಿ, ಎಚ್.ಎಸ್.ಶ್ರೀಹರಪ್ರಸಾದ್, ನರಸಿಂಹ ಹುಲಿಹೈದರ್, ಚಂದ್ರಶೇಖರ ವಡ್ಡು, ಮಲ್ಲಿಕ ಚರಣವಾಡಿ, ಚಂದ್ರಕಲಾ, ಮಹೇಶ್, ತಿಮ್ಮೇಶ್ ಎಸ್., ಪ್ರಶಾಂತ್, ರಾಧಾ ಹೀರೇಗೌಡರ್, ಸುಶೀಲೇಂದ್ರ ಸೌಧೆಗಾರ್, ಅಜೀಜ್ ಮಸ್ಕಿ, ಅನಂತರಾಮು ಸಂಕ್ಲಾಪುರ, ಸುಶೀಲೇಂದ್ರ ನಾಯಕ್, ಹನುಮೇಶ್ ಯಾವಗಲ್, ಆದಿ ನಾರಾಯಣ, ರವೀಂದ್ರ ಸುರೇಶ್ ದೇಶಮುಖ್ ಅವರನ್ನು ಆಯ್ಕೆ ಮಾಡಲಾಗಿದೆ.