Advertisement

ಕರ್ನಾಟಕ ವಿಶ್ವಕರ್ಮ ಮಹಾ ಒಕ್ಕೂಟ ಅಸ್ತಿತ್ವಕ್ಕೆ

12:00 PM Aug 01, 2017 | |

ಹುಣಸೂರು: ರಾಜ್ಯಾದ್ಯಂತ 1800ರಷ್ಟಿರುವ ವಿಶ್ವಕರ್ಮ ಸಮಾಜದ ಸಂಘಟನೆ ಒಂದೇ ಸೂರಿನಡಿ ಕೊಂಡೊಯ್ಯುವ ಮಹದಾಸೆಯಿಂದ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡ, ವಿಧಾನ ಪರಿಷತ್‌ ಸದಸ್ಯ ಜಿ.ರಘುಆಚಾರ್‌ ಹೇಳಿದರು.

Advertisement

ತಾಲೂಕಿನ ಕಲ್ಲಹಳ್ಳಿಯ ಅರಸರ ಸಮಾಧಿಗೆ ಗೌರವ ಸಲ್ಲಿಸಿದ ನಂತರ ನಡೆದ ಸಮಾರಂಭದಲ್ಲಿ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಹಾ ಒಕ್ಕೂಟಕ್ಕೆ  ಚಾಲನೆ ನೀಡಿ ಮಾತನಾಡಿ, ವಿಶ್ವಕರ್ಮಜನಾಂಗವು ಇತರೆ ಜನಾಂಗದ ಪ್ರೀತಿ-ವಿಶ್ವಾಸ, ಸಹಕಾರದೊಂದಿಗೆ ಬೆಳೆದಿದೆ. ಈ ಸಮಾಜ ಯಾವ ಪಕ್ಷದ ದಾಸರಲ್ಲ, ಒಕ್ಕೂಟ ರಾಜಕಾರಣದಿಂದ ದೂರವಿದ್ದು, ಸಮಾಜದ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.

ನಾನು ಎಲ್ಲ ಸಣ್ಣಪುಟ್ಟ ಸಮುದಾಯವನ್ನು ಒಟ್ಟಿಗೆ ಕೊಂಡೊಯ್ಯುವ ವ್ಯಕ್ತಿಯಾಗಿದ್ದೇನೆ. ಆದರೆ ನಮ್ಮ ಸಮಾಜ ದಾರಿ ತಪ್ಪಬಾರದೆಂಬ ಉದ್ದೇಶದಿಂದ ಒಂದೇ ಒಕ್ಕೂಟದಡಿ ಎಲ್ಲ ಸಂಘಗಳನ್ನು ಒಗ್ಗೂಡಿಸಿ ಸಮಾಜದ ಅಭಿವೃದ್ಧಿಗೊಳಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಸಣ್ಣ ಸಮಾಜಗಳನ್ನು ಒಗ್ಗೂಡಿಸುವೆ: ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು ಇನ್ಮುಂದೆ ಉಪ್ಪಾರ, ಮಡಿವಾಳ, ಗಾಣಿಗ, ಕುಂಬಾರ, ಅರಸು ಸೇರಿದಂತೆ ಅನೇಕ ಸಣ್ಣಪುಟ್ಟ ಸಮುದಾಯಗಳನ್ನು  ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಸಂಘಟನೆ ಮಾಡುವ ಚಿಂತನೆಯಲ್ಲಿರುವೆ ಎಂದರು.

ಶಾಸಕ ಎಚ್‌.ಪಿ.ಮಂಜುನಾಥ್‌ ಮಾತನಾಡಿ, ಸಣ್ಣ ಜಾತಿಗಳನ್ನು ಒಟ್ಟುಗೂಡಿಸುವುದು ಕಷ್ಟಸಾಧ್ಯ, ಇಂತಹ ಸಂದರ್ಭದಲ್ಲಿ ರಘುಆಚಾರ್‌ ಒಂದೇ ಸೂರಿನಡಿ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಶುಭ ಕೋರಿ, ರಾಜ್ಯದಲ್ಲಿ ಆರ್ಯವೈಶ್ಯ ಮಹಾ ಒಕ್ಕೂಟ ರಚಿಸಿಕೊಂಡ ಬೆಂಗಳೂರಿನಲ್ಲಿ ಸಮಾಜದವತಿಯಿಂದ ಐವತ್ತು ಅಂತಸ್ತಿನ ಕಟ್ಟಡ ನಿರ್ಮಿಸಿಕೊಂಡಿದ್ದೇವೆ ಎಂದು ಹೇಳಿದರು. 

Advertisement

ಅರಕಲಗೂಡಿನಲ್ಲಿ 18 ಎಕರೆ ಭೂಮಿ ಹಾಗೂ ಹುಣಸೂರಿನಲ್ಲಿ ತಮ್ಮ ತಾತ ನಾಗರಾಜಶ್ರೇಷ್ಠಿಯವರು ಐದು ಎಕರೆಯಲ್ಲಿ ವೃದ್ಧಾಶ್ರಮ ನಿರ್ಮಿಸಿ ಕೊಟ್ಟಿದ್ದಾರೆ, ಅದೇ ಮಾದರಿ ರಘುಆಚಾರ್‌ ಸಂಘಟನೆಗಾಗಿ ಶ್ರಮ ಹಾಕುತ್ತಿದ್ದು, ಒಕ್ಕೂಟದ ವತಿಯಿಂದ ರಾಜ್ಯದ ನಾಲ್ಕು ವಿಭಾಗಗಳಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸುತ್ತಿರುವುದು ಸ್ವಾಗತಾರ್ಹ. ತಾಲೂಕಿನಲ್ಲಿ ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ಸದಾ ಸಿದ್ಧ ಎಂದರು.

ವಿಶ್ವಮರ್ಕ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಪಿ.ಕೃಷ್ಣಾಚಾರಿ ಮಾತನಾಡಿ, ರಘುಆಚಾರ್‌ ಸಮುದಾಯ ಸಂಘಟನೆ ಮತ್ತು ಮಕ್ಕಳ ಶಿಕ್ಷಣಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಜನಾಂಗದ ಕಣ್ಮಣಿಯಾಗಿದ್ದಾರೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷೆ ಪದ್ಮಮ್ಮ, ಸದಸ್ಯೆ ಪ್ರೇಮವಿಶ್ವನಾಥ್‌, ವಿಶ್ವಮಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂದಕುಮಾರ್‌, ಮಾಜಿ ಅಧ್ಯಕ್ಷೆ ಸತ್ಯವತಿ, ಮಂಡ್ಯ ನಗರಸಭಾ ಸದಸ್ಯ ಆನಂದ್‌, ಒಕ್ಕೂಟದ ಪ್ರಧಾನಕಾರ್ಯದರ್ಶಿ ರುದ್ರಾಚಾರ್‌, ಸಲಹಾಸಮಿತಿ ಅಧ್ಯಕ್ಷ ಕೆ.ಎಸ್‌.ಪ್ರಭಾಕರ್‌, ಮಂಡ್ಯದ ಕೆ.ಶ್ರೀನಿವಾಸ್‌, ಪುಟ್ಟಸ್ವಾಮಿ ಹಾಗೂ ಪದಾಧಿಕಾರಿಗಳಾದ ಉಮೇಶ್‌, ಬಾಬುಪತ್ತಾರ್‌, ಹುಚ್ಚಪ್ಪಚಾರ್‌, ಭೋಗರಾಜಚಾರ್‌, ಕಲ್ಕುಣಿಕೆ ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next