Advertisement

7 ವಿಶ್ವಾಸ ಮತ, 12 ಅವಿಶ್ವಾಸ ನಿರ್ಣಯಕ್ಕೆ ಸಾಕ್ಷಿಯಾದ ಕರ್ನಾಟಕ

09:34 AM Jul 21, 2019 | mahesh |

ಮಣಿಪಾಲ: ರಾಜ್ಯದ ಇತಿಹಾಸದಲ್ಲಿ ಒಟ್ಟು 7 ಬಾರಿ ವಿಶ್ವಾಸ ಮತಯಾಚನೆ/ 12 ಬಾರಿ ಅವಿಶ್ವಾಸ ಮತ ನಿರ್ಣಯಗಳು ಮಂಡನೆಯಾಗಿವೆ. ಅವುಗಳಲ್ಲಿ ಕೆಲವರು ಉತ್ತೀರ್ಣರಾದರೆ, ಕೆಲವರು ಸರಕಾರವನ್ನು ಕಳೆದುಕೊಂಡಿದ್ದರು. ಈ ಬಾರಿಯ ಪ್ರಸ್ತಾವಿತ ವಿಶ್ವಾಸ ಮತಯಾಚನೆ 8ನೇಯದ್ದು.

Advertisement

ಮೊದಲ ವಿಶ್ವಾಸ ಮತ
ರಾಜ್ಯ ಮೊದಲ ವಿಶ್ವಾಸ ಮತಕ್ಕೆ ಸಾಕ್ಷಿ ಯಾಗಿದ್ದು, 9ನೇ ವಿಧಾನಸಭೆಯಲ್ಲಿ. 25 ಅಕ್ಟೋಬರ್‌ 1990ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಎಸ್‌. ಬಂಗಾರಪ್ಪ ಅವರು ಸದನದ ವಿಶ್ವಾಸ ಯಾಚಿಸಿದ್ದರು.

ಎರಡನೇ ವಿಶ್ವಾಸ ಮತ
1998ರ ಜನವರಿ 27ರಂದು 10ನೇ ವಿಧಾನಸಭೆಯಲ್ಲಿ ಅಂದಿನ ಮುಖ್ಯ ಮಂತ್ರಿ ಜೆ.ಎಚ್‌. ಪಟೇಲ್‌ ಅವರು ವಿಶ್ವಾಸಮತಯಾಚನೆ ನಡೆಸಿದ್ದರು.

3ನೇ ವಿಶ್ವಾಸ ಮತಯಾಚನೆ
2 ವಿಶ್ವಾಸ ಮತಯಾಚನೆ ಪ್ರಸಂಗಗಳಿಗೆ 12ನೇ ವಿಧಾನಸಭೆ ಸಾಕ್ಷಿಯಾಗಿತ್ತು. ಧರಂ ಸಿಂಗ್‌ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದಿದ್ದ ಜೆಡಿಎಸ್‌ ಮತ್ತೆ ಕುಮಾ ರಸ್ವಾಮಿ ನೇತೃತ್ವದಲ್ಲಿ ಸರಕಾರ ರಚಿಸಿತ್ತು. ಈ ಸಂದರ್ಭ ಫೆಬ್ರವರಿ 2, 2007ರಲ್ಲಿ ಜೆಡಿಎಸ್‌ ವಿಶ್ವಾಸ ಮತಯಾಚಿಸಿತ್ತು.

4ನೇ ವಿಶ್ವಾಸ ಮತ
2007ರಲ್ಲಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸದನದ ವಿಶ್ವಾಸ ಮತಯಾಚಿಸಿತ್ತು. ಇದು 12ನೇ ವಿಧಾನಸಭೆಯೂ ಹೌದು.

Advertisement

13ನೇ ವಿಧಾನಸಭೆ
13ನೇ ವಿಧಾನಸಭೆ 5 ವರ್ಷದಲ್ಲಿ 3 ವಿಶ್ವಾಸ ಮತ ಯಾಚನೆಗೆ ಸಾಕ್ಷಿಯಾಗಿತ್ತು. ಜೂನ್‌ 5, 2008, 11 ಅಕ್ಟೋಬರ್‌ 2010, 14 ಅಕ್ಟೋಬರ್‌ 2010ರಲ್ಲಿ ಅಂದು ಮಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 3 ಬಾರಿ ವಿಶ್ವಾಸ ಮತ ಯಾಚಿಸಿದ್ದರು.

