– ಊರಿನೆಲ್ಲರಿಗೂ ಬೇಕು.. ತಾ ಊರುಗೋಲಾಗಿ ಮುನ್ನಡೆಸಲು ಸರ್ವರನೂ..
Advertisement
ಜನ ಸಾಮಾನ್ಯರ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ 1975ರಲ್ಲಿ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಿತು. ರಾಜ್ಯದ ಮಲಪ್ರಭಾ, ಬಿಜಾಪೂರ, ವರದಾ, ನೇತ್ರಾವತಿ ಗ್ರಾಮೀಣ ಬ್ಯಾಂಕುಗಳು ಒಗ್ಗೂಡಿಸಿ 2005 ಸೆಪ್ಟೆಂಬರ್ 12ರಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉದಯಗೊಂಡಿತು. ಈ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ (ಶೇ.50) ರಾಜ್ಯ ಸರ್ಕಾರ (ಶೇ.15) ಮತ್ತು ಕೆನರಾ ಬ್ಯಾಂಕ್ (ಶೇ.35)ಬಂಡವಾಳ ಹೊಂದಿರುವುದರಿಂದ ಈ ಬ್ಯಾಂಕ್ ಸಂಪೂರ್ಣ ಸರ್ಕಾರಿ ಸ್ವಾಮಿತ್ವಕ್ಕೆ ಸೇರಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪಟ್ಟಣ, ಅರೆ ಪಟ್ಟಣಗಳಷ್ಟೇ ಅಲ್ಲ ಗ್ರಾಮ ಕುಗ್ರಾಮಗಳಲ್ಲೂ ತನ್ನ ಶಾಖೆಗಳನ್ನು ತೆರೆದು ಬಡ, ಕಡು ಬಡವ, ಸಣ್ಣ-ಅತಿ ಸಣ್ಣ ರೈತರು, ಕರಕುಶಲಕರ್ಮಿಗಳು, ಕೃಷಿ ಕಾರ್ಮಿಕರು ಮುಂತಾದ ವರ್ಗಗಳನ್ನು ಸರಳ ಬ್ಯಾಂಕಿಂಗ್ ಸೇವೆಗಳ ಮೂಲಕ ತಲುಪಿ ಅವರೆಲ್ಲರ ಆರ್ಥಿಕ ಉನ್ನತಿಗೆ ಮಹತ್ತರ ಕೊಡುಗೆ ನೀಡುತ್ತಲಿದೆ.
Related Articles
Advertisement
47 ವರ್ಷಗಳಲ್ಲಿ ರೈತ ಬಾಂಧವರ ಪ್ರಗತಿಯಲ್ಲಿ ತನ್ನನ್ನು ಬ್ಯಾಂಕು ಪ್ರಬಲವಾಗಿ ಗುರುತಿಸಿಕೊಂಡಿದೆ. ಬರಗಾಲ ಬವಣೆಯಲ್ಲಿ ಬಳಲಿದ ರೈತ ವರ್ಗಕ್ಕೆ ಸಮಗ್ರ ಕೃಷಿ ಮೂಲಕ ಸುಸ್ಥಿರ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕು ವಿಶೇಷ ಶ್ರಮ ವಹಿಸಿದೆ. ಆದ್ಯತಾ ರಂಗದಡಿ 11575 ಕೋಟಿ ರೂ. ಸಾಲ ಹೊಂದಿದ್ದು, ಇದು ಒಟ್ಟು ಸಾಲದ 89 ಪ್ರತಿಶತವಾಗಿದೆ. ಬ್ಯಾಂಕ್‌ನ ಒಟ್ಟು ಸಾಲದಲ್ಲಿ ಕೃಷಿರಂಗದ ಸಾಲದ ಪ್ರಮಾಣ 8900 ಕೋಟಿ ರೂ. ಗಳಾಗಿದ್ದು, ಅದು ಒಟ್ಟಾರೆ ಸಾಲದ 68 ಪ್ರತಿಶತವಾಗಿದೆ. ಕಳೆದ ಸಾಲಿನಲ್ಲಿ ಬ್ಯಾಂಕು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 118867 ರೈತರಿಗೆ ಸುಮಾರು 4000 ಕೋಟಿ ರೂ. ಸಾಲ ವಿತರಿಸಿ ರೈತರ ಚೇತೋಹಾರಿ ಬದುಕಿಗೆ ಹೊಸ ದಾರಿ ತೋರಿದೆ.
