Advertisement

108 ಆ್ಯಂಬುಲೆನ್ಸ್‌ಗಳಿಗೆ ಹೊಸ ರೂಪ ಸ್ವಾಗತಾರ್ಹ

12:47 AM Feb 21, 2022 | Team Udayavani |

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾದಿಂದಾಗಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯಗಳು ಹೆಚ್ಚಾಗಿವೆ. ಕೊರೊನಾ ಕಾಣಿಸಿಕೊಳ್ಳುವ ಮೊದಲು ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಅಷ್ಟಕ್ಕಷ್ಟೇ ಎಂಬಂತೆಯೇ ಇತ್ತು. ಆದರೆ ಕೊರೊನಾ ಎಲ್ಲರಿಗೂ ಪಾಠ ಕಲಿಸಿದೆ ಎಂಬುದು ಸುಳ್ಳಲ್ಲ.  ಸದ್ಯ ಕೊರೊನಾ ಮೂರನೇ ಅಲೆಯ ಭೀತಿ ದೂರವಾಗಿದೆ. ಆದರೆ ಕೊರೊನಾ ಮಾತ್ರ ಇನ್ನೂ ಮುಗಿದಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿಯೂ ಜನ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ಒಂದು ಕ್ಷಣ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

Advertisement

ಹೀಗಾಗಿ ರಾಜ್ಯ ಸರಕಾರ ಈಗಿನಿಂದಲೇ ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಮೂಲಸೌಕರ್ಯಗಳನ್ನು ನೀಡಲು ಮುಂದಾಗಿದೆ. ಇದರ ಮುಂದುವರಿದ ಭಾಗವೇ 108 ಆ್ಯಂಬುಲೆನ್ಸ್‌ಗಳಿಗೆ ಹೊಸ ರೂಪ ನೀಡುವುದಾಗಿದೆ.

ಸದ್ಯ ರಾಜ್ಯದಲ್ಲಿ 710 ಆ್ಯಂಬುಲೆನ್ಸ್‌ಗಳಿದ್ದು ಇದನ್ನು 750ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಹಾಗೆಯೇ ಹೊಸದಾಗಿ 350 ಆ್ಯಂಬು

ಲೆನ್ಸ್‌ಗಳ ಖರೀದಿಗೂ ಮುಂದಾಗಿದೆ. ಅಲ್ಲದೆ ಈಗಿರುವ ಆ್ಯಂಬುಲೆನ್ಸ್‌ಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು, ಇವುಗಳಲ್ಲಿ ವಿಶ್ವ ದರ್ಜೆಯ ಸೇವೆ ನೀಡಲು ಮುಂದಾಗಿದೆ. ಅಷ್ಟೇ ಅಲ್ಲ, ಆ್ಯಂಬುಲೆನ್ಸ್‌ ಸೇವೆಯಲ್ಲೂ ವ್ಯಾಪಕ ಮಾರ್ಪಾಡಿಗೆ ಚಿಂತನೆ ನಡೆದಿದ್ದು, ಹತ್ತಿರದಲ್ಲೇ ಇರುವ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವಂಥ ವ್ಯವಸ್ಥೆ ಮಾಡಲಾಗುತ್ತಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಮಾರ್ಗಸೂಚಿ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಒಂದು ಬೇಸಿಕ್‌ ಲೈಫ್ ಸಪೋರ್ಟ್‌ ಇರುವಂಥ ಆ್ಯಂಬುಲೆನ್ಸ್‌ ಇರಬೇಕು. ಹಾಗೆಯೇ ಪ್ರತೀ 5 ಲಕ್ಷ ಜನಸಂಖ್ಯೆಗೆ ಒಂದು ಅಡ್ವಾ

Advertisement

ನ್ಸ್‌ ಡ್‌ ಲೈಫ್ ಸಪೋರ್ಟ್‌ ಇರುವ ಆ್ಯಂಬುಲೆನ್ಸ್‌ ಇರಬೇಕು. ಹಾಗೆಯೇ ಒಂದು ಆ್ಯಂಬುಲೆನ್ಸ್‌ 24 ಗಂಟೆಗಳಲ್ಲಿ 4 ಪ್ರಕರಣಗಳನ್ನು ನಿರ್ವಹಿಸಬೇಕು. ಅಲ್ಲದೆ 120 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸಿದರೆ, ಮತ್ತೂಂದು ಆ್ಯಂಬುಲೆನ್ಸ್‌ ಒದಗಿಸಬೇಕು ಎಂದು ಮಾರ್ಗಸೂಚಿಯೇ ಹೇಳಿದೆ.

ಹೀಗಾಗಿ ಈ ಎಲ್ಲ ಬೇಡಿಕೆಗಳಿಗೆ ಪೂರಕವಾಗಿ ಇನ್ನಷ್ಟು ಆ್ಯಂಬುಲೆನ್ಸ್‌ಗಳನ್ನು ಒದಗಿಸುವುದು ಮತ್ತು ಇರುವ ಆ್ಯಂಬುಲೆನ್ಸ್‌ಗಳನ್ನೇ ಮೇಲ್ಗರ್ಜೆಗೆ ಏರಿಕೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹವಾದ ನಿರ್ಧಾರವೇ ಆಗಿದೆ.

ಕೊರೊನಾ ಮೊದಲ ಮತ್ತು ಮೂರನೇ ಅಲೆಗಿಂತ ಕೊರೊನಾ ಎರಡನೇ ಅಲೆ ವೇಳೆ ರೋಗಿಯ ಜೀವ ಉಳಿಸುವಲ್ಲಿ ಆ್ಯಂಬುಲೆನ್ಸ್‌ ಪಾತ್ರ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅದೆಷ್ಟೋ ಮಂದಿ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಸಿಗದೆ ಮನೆ ಬಾಗಿಲಲ್ಲೇ ಪ್ರಾಣ ಬಿಟ್ಟರು. ಅಲ್ಲದೆ ಕೆಲವರಿಗೆ ಆ್ಯಂಬುಲೆನ್ಸ್‌ ಸಿಕ್ಕರೂ ಆಮ್ಲಜನಕ ವ್ಯವಸ್ಥೆ ಇರುವಂಥ ವಾಹನಗಳು ಸಿಗದೆ ತೊಂದರೆಗೀಡಾದರು. ಹೀಗಾಗಿಯೇ ಸಾವಿನ ಪ್ರಮಾಣವೂ 2ನೇ ಅಲೆ ವೇಳೆ ಹೆಚ್ಚಾಯಿತು.

ಕೊರೊನಾ ಮೊದಲೆರಡು ಅಲೆಗಳು ಎಲ್ಲ ಸರಕಾರಗಳಿಗೆ ಮತ್ತು ಆಸ್ಪತ್ರೆಗಳಿಗೆ ತಕ್ಕ ಪಾಠವನ್ನೇ ಕಲಿಸಿವೆ. ಆಧುನಿಕ ವ್ಯವಸ್ಥೆ ಇಲ್ಲದೇ ಹೋದರೆ ಯಾವ ಮಟ್ಟಿನ ತೊಂದರೆಯಾಗಬಹುದು ಎಂಬುದನ್ನೂ ತಿಳಿಸಿಕೊಟ್ಟಿವೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಂಡು ಈಗಲೇ ಸರಕಾರದ ವತಿಯಿಂದಲೇ ಆ್ಯಂಬುಲೆನ್ಸ್‌ಗಳ ಹೆಚ್ಚಳ ಮತ್ತು ಮೇಲ್ದರ್ಜೆಗೇರಿಸಲು ಮುಂದಾಗಿರುವುದು ಉತ್ತಮವಾದ ತೀರ್ಮಾನವೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next