12 ಅವಿಶ್ವಾಸ ನಿರ್ಣಯಗಳು
 ಮೊದಲ ಅವಿಶ್ವಾಸ ನಿರ್ಣಯ
ಬಿ.ಡಿ. ಜತ್ತಿ ಅವರ ಸರಕಾರ ವಿರುದ್ಧ 1961ರಲ್ಲಿ ಮೊದಲ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲಾಗಿತ್ತು. ಅದು 2ನೇ ವಿಧಾನಸಭೆ ಅವಧಿಯಲ್ಲಿ.

 3ನೇ ವಿಧಾನ ಸಭೆಯಲ್ಲಿ 4 ಬಾರಿ ಅವಿಶ್ವಾಸ ನಿರ್ಣಯ
ಎಸ್‌. ನಿಜಲಿಂಗಪ್ಪ ಅವರು ಸಿಎಂ ಆಗಿದ್ದ 3ನೇ ವಿಧಾನಸಭೆ 4 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. 21 ಸೆಪ್ಟೆಂಬರ್‌ 1962, ಅಕ್ಟೋಬರ್‌ 5, 1963, ಜನವರಿ 18, 1965, ನವೆಂಬರ್‌ 24, 1966ರಲ್ಲಿ ನಿಜಲಿಂಗಪ್ಪ ಅವರು ಅವಿಶ್ವಾಸ ನಿರ್ಣಯ ಎದುರಿಸಿದ್ದರು.

 4ನೇ ವಿಧಾನಸಭೆಯಲ್ಲಿ 2 ಬಾರಿ
ವೀರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿಯಾಗಿದ್ದ 4ನೇ ವಿಧಾನಸಭೆ 2 ಅವಿಶ್ವಾಸ ನಿರ್ಣ ಯಗಳನ್ನು ಎದುರಿಸಿತ್ತು. ಡಿಸೆಂಬರ್‌ 18, 1967 ಮತ್ತು 21 ಜನವರಿ 1969ರಲ್ಲಿ ಗೊತ್ತುವಳಿ ಮಂಡನೆಯಾಗಿತ್ತು.

 9ನೇ ವಿಧಾನಸಭೆಯಲ್ಲಿ 2
9ನೇ ವಿಧಾನಸಭೆಯಲ್ಲಿ ಸಿಎಂ ಆಗಿದ್ದ ವೀರೇಂದ್ರ ಪಾಟೀಲ್‌ ಆ. 27, 1991ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿ ದ್ದರು. 1994ರಲ್ಲಿ ಸಿಎಂ ಆಗಿದ್ದ ಎಂ. ವೀರಪ್ಪ ಮೊಲಿ ಜನವರಿ 5ರಂದು ಅವಿಶ್ವಾಸ ನಿರ್ಣಯ ಎದುರಿಸಿದ್ದರು.

 10ನೇ ವಿಧಾನ ಸಭೆಯಲ್ಲಿ 2
10ನೇ ವಿಧಾನಸಭೆಯಲ್ಲೂ 2 ಅವಿಶ್ವಾಸ ನಿರ್ಣಯಗಳು ಮಂಡನೆಯಾಗಿದ್ದವು. 1995 ರಲ್ಲಿ ಎಚ್‌.ಡಿ. ದೇವೇಗೌಡರು ಆಗಸ್ಟ್‌ 7ರಂದು ಹಾಗೂ ಜೆ. ಎಚ್‌. ಪಟೇಲ್‌ 1996ರ ಆಗಸ್ಟ್‌ 27ರಂದು ಅವಿಶ್ವಾಸ ನಿರ್ಣಯ ಎದುರಿಸಿದ್ದರು.

 12ನೇ ಅವಿಶ್ವಾಸ ನಿರ್ಣಯ
12ನೇ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು 14ನೇ ವಿಧಾನಸಭೆಯಲ್ಲಿ ಸಿದ್ದರಾ ಮಯ್ಯ ಸರಕಾರದ ವಿರುದ್ಧ. ಜುಲೈ 13, 2015ರಂದು ಸದನದ ವಿಶ್ವಾಸ ಎದುರಿಸಿತ್ತು.

 ಮಣಿಪಾಲ ಸ್ಪೆಷಲ್‌ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next