Advertisement

ಕರ್ನಾಟಕ ವನಿತೆಯರಿಗೆ ಹ್ಯಾಟ್ರಿಕ್‌ ಪ್ರಶಸ್ತಿ

08:58 AM Oct 28, 2018 | Harsha Rao |

ಮಂಗಳೂರು: ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದ ಆರನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಕರ್ನಾಟಕ ವನಿತೆಯರ ತಂಡ ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. 

Advertisement

ಭಾರತೀಯ ಬಾಲ್‌ ಬ್ಯಾಡ್ಮಿಂಟನ್‌ ಫೆಡರೇಶನ್‌ ಮತ್ತು ತಮಿಳುನಾಡು ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಪಂದ್ಯಾಟದ ಫೈನಲ್‌ನಲ್ಲಿ ಕರ್ನಾಟಕ ತಂಡವು ಆತಿಥೇಯ ತಮಿಳುನಾಡು ವನಿತಾ ತಂಡವನ್ನು 32-35, 35-30, 35-26 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿತು. 

ಈ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡವು ಬಿಹಾರ ತಂಡವನ್ನು ಕೆಡಹಿದ್ದರೆ ತಮಿಳುನಾಡು ತಂಡವು ಆಂಧ್ರವನ್ನು ಉರುಳಿಸಿತ್ತು. ಪುರುಷರ ತಂಡ ನಾಲ್ಕನೇ ಸ್ಥಾನ ಪಡೆದಿದೆ.

ಈ ಮೊದಲು ನಡೆದ ದಕ್ಷಿಣ ವಲಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲೂ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು. 

ಆಳ್ವಾಸ್‌ ಸಾಧನೆ
ಕರ್ನಾಟಕ ತಂಡ ಫೆಡರೇಶನ್‌ ಕಪ್‌ ಮತ್ತು ದಕ್ಷಿಣ ವಲಯ ಪಂದ್ಯಾಟದಲ್ಲಿ ಹ್ಯಾಟ್ರಿಕ್‌ ಸಾಧನೆಗೈಯಲು ಮೂಡಬಿದಿರೆಯ ಆಳ್ವಾಸ್‌ ಆಟಗಾರ್ತಿಯರ ನಿರ್ವಹಣೆಯನ್ನು ಮರೆಯುವಂತಿಲ್ಲ. ಆಳ್ವಾಸ್‌ನ ಆರು ಆಟಗಾರ್ತಿಯರು ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.  ರಾಜ್ಯ ತಂಡದ ನಾಯಕಿ ಮೂಡಬಿದಿರೆಯ ಆಳ್ವಾಸ್‌ನ ಜಿ. ಜಯಲಕ್ಷ್ಮೀ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರಲ್ಲದೇ ರಾಜ್ಯ ತಂಡದಲ್ಲಿರುವ ಲಾವಣ್ಯ, ದಿವ್ಯಾ, ಕವನಾ, ಚಂದನಾ ಮತ್ತು ಪಲ್ಲವಿ ಅವರು ಆಳ್ವಾಸ್‌ನ ಆಟಗಾರ್ತಿಯರಾಗಿದ್ದಾರೆ. ರಾಜ್ಯ ಪುರುಷರ ತಂಡದಲ್ಲಿ ಆಳ್ವಾಸ್‌ನ ನಾಲ್ವರು ಆಟಗಾರರು ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next