Advertisement

ಜಾರಿಗೆ ಮುನ್ನವೇ ರಾಣಿ ಚೆನ್ನಮ್ಮ ವಿವಿಯಲ್ಲಿ ಜಿಎಸ್‌ಟಿ ಕೋರ್ಸ್‌

06:57 PM Jun 30, 2017 | Team Udayavani |

ಬೆಳಗಾವಿ : ಕೇಂದ್ರ ಸರಕಾರ ಇಂದು ಶುಕ್ರವಾರ ಮಧ್ಯ ರಾತ್ರಿಯಿಂದ ಜಿಎಸ್‌ಟಿ ಯನ್ನು ಜಾರಿಗೆ ತರಲಿದೆ; ಆದರೆ ಇದಕ್ಕೆ ಮುನ್ನವೇ ಇಲ್ಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಜಿಎಸ್‌ಟಿ ಕುರಿತು ತನ್ನ ನೂತನ ತೆರಿಗೆ ವ್ಯವಸ್ಥೆಯ ಪಠ್ಯದಲ್ಲಿ ಹೊಸ ಕೋರ್ಸ್‌ ಅನ್ನು ಈಗಾಗಲೇ ಆರಂಭಿಸಿದೆ. 

Advertisement

“ವಿಶ್ವವಿದ್ಯಾಲಯದ ಬಿ.ಕಾಂ ಕೋರ್ಸ್‌ನಲ್ಲಿ  ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಯ ವಿಷಯಗಳಿವೆ. ಈ ಪಠ್ಯವನ್ನು ನಾವೀಗ ಪರಿಷ್ಕರಿಸಿದ್ದು ಇದರ ಭಾಗವಾಗಿ ಜಿಎಸ್‌ಟಿಯನ್ನು ಪರಿಚಯಿಸಿದ್ದೇವೆ; ಬೇರೆ ವಿಷಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next