ಹೋಟೆಲ್, ಕೇಟರಿಂಗ್ ರಂಗಕ್ಕೆ ಸಂಬಂ ಧಿಸಿದ ಬ್ಯಾಂಕ್‌ನ “ವಿಕಾಸ ಅನ್ನಪೂರ್ಣ” ಸಾಲ ಯೋಜನೆ ಹಲವರಿಗೆ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಕೇವಲ ಮೂರು ವರ್ಷಗಳ ಅವ ಧಿಯಲ್ಲಿ ಬ್ಯಾಂಕು ಸುಮಾರು 6 ಸಾವಿರ ಜನರಿಗೆ 100 ಕೋಟಿ ರೂ. ಸಾಲ ಸೌಲಭ್ಯ ಕಲ್ಪಿಸಿದೆ.
ಮಹಿಳೆಯರ ಸಬಲೀಕರಣ ದಿಶೆಯಲ್ಲಿ ಜಾರಿಗೆ ಬಂದ ಬ್ಯಾಂಕ್‌ನ “ವಿಕಾಸ ಶೀ ಪ್ಲಸ್” ಮತ್ತು “ವಿಕಾಸ ಆಶಾ” ಅಡಿಯಲ್ಲಿ ಸುಮಾರು 12 ಸಾವಿರ ಮಹಿಳೆಯರಿಗೆ ಕೇಟರಿಂಗ್, ವ್ಯಾಪಾರ, ಕರಕುಶಲ, ಸಾರಿಗೆ ವಾಹನ, ಬ್ಯೂಟಿ ಪಾರ್ಲರ್ ಮುಂತಾದ ಚಟುವಟಿಕೆಗಳಡಿಯಲ್ಲಿ ಸ್ವ ಉದ್ಯೋಗ ಕಂಡುಕೊಳ್ಳುವಂತೆ ಮಾಡಿದೆ. ಈ ದಿಶೆಯಲ್ಲಿ ಬ್ಯಾಂಕು 118 ಕೋಟಿ ರೂ. ಸಾಲ ಒದಗಿಸಿದೆ. ಮಹಿಳೆಯರ ಆರೋಗ್ಯಕ್ಕೆ ಪೂರಕವಾಗಿ ಮನೆ ಮನೆಗಳಲ್ಲಿ ಆಧುನಿಕ ಅಡುಗೆ ಮನೆ ಹೊಂದಲು “ವಿಕಾಸ ಗೃಹ ಸ್ನೇಹಿ’ ಎಂಬ ಸಾಲ ಯೋಜನೆ ಜಾರಿಗೆ ತಂದಿದೆ. ಇದು ಕೂಡ ಜನಪ್ರಿಯವಾಗುತ್ತಿದೆ.
ಸಣ್ಣ, ಮಧ್ಯಮ ಉದ್ಯಮ ಕ್ಷೇತ್ರದಲ್ಲೂ ಬ್ಯಾಂಕು ಗಣನೀಯ ಕೊಡುಗೆ ನೀಡಿದೆ. ಸರ್ಕಾರಿ ಪ್ರವರ್ತಿತ ಯೋಜನೆಗಳ ಅನುಷ್ಠಾನ, ದುರ್ಬಲ ವರ್ಗದವರನ್ನು ಆರ್ಥಿಕವಾಗಿ ಮೇಲೆತ್ತಿ ಪ್ರಾದೇಶಿಕ ಆರ್ಥಿಕ ವ್ಯವಸ್ಥೆ ಬಲಪಡಿಸುವಲ್ಲಿ ಬ್ಯಾಂಕ್ ಪಾತ್ರ ಮಹತ್ವದ್ದಾಗಿದೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಇದೀಗ ಎಲ್ಲ ಡಿಜಿಟಲ್ ಸೇವೆಗಳನ್ನೂ ತನ್ನ ಗ್ರಾಹಕರಿಗೆ ಪರಿಚಯಿಸುವ ಮೂಲಕ ಹೊಸ ತಲೆಮಾರಿನ ಬ್ಯಾಂಕುಗಳಿಗೆ ಸರಿ ಸಮಾನವಾಗಿ ನಿಂತಿದೆ. ಮೊಬೈಲ್ ಬ್ಯಾಂಕಿಂಗ್‌ನಿಂದ ಇ- ಕಾಮರ್ಸ್‌ವರೆಗಿನ ಎಲ್ಲ ಆಧುನಿಕ ತಂತ್ರಜ್ಞಾನವನ್ನು ಬ್ಯಾಂಕು ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿ ಬಳಕೆ ಬಗ್ಗೆ ಸಂದೇಶ ರವಾನಿಸುವಲ್ಲಿ ಬ್ಯಾಂಕ್‌ನದ್ದೇ ಅತಿ ಮುಖ್ಯವಾದ ಪಾತ್ರ. ಬ್ಯಾಂಕ್‌ನ 150 ಶಾಖೆಗಳು ಸಂಪೂರ್ಣ ಸೌರ ವಿದ್ಯುತ್ ಅಧಾರಿತವಾಗಿದೆ. ಹಾಗೆಯೇ ಬ್ಯಾಂಕ್‌ನ ಪ್ರಧಾನ ಕಚೇರಿ ಮೇಲ್ಛಾವಣಿ ಮೇಲೆ ಸೌರ ವಿದ್ಯುತ್ ಕೋಶಗಳನ್ನು ಅಳವಡಿಸಿದ್ದು, ಒಟ್ಟಾರೆ 25 ಕಿ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ವಿಶಾಲ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಹಣಕಾಸು ಸೇವೆಗಳನ್ನು ತಲುಪಿಸಲು ಬ್ಯಾಂಕ್ ಪರಮಾದ್ಯತೆ ನೀಡುತ್ತಲಿದೆ. ರಾಷ್ಟ್ರೀಯ ಆದ್ಯತೆಯಾಗಿರುವ ಸಾಮಾಜಿಕ ಭದ್ರತಾ ಯೋಜನೆಗಳಾದ ಅಟಲ್ ಪಿಂಚಣಿ ಯೋಜನೆ(ಎಪಿವೈ), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ (ಪಿಎಂಎಸ್‌ಬಿವೈ) ಅನಷ್ಠಾuನದಲ್ಲಿ ಬ್ಯಾಂಕು ಅತ್ಯುತ್ತಮ ಕಾರ್ಯ ನಿರ್ವಹಿಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದೆ.
ಸಮರ್ಥ ನಾಯಕತ್ವಇದೀಗ ಬ್ಯಾಂಕ್ ಅಧ್ಯಕ್ಷತೆ ಜವಾಬ್ದಾರಿ ಹೊತ್ತಿರುವ ದೇಶದ ಉದ್ದಗಲದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಪಿ. ಗೋಪಿಕೃಷ್ಣ ಗ್ರಾಮೀಣಾಭಿವೃದ್ಧಿಯ ನೈಜ ಕನಸು ಹೊತ್ತವರು. ರೈತರು, ಜನಸಾಮಾನ್ಯರು, ಮಹಿಳೆಯರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿರುವ ಗೋಪಿಕೃಷ್ಣ ಕೆಲ ಉಪಯುಕ್ತ ಯೋಜನೆಗಳನ್ನು ರೂಪಿಸುವ ಮೂಲಕ ಒಟ್ಟಾರೆ ಅಭಿವೃದ್ಧಿಗೂ ವಿಶೇಷ ಕಳಕಳಿ ತೋರುತ್ತಿದ್ದಾರೆ. ಅವರ ಸಮರ್ಥ ನಾಯಕತ್ವದ 3 ವರ್ಷದ ಅವ ಧಿಯಲ್ಲಿ ಬ್ಯಾಂಕು ಗ್ರಾಮೀಣಾಭಿವೃದ್ಧಿಯ ನಿಜಾರ್ಥದಲ್ಲಿ ಬೆಳೆದು ಬೆಳಗುವಂತಾಗಿದೆ.
– ಉಲ್ಲಾಸ ಗುನಗಾ, ಮುಖ್ಯ ಪ್ರಬಂಧಕರು (ಮಾರುಕಟ್ಟೆ)